ಕೊರೋನಾ ಹಾವಳಿ ಕಮ್ಮಿ ಆಗಿ ಲಾಕ್ಡೌನ್ ನಿಂದ ಕೊಂಚ ರಿಲೀಫ್ ಸಿಕ್ತಿದಂತೆ ಸಿನಿಮಾ ಬಿಡುಗಡೆ ಲೆಕ್ಕಾಚಾರ ನಡೀತಿದೆ. ಕೆಲ ರಾಜ್ಯಗಳಲ್ಲಿ ಆಗಸ್ಟ್ ವೇಳೆಗೆ ಥಿಯೇಟರ್ ಬಾಗಿಲು ತೆರೆದು ಸಿನಿಮಾ ಪ್ರದರ್ಶನಕ್ಕೆ ಅವಕಾಶ ಸಿಗಲಿದೆ. ಇತ್ತೀಚೆಗಷ್ಟೆ ಮೋಹನ್ ಲಾಲ್ ಅಭಿನಯದ ‘ಮರಕ್ಕಾರ್’ ಸಿನಿಮಾ ರಿಲೀಸ್ ಡೇಟ್ ಸಹ ಅನೌನ್ಸ್ ಆಗಿದೆ. ಆಗಸ್ಟ್ 12ಕ್ಕೆ ಈ ಎಪಿಕ್ ಹಿಸ್ಟಾರಿಕಲ್ ವಾರ್ ಸಿನಿಮಾವನ್ನ ತೆರೆಗೆ ತರಲು ಸಿದ್ಧತೆ ನಡೀತಿದೆ. ಕಳೆದ ವರ್ಷ ಮಾರ್ಚ್ ನಲ್ಲೇ ಅರೇಬಿಯನ್ ಸಿಂಹ ಮರಕ್ಕಾರ್ ಕಥೆ ಪ್ರೇಕ್ಷಕರ ಮುಂದೆ ಬರಬೇಕಿತ್ತು. ಆದರೆ ಸಾಧ್ಯವಾಗಲಿಲ್ಲ. ಇದೀಗ ಆಗಸ್ಟ್ನಲ್ಲಿ ಮೋಹನ್ ಲಾಲ್ ಮರಕ್ಕಾರ್ ಅವತಾರದಲ್ಲಿ ಪ್ರೇಕ್ಷಕರನ್ನು ರಂಜಿಸೋದು ಪಕ್ಕಾ ಆಗಿದೆ. ಇನ್ನು ಮಾಲಿವುಡ್ ನಲ್ಲೇ ಭಾರೀ ಬಜೆಟ್ ಸಿನಿಮಾ ಇದು. ಅಂದಾಜು 100 ಕೋಟಿ ಬಜೆಟ್ ನಲ್ಲಿ ಸಿನಿಮಾ ನಿರ್ಮಾಣವಾಗಿದ್ದು, ಅದಕ್ಕೆ ತಕ್ಕಂತೆ ದೊಡ್ಡ ಮಟ್ಟದಲ್ಲೇ ರಿಲೀಸ್ ಪ್ಲ್ಯಾನ್ ನಡೀತಿದೆ.
