ಬಿಗ್ ಬಾಸ್ ಸೀಸನ್ 8 ಇಷ್ಟೊತ್ತಿಗಾಗ್ಲೇ ಶುರುವಾಗಿ ಮುಗಿಯಬೇಕಿತ್ತು. ಆದರೆ ಕೊರೊನಾ ಬಿಗ್ ಬಾಸ್ ಅನ್ನೂ ಮನೆಯೊಳಗೆ ಲಾಕ್ ಮಾಡಿತ್ತು. ಹಾಗಂತ ಬಿಗ್ ಬಾಸ್ ಸುಮ್ಮನೆ ಕೂರೋಕೆ ಆಗುತ್ತಾ? ಖಂಡಿತಾ ಇಲ್ಲ. ಅನ್ಲಾಕ್ ಆಗ್ತಿದ್ದಂತೆ ಮತ್ತೆ ಬಿಗ್ ಬಾಸ್ ಚುರುಕಾಗಿದ್ದಿದ್ದು ಗೊತ್ತೇ ಇದೆ. ಅದರಂತೆ ಬಿಗ್ ಬಾಸ್ ಯಾವಾಗ ಶುರುವಾಗುತ್ತೋ ಅಂತ ಕಾದು ಕೂತಿದ್ದವರಿಗೆ ಈಗ ಸಿಹಿ ಸುದ್ದಿ ಸಿಕ್ಕಿದೆ.
ಹೌದು, ಬಿಗ್ ಬಾಸ್ ಸೀಸನ್ 8 ಗ್ರ್ಯಾಂಡ್ ಆಗಿ ಆರಂಭ ಆಗುತ್ತಿದೆ. ಅದಕ್ಕೆ ಮುಹೂರ್ತನೂ ಫಿಕ್ಸ್ ಆಗಿದೆ. ಸ್ವತ ಕಿಚ್ಚ ಸುದೀಪ್ ಎರಡು ಅವತಾರವೆತ್ತಿ ಬಂದು ಬಿಗ್ ಬಾಸ್ ಯಾವಾಗ ಶುರುವಾಗುತ್ತೆ ಅಂತ ಹೇಳಿದ್ದಾರೆ. ಅಂದ್ಹಾಗೆ ಕಿಚ್ಚನ ಎರಡು ಅವತಾರ ಯಾವುದು ಅಂತಿರಾ? ಒಂದು ಬಿಗ್ ಬಾಸ್ ನಿರೂಪಕನ ಅವತಾರ ಆಗಿದ್ದರೆ, ಇನ್ನೊಂದು ಭವಿಷ್ಯ ಹೇಳೋ ಜ್ಯೋತಿಷಿ. ಹಾಗಿದ್ರೆ, ಜ್ಯೋತಿಷಿಯಾಗಿ ಬಂದ ಕಿಚ್ಚ ಏನೇನು ಹೇಳಿದ್ದಾರೆ ಕೇಳಿ.
ಬಿಗ್ ಬಾಸ್ ಸೀಸನ್ 8 ಇದೇ ಫೆಬ್ರವರಿಯಿಂದ ಶುರುವಾಗುತ್ತಿದೆ. ಫೆಬ್ರವರಿ 28, ಸಂಜೆ 6 ಗಂಟೆ 1 ನಿಮಿಷಕ್ಕೆ ಬಿಗ್ ಬಾಸ್ ಆರಂಭ ಆಗುತ್ತೆ. ಈಗಾಗ್ಲೇ ಬಿಗ್ ಬಾಸ್ ಮನೆಯೊಳಗೆ ಯಾಱರು ಹೋಗ್ತಾರೆ ಅನ್ನೋ ಚರ್ಚೆನೂ ಆಗುತ್ತಿದೆ. ಆದರೆ, ಕಿಚ್ಚ ಸ್ಪರ್ಧಿಗಳ್ಯಾರು ಅನ್ನೋ ರಹಸ್ಯವನನ್ನ ಬಿಟ್ಟುಕೊಟ್ಟಿಲ್ಲ.
ಬಿಗ್ ಬಾಸ್ ಮನೆಯೊಳಗೆ ಜಗಳ ನಡೆಯುತ್ತೆ. ಲವ್ ಸ್ಟೋರಿನೂ ಇರುತ್ತೆ. ಲೆಕ್ಕಾಚಾರ, ಆಟ ಎಲ್ಲವೂ ಜೋರಾಗೇ ನಡೆಯುತ್ತೆ. ಇದ್ರೊಂದಿಗೆ ಬಿಗ್ ಬಾಸ್ ಸೀಸನ್ 8, 100 ದಿನ ನಡೆಯುತ್ತೆ ಅನ್ನೋ ಸುಳಿವು ಕೂಡ ಕೊಟ್ಟಿದ್ದಾರೆ. ಬಿಗ್ ಬಾಸ್ ಮನೆಯೊಳಗೆ ಹೋಗೋ ಸ್ಪರ್ಧಿಗಳಿಗೆ ಕೊವಿಡ್ ಪರೀಕ್ಷೆಯನ್ನ ನಡೆಸಿ ಒಳಬಿಡುತ್ತಿದ್ದಾರೆ. ಹೀಗಾಗಿ ಸಹಜವಾಗೇ ಬಿಗ್ ಬಾಸ್ ಬಗ್ಗೆ ಕುತೂಹಲ ದುಪ್ಪಟ್ಟಾಗಿದೆ.