ಕನ್ನಡದ ಜನಪ್ರಿಯ ಮನರಂಜನಾ ವಾಹಿನಿ ಜೀ಼ ಕನ್ನಡ, ಯುಗಾದಿ ಹಬ್ಬಕ್ಕೆ ಮತ್ತಷ್ಟು ಮೆರಗು ನೀಡಲು ಮುಂದಾಗಿದೆ. ಜೀ಼ ಕುಟುಂಬ ಉತ್ಸವ ವಿಶೇಷ ಕಾರ್ಯಕ್ರಮ ಪ್ರಸಾರ ಮಾಡಲು ಸಜ್ಜಾಗಿದೆ. ಜೀ಼ ಕನ್ನಡದ ಎಲ್ಲಾ ಧಾರಾವಾಹಿಗಳ ಕಲಾವಿದರು ತಮ್ಮ ಮಾತು, ಹಾಸ್ಯ, ನೃತ್ಯ, ಮತ್ತು ಆಟಗಳ ಮೂಲಕ ವೀಕ್ಷಕರನ್ನ ರಂಜಿಸಲು ಮುಂದಾಗಿದ್ದಾರೆ. ಜೀ಼ ಕುಟುಂಬ ಉತ್ಸವದಲ್ಲೂ ಹಲವು ವಿಶೇಷತೆಗಳನ್ನ ಜನರ ಮುಂದಿಡುತ್ತಿದೆ.
ಜೀ ಕನ್ನಡ ವಾಹಿನಿ, ಕನ್ನಡ ಕಿರುತೆರೆ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಮಹಾ ಸಾಹಸಕ್ಕೆ ಕೈ ಹಾಕಿದೆ. ಅದೇ ಮಹಾಪ್ರೋಮೋ.. ಮಹಾಪ್ರೋಮೋ ಸಾಮಾನ್ಯವಾಗಿ ಧಾರಾವಾಹಿಗಳ ಕತೆಯಲ್ಲಿ ನಾಳೆ ಏನಾಗುತ್ತೆ? ಎಂದು ಹಿಂದಿನ ದಿನವೇ ಪ್ರಸಾರವಾಗುತ್ತಿದ್ದ ಪ್ರೋಮೋಗಳಿಂದ ತಿಳಿದುಕೊಳ್ತಿದ್ರು. ಆದ್ರೀಗ ಒಂದು ತಿಂಗಳು ಅಥವಾ ಅದಕ್ಕೂ ಮುಂದೆ, ಕತೆಯ ತಿರುಳು ಯಾವ ದಿಕ್ಕಿಗೆ ಸಾಗುತ್ತೆ? ಎಂದು ತೋರುವ ಪ್ರೋಮೋ ಪ್ರಸಾರ ಆಗಲಿದೆ. ಅದೇ ಈ ಮಹಾ ಪ್ರೋಮೋ. ಈ ಧೈರ್ಯ, ಪ್ರಯತ್ನ ಕನ್ನಡ ಕಿರುತೆರೆಯಲ್ಲಿ ಮೊದಲು ಎನ್ನುತ್ತಿದೆ ಜೀ ಕನ್ನಡ.
ಇದ್ರೊಂದಿಗೆ 35 ವರ್ಷಕ್ಕೂ ಹೆಚ್ಚು ಕಾಲ ಸ್ಯಾಂಡಲ್ವುಡ್ನಲ್ಲಿ ಸೇವೆ ಸಲ್ಲಿಸುತ್ತಿದ್ದು, ಈಗ ಜೀ಼ ಕನ್ನಡದ ಧಾರಾವಾಹಿಗಳಲ್ಲೂ ಮಿಂಚುತ್ತಿರುವ ಹಿರಿಯ ನಟಿಯರಾದ ಪದ್ಮಾ ವಾಸಂತಿ, ಸುಧಾರಾಣಿ, ವಿನಯಾ ಪ್ರಸಾದ್, ವಿಜಯಲಕ್ಷ್ಮೀ ಸಿಂಗ್ ಹಾಗೂ ಈಗ ಹೊಸದಾಗಿ ಜೀ಼ ಕುಟುಂಬಕ್ಕೆ ಸೇರ್ಪಡೆಯಾಗುತ್ತಿರುವ ಉಮಾಶ್ರೀ ಅವರನ್ನ ‘ಜೀ಼ ಶಕ್ತಿ’ ಎಂದು ಪರಿಗಣಿಸಿ ಗೌರವಿಸಲಾಗಿದೆ. ಅಷ್ಟೇ ಅಲ್ಲದೇ, ಜೀ಼ ಕುಟುಂಬಕ್ಕೆ ಹೊಸದಾಗಿ ಸೇರ್ಪಡೆಯಾಗುತ್ತಿರುವ ಹಿಟ್ಲರ್ ಕಲ್ಯಾಣ ಹಾಗೂ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ತಮ್ಮ ಧಾರಾವಾಹಿಯ ಮಾಹಿತಿಯನ್ನು ಜೀ ಉತ್ಸವದಲ್ಲಿ ನೀಡಿದ್ದಾರೆ.
ಈ ಎಲ್ಲಾ ಭರಪೂರ ಮನರಂಜನೆ ಇದೇ ಶನಿವಾರ ಮತ್ತು ಭಾನುವಾರ ಸಂಜೆ 7.30 ರಿಂದ 10.30 ರ ವರೆಗೆ ಎರಡು ಗಂಟೆಗಳ ಕಾಲ ಜೀ಼ ಕನ್ನಡದಲ್ಲಿ ಪ್ರಸಾರವಾಗಲಿದೆ.
ಫೋಟೋ ಕೃಪೆ: ಜೀ ಕನ್ನಡ