ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಯಾವುದು? ಇದು ಇಂದು ನಿನ್ನೆಯ ಪ್ರಶ್ನೆಯಲ್ಲ. ಯಶ್ ಕೆಜಿಎಫ್ ಚಾಪ್ಟರ್ 2 ಚಿತ್ರದ ಚಿತ್ರೀಕರಣ ಮುಗಿಸಿದ್ದಲ್ಲಿಂದ ಕಾಡ್ತಿರೋ ಪ್ರಶ್ನೆ. ಇದೇ ಚಿತ್ರ ನಿರ್ದೇಶಕ ಪ್ರಶಾಂತ್ ನೀಲ್ ಎರಡೆರಡು ಸಿನಿಮಾ ಬ್ಯಸಿಯಾಗಿರುವಾಗ್ಲೇ ಯಶ್ ಮಾತ್ರ ಇನ್ನೂ ತಮ್ಮ ಮುಂದಿನ ಸಿನಿಮಾ ಅನೌನ್ಸ್ ಮಾಡಿಲ್ಲವೇಕೆ? ಅನ್ನೋದು ಅವರ ಅಭಿಮಾನಿಗಳನ್ನು ಇನ್ನಿಲ್ಲದಂತೆ ಕಾಡುತ್ತಿರೋ ಪ್ರಶ್ನೆ. ಇನ್ನೊಂದ್ಕಡೆ ಮುಂದಿನವನ್ನ ಮಫ್ತಿ ನಿರ್ದೇಶಕ ನರ್ತನ್ ಮಾಡ್ತಾರೆ ಎನ್ನಲಾಗಿತ್ತು. ಆದ್ರೀಗ ಮತ್ತೆ ಪುರಿ ಜಗನ್ನಾಥ್ ಹೆಸರು ಹರಿದಾಡ್ತಿದೆ.
ಮಫ್ತಿ ಚಿತ್ರದ ನಿರ್ದೇಶಕ ನರ್ತನ್ ಯಶ್ಗಾಗಿ ಕಳೆದ ಒಂದೂವರೆ ವರ್ಷದಿಂದ ಕಥೆ ಹೆಣೆಯುತ್ತಿದ್ದಾರೆ. ಈಗಾಗ್ಲೇ ಕೊಲ್ಕತ್ತಾ ಹಾಗೂ ಇನ್ನಿತರ ಕಡೆಗಳಲ್ಲಿ ಲೋಕೇಶನ್ ಕೂಡ ನೋಡಿ ಬಂದಿದ್ದಾರೆ. ಲಾಕ್ಡೌನ್ ಮುಗೀತಿದ್ದಂತೆ ಈ ಸಿನಿಮಾ ಅನೌನ್ಸ್ ಆಗ್ಬಹುದು ಅನ್ನೋ ನಿರೀಕ್ಷೆಯಿತ್ತು. ಆದ್ರೀಗ, ಪುರಿ ಜಗನ್ನಾಥ್ ನಿರ್ದೇಶನ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ.
ಯಶ್ಗಾಗಿ ಪುರಿ ಜಗನ್ನಾಥ್ ಪೊಲಿಟಿಕಲ್ ಡ್ರಾಮ ತೋರಿಸಲು ಸಜ್ಜಾಗುತ್ತಿದ್ದಾರಂತೆ. ಈ ಸಿನಿಮಾ ಕೇವಲ ಕನ್ನಡ, ತೆಲುಗು ಅಷ್ಟೇ ಅಲ್ಲ ಐದಕ್ಕೂ ಹೆಚ್ಚು ಭಾಷೆಗಳಲ್ಲಿ ಬಿಡುಗಡೆ ತಯಾರಿ ನಡೆಸುತ್ತಿದ್ದಾರೆ ಅನ್ನೋ ಮಾತು ಕೇಳಿಬರ್ತಿದೆ.
ಪುರಿಜಗನ್ನಾಥ್ ಸದ್ಯ ವಿಜಯ್ ದೇವರಕೊಂಡ ಜೊತೆ ಲೈಗರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಕೊರೊನಾ, ಲಾಕ್ಡೌನ್ ಹಿನ್ನೆಲೆಯಲ್ಲಿ ಲೈಗರ್ ಶೂಟಿಂಗ್ ನಿಂತಿದ್ದು, ಆದಷ್ಟು ಬೇಗ ಈ ಚಿತ್ರದ ಶೂಟಿಂಗ್ ಮುಗಿಸಿ ಯಶ್ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ.