ನಟ ಯಶ್ ಮತ್ತು ಪತ್ನಿ ರಾಧಿಕಾ ಪಂಡಿತ್ ದಂಪತಿ ಹೊಸ ಮನೆ ಗೃಹಪ್ರವೇಶ ಮಾಡಿ, ಬಲಗಾಲಿಟ್ಟು ಕನಸಿನ ಮನೆ ಪ್ರವೇಶಿಸಿದ್ದಾರೆ. ಮೊದಲು ಕತ್ರಿಗುಪ್ಪೆ ಬಾಡಿಗೆ ಮನೆಯಲ್ಲಿದ್ದ ಯಶ್, ನಂತರ ಹೊಸಕೆರೆ ಹಳ್ಳಿಯ ಮನೆಗೆ ಶಿಫ್ಟ್ ಆಗಿದ್ದರು. ಹಳೇ ಮನೆಯನ್ನೇ ರಿನೋವೇಷನ್ ಮಾಡಿಸಿಕೊಂಡು ಹೋಗಿದ್ದರು. ಅಪ್ಪ- ಅಮ್ಮ ಹೊಸಕೆರೆ ಹಳ್ಳಿ ಮನೆಯಲ್ಲಿ ನೆಲೆಸಿದ್ರು, ಇತ್ತೀಚಿನ ವರ್ಷಗಳಲ್ಲಿ ರಾಕಿಂಗ್ ಸ್ಟಾರ್ ಹೆಚ್ಚು ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲೇ ಉಳಿದುಕೊಳ್ಳುತ್ತಿದ್ದರು. ಅಲ್ಲೇ ಮೀಟಿಂಗ್, ಸಿನಿಮಾ ಡಿಸ್ಕಷನ್ ಎಲ್ಲವೂ ನಡೀತಿತ್ತು. 2019ರಲ್ಲಿ ವಿಂಡ್ಸರ್ ಮ್ಯಾನರ್ ಬಳಿ ಇರೋ ಪ್ರೆಸ್ಟಿಜ್ ಅಪಾರ್ಟಮೆಂಟ್ ನಲ್ಲಿ ಯಶ್ ಫ್ಲ್ಯಾಟ್ ಖರೀದಿಸಿದ್ದರು. ಆದರೆ ಆ ಫ್ಲ್ಯಾಟ್ ನಲ್ಲಿ ತಮಗೆ ಬೇಕಾದಂತೆ ಇಂಟೀರಿಯಲ್ ಮಾಡಿಸಲು ಇಷ್ಟು ತಡವಾಗಿದೆ.
ಫ್ಲ್ಯಾಟ್ ಇಂಟೀರಿಯಲ್ ಗಾಗಿ ಯಶ್ ಚೀನಾ ಪ್ರವಾಸ ಕೈಕೊಂಡು, ಶಾಪಿಂಗ್ ಮಾಡಿ ಬಂದಿದ್ದರು. ಅದನ್ನೆಲ್ಲಾ ತರಿಸಿ, ಅಳವಡಿಸಲು ತಡವಾಗಿದೆ. ಪದೇ ಪದೇ ಲಾಕ್ಡೌನ್ ಘೋಷಣೆಯಾಗಿ ಇಷ್ಟೊಂದು ತಡವಾಗಿ ಗೃಹಪ್ರವೇಶ ನೆರವೇರಿಸಿದ್ದಾರೆ. ಈಗಾಗಲೇ ಹಾಸನದಲ್ಲಿ ಫಾರ್ಮ್ ಹೌಸ್ ನಿರ್ಮಿಸಿರುವ ಯಶ್ ಇದೀಗ ಬೆಂಗಳೂರಿನಲ್ಲಿ ಐಷಾರಾಮಿ ಫ್ಲ್ಯಾಟ್ ಖರೀದಿಸಿದ್ದಾರೆ.
ಆಶಾಢ ಮಾಸ ಹತ್ತಿರವಾಗುತ್ತಿರುವ ಕಾರಣ ರಾಧಿಕಾ ಹಾಗೂ ಯಶ್ ಇಂದು ಸರಳವಾಗಿ ತಮ್ಮ ಫ್ಲ್ಯಾಟ್ ನಲ್ಲಿ ಪೂಜೆ ನೆರವೇರಿಸಿ ಗೃಹಪ್ರವೇಶ ಶಾಸ್ತ್ರ ಮಾಡಿದ್ದಾರೆ. ಕೊರೋನಾ ಆತಂಕದ ಹಿನ್ನಲೆಯಲ್ಲಿ ಕೆಲವೇ ಆಪ್ತರು ಯಶ್ ಪ್ರೆಸ್ಟೀಜ್ ಫ್ಲ್ಯಾಟ್ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇತ್ತೀಚೆಗೆ ಕೆಜಿಎಫ್ ಚಾಪ್ಟರ್- 2 ಡಬ್ಬಿಂಗ್ ನಲ್ಲಿ ಬ್ಯುಸಿಯಾಗಿದ್ದ ಯಶ್, ಸಿನಿಮಾ ರಿಲೀಸ್ ಗಾಗಿ ಎದುರು ನೋಡುತ್ತಿದ್ದಾರೆ.