ಭಾರತದ ಕೊರೊನಾ 2ನೇ ಅಲೆ ವಿರುದ್ಧ ಹೋರಾಡುತ್ತಿದೆ. ಪ್ರತಿ ಕೊರೊನಾದಿಂದ ಸಾಯುತ್ತಿರೋ ನೂರಾರು ಜನರಿಗೆ ದೇಶ ವಿದೇಶದಿಂದ ಸಹಾಯದ ಮಹಾಪೂರವೇ ಹರಿದು ಬರುತ್ತಿದೆ. ಈ ವೇಳೆ ಇಸ್ರೇಲ್ ರಾಜಧಾನಿ ಟೆಲ್ ಅವಿವ್ವಾದಲ್ಲಿ ನೂರಾರು ಇಸ್ರೇಲಿ ಜನರು ಭಾರತೀಯರಿಗಾಗಿ ಓಂ ನಮ: ಶಿವಾಯ ಮಂತ್ರ ಜಪಿಸಿದ್ದಾರೆ.
ಭಾರತವನ್ನು ಕೊರೊನಾ ಸಾಂಕ್ರಾಮಿಕ ರೋಗದಿಂದ ರಕ್ಷಣೆ ಮಾಡಲಿ. ಸಾವು-ನೋವುಗಳು ಸಂಭವಿಸದೆ ಇರಲಿ ಎಂದು ಇಸ್ರೇಲಿ ಜನರು ಪ್ರಾರ್ಥನೆ ಮಾಡಿದ್ದಾರೆ. ಈ ವಿಡಿಯೋ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿ ಪವನ್ ಕೆ ಪಾಲ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಈಗಾಗ್ಲೇ ಈ ವಿಡಿಯೋ ಜನ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈಗಾಗ್ಲೇ ಈ ವಿಡಿಯೋ 1.25 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದು, ಇಸ್ರೇಲಿ ಜನರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಭಾರತೀಯರಿಗಾಗಿ ಪ್ರಾರ್ಥನೆ ಮಾಡಿದ್ದಕ್ಕೆ ಭಾರತ ಜನರು ಮನಸಾರೆ ಧನ್ಯವಾದಗಳನ್ನು ಹೇಳುತ್ತಿದ್ದಾರೆ.
ಭಾರತ ಕೊರೊನಾದಿಂದ ತತ್ತಿರಿಸಿ ಹೋಗಿದೆ. ಹೀಗಾಗಿ ಜರ್ಮನಿ, ಫ್ರಾನ್ಸ್, ಅಮೆರಿಕ, ಕೆನಡಾ, ಸಿಂಗಾಪುರ, ಯುಕೆಯಿಂದ ವೈದ್ಯಕಿಯದ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. ಆದಷ್ಟು ಬೇಗ ಭಾರತದಿಂದ ಕೊರೊನಾವನ್ನು ಹೊಡೆದೋಡಿಸಲೇ ಬೇಕಿದೆ.