ಯಶ್ ಹಾಗೂ ರಾಧಿಕಾ ಪಂಡಿತ್ ಹೊಸ ಮನೆ ಗೃಹಪ್ರವೇಶ ನೆರವೇರಿದೆ. ಬೆಂಗಳೂರಿನ ಪ್ರೆಸ್ಟೀಜ್ ಗಾಲ್ಫ್ ಅಪಾರ್ಟ್ಮೆಂಟ್ನಲ್ಲಿ ಕೆಜಿಎಫ್ ನಟ ಯಶ್ ಹೊಸ ಮನೆ ಖರೀದಿ ಮಾಡಿದ್ದರು.
ಜುಲೈ ಒಂದರಂದು ಯಶ್ ಹಾಗೂ ರಾಧಿಕಾ ಪಂಡಿತ್ ಹೊಸ ಮನೆಯ ಗೃಹಪ್ರವೇಶ ಸರಳವಾಗಿ ಕೇವಲ ಆಪ್ತರ ಸಮ್ಮುಖದಲ್ಲಿ ನೆರವೇರಿದೆ.
ರಾಧಿಕಾ ಕೇಸರಿ ಬಣ್ಣದ ಸೀರೆಯುಟ್ಟು ಕಂಗೊಳಿಸುತ್ತಿದ್ದರೆ, ಯಶ್ ರೇಷ್ಮೆ ಪಂಚೆ ಕೇಸರಿ ಬಣ್ಣ ರೇಷ್ಮೆ ಶರ್ಟ್ ಧರಿಸಿದ್ದರು.
ಕೆಜಿಎಫ್ ಶೂಟಿಂಗ್ ಮುಗಿದಿದ್ರೂ, ಇನ್ನೂ ಗಡ್ಡಕ್ಕೆ ಹಾಕದೆ ಇರೋದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ. ಮುಂದಿನ ಸಿನಿಮಾದಲ್ಲೂ ಇದೇ ಗೆಟಪ್ನಲ್ಲಿ ಇರ್ತಾರಾ ಅನ್ನೋ ಅನುಮಾನ ಕಾಡುತ್ತಿದೆ.
ಇನ್ನು ಕೆಜಿಎಫ್ 2 ಇದೇ ತಿಂಗಳ 16ಕ್ಕೆ ತೆರೆಗೆ ಬರ್ಬೇಕಿತ್ತು. ಆದ್ರೆ, ಕೊರೊನಾ ಮೂರುನೇ ಅಲೆ ಹಿನ್ನೆಲೆ ಹಾಗೂ ಥಿಯೇಟರ್ಗಳು ಓಪನ್ ಆಗಿದೆ ಇರೋದ್ರಿಂದ ಬಿಡುಗಡೆ ದಿನವನ್ನು ಮುಂದೂಡಲಾಗಿದೆ.
ಕೆಲವು ಮೂಲಗಳ ಪ್ರಕಾರ ಸೆಪ್ಟೆಂಬರ್ 9ರಂದು ಗಣೇಶನ ಹಬ್ಬಕ್ಕೆ ಬಿಡುಗಡೆ ಮಾಡಲು ಚಿಂತಿಸಿದ್ದಾರೆ ಎನ್ನಲಾಗಿದೆ.
ಇನ್ನೊಂದ್ಕಡೆ ಕೆಜಿಎಫ್ 2 ಸೆಪ್ಟೆಂಬರ್ಗೂ ಬಿಡುಗಡೆಯಾಗೋದು ಅನುಮಾನ. ಯಶ್ ಲಕ್ಕಿ ತಿಂಗಳು ಡಿಸೆಂಬರ್ನಲ್ಲಿ ಕ್ರಿಸ್ಮಸ್ಗೆ ರಿಲೀಸ್ ಆಗಲಿದೆ ಅನ್ನೋ ಮಾತು ಕೇಳಿ ಬರ್ತಿವೆ.