‘ಯುವರತ್ನ’ ಪುನೀತ್ ರಾಜ್ಕುಮಾರ್ ಆರ್ಭಟಕ್ಕೆ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗೋಗಿದ್ದಾರೆ. ಬೆಳ್ಳಂಬೆಳಗ್ಗೆ ರಾಜ್ಯದ ಹಲವೆಡೆ ಮೊದಲ ಪ್ರದರ್ಶನ ಶುರುವಾಗಿದ್ದು, ಅಭಿಮಾನಿಗಳು ಯುವರತ್ನನನ್ನ ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ. ರಾಜ್ಯದ 400 ಥಿಯೇಟರ್ ಸೇರಿದಂತೆ ವಿಶ್ವದಾದ್ಯಂತ 800ಕ್ಕೂ ಅಧಿಕ ಸ್ಕ್ರೀನ್ಗಳಲ್ಲಿ ಸಿನಿಮಾ ರಿಲೀಸ್ ಆಗಿದೆ. ಸಂತೋಷ್ ಆನಂದ್ ರಾಮ್ ನಿರ್ದೇಶನ ಪವರ್ ಸ್ಟಾರ್ ಪವರ್ಫುಲ್ ಪರ್ಫಾರ್ಮೆನ್ಸ್ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಥಿಯೇಟರ್ಗಳಲ್ಲಿ ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಕಟೌಟ್ ನಿಲ್ಲಿಸಿ, ಹೂವಿನ ಅಲಂಕಾರ ಮಾಡಿ ಪಟಾಕಿ ಸಿಡಿಸಿ ಜೈಕಾರ ಹಾಕಿ ಕುಣಿದು ಕುಪ್ಪಳಿಸುತ್ತಿದ್ದಾರೆ. ಗೌಡನಪಾಳ್ಯದ ಶ್ರೀನಿವಾಸ ಚಿತ್ರಮಂದಿರದಲ್ಲಿ ಯುವರತ್ನ ಎಂಟ್ರಿ ಸೀನ್ಗೆ ಸಿಲ್ವರ್ ಸ್ಕ್ರೀನ್ ಮುಂದೆ ಹೂಕುಂಡ ಹಚ್ಚಿ ಅಭಿಮಾನಿಗಳು ನೆಕ್ಸ್ಟ್ ಲೆವೆಲ್ ಸೆಲೆಬ್ರೇಷನ್ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಇವತ್ತು ಯುವರತ್ನ ಚಿತ್ರದ 650ಕ್ಕೂ ಅಧಿಕ ಶೋಗಳನ್ನ ಹಾಕಲಾಗಿದೆ. ಇನ್ನು ಮೈಸೂರಿನಲ್ಲಿ 100ಕ್ಕೂ ಅಧಿಕ ಶೋಗಳು ಹಾಕಿರುವ ಮಾಹಿತಿ ಇದೆ. ಒಟ್ನಲ್ಲಿ ಮೊದಲ ದಿನ ಥಿಯೇಟರ್ಗಳಲ್ಲಿ ಯುವರತ್ನನ ದರ್ಬಾರ್ ಸಿಕ್ಕಾಪಟ್ಟೆ ಜೋರಾಗಿದೆ. ತಾವರೆಕೆರೆಯ ಬಾಲಾಜಿ, ಜೆಪಿ ನಗರದ ಸಿದ್ಧೇಶ್ವರ ಮತ್ತು ಸಿದ್ಧಲಿಂಗೇಶ್ವರ, ಗೌಡನಪಾಳ್ಯದ ಶ್ರೀನಿವಾಸ, ಸಂಜಯ ನಗರದ ವೈಭವ್, ಮಾಗಡಿ ರಸ್ತೆಯ ವೀರೇಶ್ ಸೇರಿದಂತೆ ಸಾಕಷ್ಟು ಚಿತ್ರಮಂದಿರಗಳಲ್ಲಿ ಮುಂಜಾನೆ 6 ಗಂಟೆಗೆ ಯುವರತ್ನ ಮೊದಲ ಪ್ರದರ್ಶನ ಮುಗಿದಿದೆ. ‘ಯುವ ಸಂಭ್ರಮ’ ಹೆಸರಿನಲ್ಲಿ ಚಿತ್ರತಂಡ ರಾಜ್ಯಾದ್ಯಂತ ಪ್ರವಾಸ ಮಾಡಿ ಪ್ರಚಾರ ಮಾಡಿದ್ದು ಚಿತ್ರಕ್ಕೆ ಪ್ಲಸ್ ಆಗಿದೆ. ರಾಜ್ಯದ ಮೂಲೆ ಮೂಲೆಯಲ್ಲೂ ಯುವರತ್ನ ಕ್ರೇಜ್ ಜೋರಾಗಿದೆ. ಇನ್ನು ಟ್ವಿಟರ್ನಲ್ಲಿ ಯುವರತ್ನ ಟ್ರೆಂಡಿಂಗ್ನಲ್ಲಿದ್ದಾನೆ. ಸಿನಿಮಾ ರಿಲೀಸ್ ಸಂಭ್ರಮದಲ್ಲಿ ಅಭಿಮಾನಿಗಳು ಯುವರತ್ನ ಹ್ಯಾಶ್ಟ್ಯಾಗ್ನ ಟ್ರೆಂಡ್ ಮಾಡಿದ್ದಾರೆ.
ಅಮೇರಿಕಾದ ಕೆಲವೆಡೆ ನಿನ್ನೆಯೇ ಯುವರತ್ನ ಸಿನಿಮಾ ಪ್ರೀಮಿಯರ್ ಆಗಿದೆ. ಪುನೀತ್ ರಾಜ್ಕುಮಾರ್ಗೆ ವಿದೇಶದಲ್ಲೂ ದೊಡ್ಡ ಫ್ಯಾನ್ ಫಾಲೋಯಿಂಗ್ ಇದ್ದು, ಅದಕ್ಕೆ ತಕ್ಕಂತೆ ಅಮೇರಿಕಾ, ದುಬೈ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ನಲ್ಲಿ ಸಿನಿಮಾ ರಿಲೀಸ್ ಮಾಡಲಾಗಿದೆ. ಎಲ್ಲಾ ಕಡೆ ಬೊಂಬಾಟ್ ರೆಸ್ಪಾನ್ಸ್ ಸಿಕ್ತಿದೆ. ಯುವರತ್ನ ಬ್ಲಾಕ್ಬಸ್ಟರ್ ಹಿಟ್ ಅನ್ನೋ ಮಾತುಗಳು ಕೇಳಿಬರ್ತಿದೆ. 100 ಕೋಟಿ ಕ್ಲಬ್ ಸೇರೋದಲ್ಲೇ ಡೌಟೇಯಿಲ್ಲ ಅಂತ ಅಭಿಮಾನಿಗಳು ಖುಷಿಪಡ್ತಿದ್ದಾರೆ. ಇನ್ನು ಪುನೀತ್ ರಾಜ್ಕುಮಾರ್ ಚಿತ್ರಗಳಿಗೆ ಫ್ಯಾಮಿಲಿ ಆಡಿಯೆನ್ಸ್ ಹೆಚ್ಚು ಬರೋದ್ರಿಂದ ಮುಂದಿನ ದಿನಗಳಲ್ಲಿ ಅಪ್ಪು ದರ್ಬಾರ್ ಮತ್ತಷ್ಟು ಹೆಚ್ಚಾಗಲಿದೆ.