ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗ್ತಿದೆ. ಯುವಕನೊಬ್ಬ ತನ್ನ ಗರ್ಲ್ಫ್ರೆಂಡ್ ಜೊತೆ ಬ್ಯುಸಿಯಾಗಿರೋ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ. ಈ ವೇಳೆ ದಿಢೀರನೇ ಆತನ ಬ್ಯಾಗ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಹೌಹಾರಿದ ಯುವಕ ಕುತ್ತಿಗೆಗೆ ನೇತಾಕಿಕೊಂಡಿದ್ದ ಬ್ಯಾಗ್ ಅನ್ನ ಕಿತ್ತೆಸೆದು ಬಜಾವ್ ಆಗಿದ್ದಾನೆ. ಅಷ್ಟಕ್ಕೂ ಆ ಬ್ಯಾಗ್ನಲ್ಲಿ ಅಂತಹದ್ದೇನಿತ್ತು? ಇದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದ್ದೇಕೆ? ಅಂತ ತಿಳಿಯುವ ಮುನ್ನ ಈ ವಿಡಿಯೋವನ್ನೊಮ್ಮೆ ನೋಡಿ
ಅಂದ್ಹಾಗೆ ಇದು ಚೀನಾದಲ್ಲಿ ನಡೆದ ಘಟನೆ. ಯುವಕನ ಬ್ಯಾಗ್ನಲ್ಲಿ ಬೆಂಕಿ ಕಾಣಿಸಿಕೊಳ್ಳುವಂತಹದ್ದೇನಿತ್ತು ಅನ್ನೋ ಪ್ರಶ್ನೆ ಹುಟ್ಟೋದು ಸಹಜ. ಐದು ವರ್ಷ ಹಳೆಯ ಫೋನ್ ಅನ್ನ ಬ್ಯಾಗ್ನಲ್ಲಿ ಇಟ್ಕೊಂಡಿದ್ದ. ಕಳೆದ ಹಲವು ದಿನಗಳಿಂದ ಈ ಪೋನ್ನ ಬ್ಯಾಟರಿ ಸಮಸ್ಯೆಯಿತ್ತು. ಆದ್ರೂ, ಆ ಯುವಕ ಆ ಫೋನ್ ಅನ್ನೇ ಬಳಸುತ್ತಿದ್ದ. ಕೊನೆಗೂ ಬ್ಯಾಟರಿ ಬ್ಲ್ಯಾಸ್ಟ್ ಆಗಿ ಬ್ಯಾಗ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪ್ರಕಾರ, ಯುವಕ 2016ರಲ್ಲಿ ಆ ಫೋನ್ ಅನ್ನ ಕೊಂಡುಕೊಂಡಿದ್ದ. ರಸ್ತೆಯಲ್ಲಿ ನಡ್ಕೊಂಡು ಹೋಗುವಾಗ ಯುವಕನಿಗೆ ಮೊದಲು ಶಬ್ಧ ಕೇಳಿಸಿದೆ. ಬಳಿಕ ಬ್ಯಾಗ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬ್ಯಾಗ್ ಅನ್ನ ಕುತ್ತಿಗೆಗೆ ಹಾಕಿಕೊಂಡಿದ್ದರಿಂದ ಆತನ ಎದೆಯ ಎಡಭಾಗ ಹಾಗೂ ಹಣೆ ಚಿಕ್ಕ–ಪುಟ್ಟ ಸುಟ್ಟ ಗಾಯಗಳಾಗಿವೆ. ಆದ್ರೆ, ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ನೋಡಿ ಒಂದೊಂದು ಕಮೆಂಟ್ಸ್ ಮಾಡುತ್ತಿದ್ದಾರೆ.