ಆಗಸ್ಟ್ 12ಕ್ಕೆ ಕೇರಳದಲ್ಲಿರೋ ಎಲ್ಲಾ ಮಲ್ಟಿಪ್ಲೆಕ್ಸ್ ಮತ್ತು ಚಿತ್ರಮಂದಿರಗಳಲ್ಲಿ ಮರಕ್ಕಾರ್ ಸಿನಿಮಾ ರಿಲೀಸ್ ಆಗಲಿದೆ. ಅರೇ ಎಲ್ಲಾ ಚಿತ್ರಮಂದಿರಗಳಲ್ಲೂ ಇದೊಂದೇ ಸಿನಿಮಾ ರಿಲೀಸ್ ಆದರೆ ಉಳಿದ ಸಿನಿಮಾಗಳ ಕಥೆಯೇನು ? ಅನ್ನುವ ಪ್ರಶ್ನೆ ಮೂಡುವುದು ಸಹಜ. ಆದರೆ ಅಂತಾದೊಂದು ಅದ್ಭುತ ಅವಕಾಶ ಮರಕ್ಕಾರ್ ಗೆ ಸಿಗ್ತಿದೆ. ಅದಕ್ಕೆ ಹೇಳಿದ್ದು, ಈ ದಾಖಲೆ ಅಳಿಸಲು ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕೂ ಸಾಧ್ಯವಿಲ್ಲ ಅಂತ. ವಿಷಯ ಇಷ್ಟೇ, ಕೊರೋನಾ ಲಾಕ್ಡೌನ್ ನಡುವೆ ಚಿತ್ರಮಂದಿರಗಳ ಬಾಗಿಲು ತೆರೆಯುತ್ತಿದ್ದಾರೆ. ಪ್ರೇಕ್ಷಕರು ಕೊರೋನಾ ಸೋಂಕಿನ ಹಾವಳಿ ಬಿಟ್ಟು ಬೆಳ್ಳಿ ಪರದೆಯಲ್ಲಿ ಸಿನಿಮಾ ನೋಡೋಕೆ ಬರ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ದೊಡ್ಡ ಸೂಪರ್ ಸ್ಟಾರ್ ಸಿನಿಮಾ ಬಂದರೆ ಖಂಡಿತ ಬರಬಹುದು. ಹಾಗಾಗಿ ಮರಕ್ಕಾರ್ ಚಿತ್ರವನ್ನ ರಿಲೀಸ್ ಮಾಡಲಾಗ್ತಿದೆ. ಆಗಸ್ಟ್ 12ರಿಂದ 3 ವಾರಗಳ ಕಾಲ ಕೇರಳದ ಎಲ್ಲಾ ಚಿತ್ರಮಂದಿರಗಳಲ್ಲಿ ಇದೊಂದೇ ಸಿನಿಮಾ ಪ್ರದರ್ಶನಗೊಳ್ಳಲಿದೆ.
ಮರಕ್ಕಾರ್ ಪ್ಯಾನ್ ಇಂಡಿಯಾ ಸಿನಿಮಾ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಡಬ್ ಸಿನಿಮಾವನ್ನು ಬೇರೆ ಭಾಷಿಕರು ಚಿತ್ರಮಂದಿರಕ್ಕೆ ಬಂದು ನೋಡೋದು ಕಷ್ಟ. ಹಾಗಾಗಿ ಬರೀ ಕೇರಳದಲ್ಲಿ ಮಾತ್ರ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ. ಭಾರೀ ಮೊತ್ತದ ಬಂಡವಾಳವನ್ನು ವಾಪಸ್ ಪಡೆಯಲು ಚಿತ್ರತಂಡ ಇಂತಾದೊಂಡು ಉಪಾಯ ಮಾಡಿ ಅಖಾಡಕ್ಕಿಳಿತ್ತಿದೆ. ಹಾಗಾಗಿ 3 ವಾರಗಳ ಕಾಲ ಬೇರೆ ಯಾವುದೇ ಸಿನಿಮಾ ರಿಲೀಸ್ ಮಾಡದಂತೆ ಈಗಾಗಲೇ ನಿರ್ಮಾಪಕರು ಮತ್ತು ಪ್ರದರ್ಶಕರ ನಡುವೆ ಒಪ್ಪಂದ ಏರ್ಪಟ್ಟಿದೆ. ಇನ್ನು ಮರಕ್ಕಾರ್ ಚಿತ್ರಕ್ಕೆ ಕೇರಳ ಸರ್ಕಾರ ತೆರೆಗೆ ವಿನಾಯ್ತಿ ನೀಡಿದೆ. ಮೊದಲ ದಿನ ಒಳ್ಳೆ ಟಾಕ್ ಬಂದರೆ ಸಿನಿಮಾ ಗೆಲ್ಲುತ್ತೆ.ಇಲ್ಲ ಅಂದರೆ ಕಷ್ಟ. ಏನೇ ಹೇಳಿ ಮೋಹನ್ ಲಾಲ್ ಚಿತ್ರಕ್ಕೆ ಸಿಕ್ಕಿರೋ ಈ ಅವಕಾಶ ಮತ್ತ್ಯಾವುದೇ ಚಿತ್ರಕ್ಕೂ ಸಿಗೋದಿಲ್ಲ ಬಿಡಿ.