ಜುಲೈ 16 ಹತ್ತಿರವಾದಂತೆಲ್ಲಾ ಕೆಜಿಎಫ್ -2 ಪೋಸ್ಟ್ ಪ್ರೊಡಕ್ಷನ್ ವರ್ಕ್ ಜೋರಾಗ್ತಿದೆ. ಇದೀಗ ರಾಕಿಂಗ್ ಸ್ಟಾರ್ ಯಶ್ ತಮ್ಮ ಪಾತ್ರಕ್ಕೆ ಡಬ್ ಮಾಡ್ತಿದ್ದಾರೆ. ಈ ವಿಚಾರವನ್ನ ಖುದ್ದು ನಿರ್ದೇಶಕ ಪ್ರಶಾಂತ್ ನೀಲ್ ಇನ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಕೆಜಿಎಫ್ ಸೀಕ್ವೆಲ್ ಪ್ರೀಕ್ವೆಲ್ ಗಿಂತ ದೊಡ್ಡದಾಗಿ ಮೂಡಿ ಬರ್ತಿದ್ದು, ರಾಕಿ ಭಾಯ್ ಆರ್ಭಟ ನೆಕ್ಸ್ಟ್ ಲೆವೆಲ್ ನಲ್ಲಿ ಇರಲಿದೆ. ಫಸ್ಟ್ ಚಾಪ್ಟರ್ ಗಿಂತ ಸೆಕೆಂಡ್ ಚಾಪ್ಟರ್ ನಲ್ಲಿ ಡೈಲಾಗ್ಸ್ ಡಬಲ್ ಕಿಕ್ ಕೊಡಲಿದೆ. ಈಗಾಗಲೇ ಡಬ್ಬಿಂಗ್ ಸ್ಟುಡಿಯೋದಲ್ಲಿ ಒಂದೊಂದೇ ಡೈಲಾಗ್ ಗಳನ್ನು ಯಶ್ ತಮ್ಮ ಖಡಕ್ ವಾಯ್ಸ್ ನಲ್ಲಿ ಡೆಲಿವರಿ ಮಾಡ್ತಿದ್ದಾರೆ.
“ಏನಂದೆ ಒಂದು ಹೆಜ್ಜೆ ಇಟ್ಕೊಂಡು ಬಂದೋನು ಅಂತ ಹೇಳ್ದ. ಕರೆಕ್ಟ್, ಗಡಿಯಾರದಲ್ಲಿ ಒಂದು ಗಂಟೆಯಾಗಬೇಕು ಅಂದರೆ ದೊಡ್ಡ ಮುಳ್ಳು 60 ಹೆಜ್ಜೆ ಇಡಬೇಕು. ಆದರೆ ಚಿಕ್ಕ ಮುಳ್ಳು ಒಂದು ಹೆಜ್ಜೆ ಇಟ್ಟರೆ ಸಾಕು. ನಾನು ಹೆಜ್ಜೆ ಇಟ್ಟಾಗಿದೆ, ಆಟದ ರೇಂಜ್ ಚೇಂಜ್ ಆಗಿದೆ. ನಿನ್ನ ಹಾವು ಏಣಿ ಆಟಕ್ಕೆ ಮುಂಗುಸಿ ಇಳಿದಿದೆ. ಇನ್ಮೇಲೆಯಿಂದ ಆ ಟೆರಿಟರಿ ನಂದು, ಈ ಟೆರಿಟರಿ ನಿಂದು ಅನ್ನೋದೆಲ್ಲ ಬಿಟ್ಟುಬಿಡಿ, ವರ್ಲ್ಡ್ ಈಸ್ ಮೈ ಟೆರಿಟರಿ” ಇದು ಕೆಜಿಎಫ್-2 ಚಿತ್ರದ ಡೈಲಾಗ್. ಕಳೆದ ವರ್ಷ ಬರ್ತಡೇ ಸಂಭ್ರಮದಲ್ಲಿ ಯಶ್ ಈ ಡೈಲಾಗ್ ಹೇಳಿದ್ರು.ಡೈಲಾಗ್ ಕೇಳಿ ಫ್ಯಾನ್ಸ್ ಕಳ್ದೋಗಿದ್ರು.ಇದು ಜಸ್ಟ್ ಸ್ಯಾಂಪಲ್. ಇಂತಹ ಹತ್ತಾರು ಡೈಲಾಗ್ ಗಳು ಸೆಕೆಂಡ್ ಚಾಪ್ಟರ್ ನಲ್ಲಿ ಇರಲಿದೆ. ಅದನ್ನೆಲ್ಲಾ ಈಗ ಡಬ್ಬಿಂಗ್ ನಲ್ಲಿ ಹೇಳ್ತಿದ್ದಾರೆ.
ಯಶ್ ಈ ಬಾರಿ ಬರೀ ಕನ್ನಡ ಚಿತ್ರಕ್ಕೆ ಮಾತ್ರ ಡಬ್ ಮಾಡ್ತಾರಾ..? ಇಲ್ಲಾ ಬೇರೆ ಭಾಷೆಯಲ್ಲೂ ರಾಖಿ ಭಾಯ್ ಪಾತ್ರಕ್ಕೆ ವಾಯ್ಸ್ ಕೊಡ್ತಾರೋ ಕಾದು ನೋಡ್ಬೇಕು. ಯಾಕಂದ್ರೆ ಫಸ್ಟ್ ಚಾಪ್ಟರ್ ಗೆ ಯಶ್ ಅವ್ರೇ ಡಬ್ ಮಾಡಿದ್ರೆ, ಚೆನ್ನಾಗಿರ್ತಿತ್ತು ಅಂತ ಬೇರೆ ಅಭಿಮಾಮಿಗಳು ಕೇಳಿದ್ರು.ಈ ಬಾರಿ ಅವರ ಆಸೆ ಯಶ್ ಈಡೇರಿಸ್ತಾರಾ ಕಾದು ನೋಡ್ಬೇಕು.