ಸ್ಯಾಂಡಲ್ವುಡ್ ಮಂದಿಗೆ ಲಾಕ್ಡೌನ್ ದೊಡ್ಡ ತಲೆನೋವಾಗಿದೆ. ಇನ್ನೇನು ಚಿತ್ರರಂಗ ನಿಧಾನವಾಗಿ ಚೇತರಿಕೆಕಾಣುತ್ತಿದೆ ಅನ್ನುವಾಗಲೇ ಮತ್ತೆ ಲಾಕ್ಡೌನ್ ಘೋಷಣೆಯಾಗಿದೆ. ಥಿಯೇಟರ್ಗಳನ್ನು ಮುಚ್ಚಲಾಗಿದೆ. ಲಾಕ್ಡೌನ್ ಓಪನ್ ಆಗಿದ್ರೂ, ಚಿತ್ರಮಂದಿರಗಳನ್ನ ತೆರೆಯೋ ಬಗ್ಗೆ ಸರ್ಕಾರ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಹೀಗಾಗಿ ರಾಕಿಂಗ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಅಂದ್ಕೊಂಡಂತೆ ಜುಲೈ 16ರಂದೇ ರಿಲೀಸ್ ಆಗುತ್ತಾ? ಇಲ್ಲಾ ಮುಂದಕ್ಕೆ ಹೋಗುತ್ತಾ? ಅನ್ನೋ ಗೊಂದಲವಂತೂ ಇದ್ದೇ ಇದೆ. ಸದ್ಯ ಕೆಜಿಎಫ್ ಚಾಪ್ಟರ್ 2 ಬಿಡುಗಡೆ ಬಗ್ಗೆ ಸುದ್ದಿಯೊಂದು ಹೊರಬಿದ್ದಿದೆ.
ಲಾಕ್ಡೌನ್ ಸಡಿಲಗೊಳಿಸಿ, ಚಿತ್ರಮಂದಿರಗಳು ಓಪನ್ ಆದ್ರೂ ಚಿತ್ರಮಂದಿರಕ್ಕೆ ಜನರು ಬರ್ತಾರೆ ಅನ್ನೋದು ಅನುಮಾನ. ಹೀಗಾಗಿ ಕೆಜಿಎಫ್ 2 ಬಿಡುಗಡೆಯನ್ನು ಮುಂದೂಡುತ್ತಾ ಅನ್ನೋ ಅನುಮಾವಂತೂ ಕಾಡುತ್ತಲೇ ಇದೆ. ಈ ಗೊಂದಲಕ್ಕೆ ವಿಶ್ಲೇಷಕ ಕೌಶಿಕ್ ಎಲ್ಎಂ ಕೆಜಿಎಫ್ 2 ಬಿಡುಗಡೆಯ ಮಾಹಿತಿ ಹಂಚಿಕೊಂಡಿದ್ದಾರೆ.
‘‘ಯಶ್ ಅವರ ಕೆಜಿಎಫ್ 2 ಸಿನಿಮಾದ ಬಹುತೇಕ ಪೋಸ್ಟ್ ಪ್ರೊಡಕ್ಷನ್ ಚಿತ್ರೀಕರಣ ಮುಗಿದಿದೆ. ದೇಶಾದ್ಯಂತ ಚಿತ್ರಮಂದಿರ ಓಪನ್ ಆಗುವುದನ್ನು ಗಮನಿಸಿ ಬಿಡುಗಡೆ ದಿನಾಂಕವನ್ನು ನಿಗದಿಪಡಿಸಲಾಗುತ್ತೆ. ಇದೊಂದು ಅತೀ ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾ ಆಗಿರೋದ್ರಿಂದ, ದೇಶಾದ್ಯಂತ ಪರಿಸ್ಥಿತಿ ಹೇಗಿದೆ ಅನ್ನೋದನ್ನು ನೋಡಿ ತೀರ್ಮಾನ ಕೈಗೊಳ್ಳಿದೆ’’ ಎಂದು ಕೌಶಿಕ್ ಟ್ವೀಟ್ ಮಾಡಿದ್ದಾರೆ.
ಈ ಟ್ವೀಟ್ ನೋಡಿದ್ಮೇಲೆ ಯಶ್ ಅಭಿಮಾನಿಗಳಿಗೆ ಸಿನಿಮಾ ಬಿಡುಗಡೆ ಜುಲೈ 16ಕ್ಕೆ ಆಗುತ್ತಾ? ಅನ್ನು ಅನುಮಾನ ಕಾಡೋದಂತೂ ಸತ್ಯ. ಕೊರೊನಾ ಎರಡನೇ ಅಲೆ ಮುಗಿಯೋಕೆ ಜೂನ್ ಕೊನೆವಾರ ಆಗುತ್ತೆ. ಆಗಸ್ಟ್ ವೇಳೆಗೆ ಕೊರೊನಾ ಮೂರನೇ ಅಲೆ ಶುರುವಾಗುತ್ತೆ ಅನ್ನೋ ಮಾತು ಕೂಡ ಕೇಳಿಬರ್ತಿದೆ. ಹೀಗಾಗಿ ಕೆಜಿಎಫ್ 2 ಅಂದ್ಕೊಂಡ ದಿನವೇ ಬಿಡುಗಡೆಯಾಗೋದು ಬಹುತೇಕ ಡೌಟು ಅಂತಿದ ಚಿತ್ರರಂಗ. ಆದ್ರೆ, ಇದೂವರೆಗೂ ಕೆಜಿಎಫ್ 2 ತಂಡ ಬಿಡುಗಡೆಯನ್ನು ಮುಂದೂಡುವ ಬಗ್ಗೆ ಎಲ್ಲೂ ಚರ್ಚೆ ಮಾಡಿಲ್ಲ. ಈಗಾಗ್ಲೇ ಪ್ರಕಟಿಸಿರೋ ದಿನವೇ ಸಿನಿಮಾ ಬಿಡುಗಡೆಯಾಗುತ್ತಾ? ಇಲ್ಲಾ ರಿಲೀಸ್ ಡೇಟ್ ಬದಲಾಗುತ್ತಾ ಅನ್ನೋದು ಸದ್ಯ ಕುತೂಹಲದ ಪ್ರಶ್ನೆ.