ಪೊಗರು, ರಾಬರ್ಟ್ ನಂತ್ರ ಸ್ಯಾಂಡಲ್ವುಡ್ನಲ್ಲಿ ‘ಯುವರತ್ನ’ ಆರ್ಭಟ ಶುರುವಾಗಿದೆ. ರಿಲೀಸ್ ಡೇಟ್ ಹತ್ತಿರವಾದಂತೆ ‘ಯುವರತ್ನ’ ಫೀವರ್ ಹೆಚ್ಚಾಗಿದ್ದು, ಎಲ್ಲೆಡೆ ಸೆಲೆಬ್ರೇಷನ್ ಶುರುವಾಗ್ತಿದೆ. ಈಗಾಗಲೇ ಆನ್ಲೈನ್ನಲ್ಲಿ ಟಿಕೆಟ್ ಬುಕ್ಕಿಂಗ್ ಶುರುವಾಗಿದ್ದು, ಅಭಿಮಾನಿಗಳು ಟಿಕೆಟ್ಗೋಸ್ಕರ ಮುಗಿಬಿದ್ದಿದ್ದಾರೆ. ಕೆಲವೆಡೆ ಸೂರ್ಯ ಹುಟ್ಟುವ ಸಮಯಕ್ಕೆ ತೆರೆಮೇಲೆ ಪವರ್ ಸ್ಟಾರ್ ದರ್ಶನವಾಗಲಿದ್ದು, ಫಸ್ಟ್ ಡೇ ಫಸ್ಟ್ ಶೋ ನೋಡೋಕೆ ಅಭಿಮಾನಿ ದೇವರುಗಳು ಕಾಯ್ತಿದ್ದಾರೆ. ‘ರಾಜಕುಮಾರ’ ಸಕ್ಸಸ್ ನಂತ್ರ ಅದೇ ಕಾಂಬಿನೇಷನ್ನಲ್ಲಿ ಬರ್ತಿರೋ ಆ್ಯಕ್ಷನ್ ಎಂಟರ್ಟೈನ್ಮೆಂಟ್ ಸಿನಿಮಾ ಯುವರತ್ನ. ಸಂತೋಷ್ ಆನಂದ್ ರಾಮ್ ನಿರ್ದೇಶನದ ‘ಯುವರತ್ನ’ ಚಿತ್ರದಲ್ಲಿ ಪುನೀತ್ ರಾಜ್ಕುಮಾರ್ ಕಾಲೇಜ್ ಸ್ಟೂಡೆಂಟ್ ರೋಲ್ನಲ್ಲಿ ಅಬ್ಬರಿಸಿದ್ದಾರೆ. ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದ್ದು, ಮೊದಲ ದಿನವೇ ಸಿನಿಮಾ ನೋಡಲು ಪ್ರೇಕ್ಷಕರು ಸಿದ್ಧತೆ ನಡೆಸಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ಬ್ಯಾನರ್ನಲ್ಲಿ ಬಹಳ ಅದ್ಧೂರಿಯಾಗಿ ‘ಯುವರತ್ನ’ ಸಿನಿಮಾ ನಿರ್ಮಾಣವಾಗಿದೆ. ಸಂತೋಷ್ ಆನಂದ್ ರಾಮ್ ಎಲ್ಲಾ ಕಮರ್ಷಿಯಲ್ ಎಲಿಮೆಂಟ್ಸ್ ಬೆರೆಸಿ ಒಂದು ಕಾಲೇಜ್ ಡ್ರಾಮಾ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಎಂಟರ್ಟೈನ್ಮೆಂಟ್ ಜೊತೆಗೆ ಒಂದೊಳ್ಳೆ ಸಂದೇಶವನ್ನು ‘ಯುವರತ್ನ’ ಚಿತ್ರದ ಮೂಲಕ ಹೇಳಲಾಗ್ತಿದೆ. ಪ್ರಕಾಶ್ ರೈ, ಡಾಲಿ ಧನಂಜಯ, ಸುಧಾರಾಣಿ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಚಿತ್ರದಲ್ಲಿ ಪುನೀತ್ ರಾಜ್ಕುಮಾರ್ ಜೋಡಿಯಾಗಿ ಸಾಯೇಷಾ ಮಿಂಚಿದ್ದಾರೆ. ಎಸ್. ತಮನ್ ಮ್ಯೂಸಿಕ್ ಮಾಡಿರೋ ‘ಯುವರತ್ನ’ ಸಾಂಗ್ಸ್ ಸೂಪರ್ ಹಿಟ್ ಆಗಿದೆ. ಆನ್ಲೈನ್ ಟಿಕೆಟ್ ಬುಕ್ಕಿಂಗ್ಗೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದ್ದು, ಈಗಾಗಲೇ ಸಾಕಷ್ಟು ಶೋಗಳ ಟಿಕೆಟ್ಸ್ ಸೋಲ್ಡ್ಔಟ್ ಆಗಿದೆ. ಕಮಲಾನಗರದ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಬೆಳಗ್ಗೆ 5.30ಕ್ಕೆ, ಜೆಪಿ ನಗರದ ಸಿದ್ದೇಶ್ವರ, ರಾರಾಜಿನಗರದ ನವರಂಗ್ ಚಿತ್ರಮಂದಿರದಲ್ಲಿ ಬೆಳಗ್ಗೆ 6.30ಕ್ಕೆ ಮೊದಲ ಪ್ರದರ್ಶನ ಶುರುವಾಗಲಿದೆ. ಮತ್ತಷ್ಟು ಥಿಯೇಟರ್ಗಳಲ್ಲಿ ಅರ್ಲಿ ಮಾರ್ನಿಂಗ್ ಶೋಗೆ ಪ್ಲಾನ್ ಮಾಡ್ತಿದ್ದು, ಶೀಘ್ರದಲ್ಲೇ ಮಾಹಿತಿ ಸಿಗಲಿದೆ.
‘ಯುವರತ್ನ’ ಸಿನಿಮಾ ಕನ್ನಡ ಮಾತ್ರವಲ್ಲದೇ ತೆಲುಗಿನಲ್ಲೂ ರಿಲೀಸ್ ಆಗ್ತಿದ್ದು, ಅಲ್ಲಿಯೂ ಭರ್ಜರಿ ಪ್ರಚಾರ ಮಾಡಿ ಬಂದಿದೆ ಚಿತ್ರತಂಡ. ಆಂಧ್ರ, ತೆಲಂಗಾಣದಲ್ಲೂ ದೊಡ್ಡಮಟ್ಟದಲ್ಲಿ ಸಿನಿಮಾ ಬಿಡುಗಡೆಗೆ ಪ್ರಯತ್ನ ನಡೀತಿದೆ. ಈಗಾಗಲೇ ಥಿಯೇಟರ್ಗಳ ಮುಂದೆ ‘ಯುವರತ್ನ’ ಪುನೀತ್ ರಾಜ್ಕುಮಾರ್ ಕಟೌಟ್ಗಳು ಎದ್ದು ನಿಲ್ತಿದ್ದು, ಗುರುವಾರ ನಿಜವಾದ ಹಬ್ಬ ಶುರುವಾಗಲಿದೆ. ಕೊರೋನಾ 2ನೇ ಅಲೆಯ ಆತಂಕದ ನಡುವೆಯೂ ಚಿತ್ರವನ್ನ ದೊಡ್ಡಮಟ್ಟದಲ್ಲಿ ರಿಲೀಸ್ ಮಾಡಲಾಗ್ತಿದೆ