ಕೊರೊನಾ 2ನೇ ಅಲೆ ಕರ್ನಾಟಕದಲ್ಲೂ ಹೆಚ್ಚಾಗಿದ್ದರಿಂದ ರಾಜ್ಯ ಸರ್ಕಾರ ಕಠಿಣ ನಿಯಮಗಳನ್ನ ರೂಪಿಸಿದೆ. ಇದ್ರಲ್ಲಿ ರಾಜ್ಯದ 8 ಜಿಲ್ಲೆಗಳ ಸಿನಿಮಾ ಹಾಲ್ಗಳಲ್ಲಿ ಶೇ. 50ರಷ್ಟು ಸೀಟು ಭರ್ತಿಗೆ ಮಾತ್ರ ಅವಕಾಶ ನೀಡಿದೆ. ಹೀಗಾಗಿ ಎರಡು ದಿನಗಳ ಹಿಂದಷ್ಟೇ ರಿಲೀಸ್ ಆಗಿರೋ ಯುವರತ್ನ ಕಲೆಕ್ಷನ್ ಮೇಲೆ ಏಟು ಬೀಳಲಿದ್ದು, ಪುನೀತ್ ರಾಜ್ಕುಮಾರ್ ಆಕ್ರೋಶ ಹೊರ ಹಾಕಿದ್ದಾರೆ.
ಕೆಲವು ದಿನಗಳ ಹಿಂದೆ ರಾಜ್ಯ ಸರ್ಕಾರವೇ ಥಿಯೇಟರ್ಗಳಲ್ಲಿ ಶೇ. 50 ರಷ್ಟು ಆಸನ ವ್ಯವಸ್ಥೆ ಮಾಡುವ ಯಾವುದೇ ಇರಾದೆ ಇಲ್ಲವೆಂದು ಹೇಳಿದ್ದರು. ಹೀಗಾಗಿ ಏಪ್ರಿಲ್ 01ರಂದು ಯುವರತ್ನ ಸಿನಿಮಾವನ್ನ ಬಿಡುಗಡೆ ಮಾಡಿದ್ದೆವು. ಒಂದು ವೇಳೆ ಸರ್ಕಾರ ಒಂದು ಮುಂಚೆ ಮಾಹಿತಿ ನೀಡಿದ್ದರೂ ಸಿನಿಮಾ ರಿಲೀಸ್ ಮಾಡೋದನ್ನ ಪೋಸ್ಟ್ ಪೋನ್ ಮಾಡುತ್ತಿದ್ದೆವು ಎಂದು ಪುನೀತ್ ರಾಜ್ಕುಮಾರ್ ಬೇಸರ ಹೊರಹಾಕಿದ್ದಾರೆ. ಅಪ್ಪು ಹೇಳಿಕೆ ನೀಡುತ್ತಿದ್ದಂತೆ ಅಭಿಮಾನಿಗಳು 100 ಪರ್ಸೆಂಟ್ ಸೀಟು ಭರ್ತಿಗೆ ಮನವಿ ಮಾಡುತ್ತಿದ್ದಾರೆ.
ಯುವರತ್ನ ಬಿಗ್ ಬಜೆಟ್ ಸಿನಿಮಾ. ಒಂದೆರಡು ದಿನಗಳಲ್ಲಿ ಹಾಕಿದ ಬಂಡವಾಳವನ್ನ ರಿಕವರಿ ಮಾಡೋಕೆ ಆಗೋದಿಲ್ಲ. ಅದ್ರಲ್ಲೂ ಶೇ.50ರಷ್ಟು ಸೀಟು ಭರ್ತಿಗೆ ಅವಕಾಶ ನೀಡಿದ್ರೆ, ನಿರ್ಮಾಪಕರಿಗೆ ತುಂಬಲಾರದಷ್ಟು ನಷ್ಟ ಆಗುತ್ತೆ. ಹೀಗಾಗಿ ಶೇ.100ರಷ್ಟು ಸೀಟು ಭರ್ತಿಗೆ ಅವಕಾಶ ಕೊಡಬೇಕು ಎಂದು ಪುನೀತ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಈಗತಾನೇ ಚಿರುತ್ತಿರುವ ಕನ್ನಡ ಚಿತ್ರರಂಗಕ್ಕೆ ರಾಜ್ಯ ಸರ್ಕಾರ ಶಾಕ್ ಕೊಟ್ಟಿರೋದಂತೂ ನಿಜ. ಹಾಗಂತ ಹೆಚ್ಚಾಗ್ತಿರೋ ಕೊರೊನಾ ಸಂಖ್ಯೆಗೆ ಇಂತಹದ್ದೊಂದು ಕಠಿಣ ನಿರ್ಧಾರ ಬರೋದೂ ಅನಿವಾರ್ಯ. ಆದ್ರೆ, ಚಿತ್ರರಂಗಕ್ಕೆ ಮುಂಚಿತವಾಗಿ ಮಾಹಿತಿ ನೀಡಿ ಈ ನಿಯಮ ತಂದಿದ್ದರೆ, ಯಾರಿಗೂ ನಷ್ಟ ಆಗುತ್ತಿರಲಿಲ್ಲ ಎಂಬುದು ಪವರ್ ಸ್ಟಾರ್ ಅಭಿಪ್ರಾಯ.