ಪ್ರತಿ ಸಾರಿ ರಜಿನಿಕಾಂತ್ ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಿದಾಗ ಅಭಿಮಾನಿಗಳಲ್ಲಿ ಆತಂಕ ಶುರುವಾಗುತ್ತದೆ. ಇತ್ತೀಚೆಗೆ ಕೇಂದ್ರ ಸರ್ಕಾರದಿಂದ ಅನುಮತಿ ಪಡೆದು ರೆಗ್ಯುಲರ್ ಹೆಲ್ತ್ ಚೆಕಪ್ಗಾಗಿ ಸೂಪರ್ ಸ್ಟಾರ್ ರಜಿನಿಕಾಂತ್ ಅಮೇರಿಕಾ ಫ್ಲೈಟ್ ಏರಿದ್ದರು. ಇದೀಗ ಅಮೇರಿಕಾದ ಪ್ರತಿಷ್ಠಿತ ಮೆಯೋ ಕ್ಲಿನಿಕ್ನಲ್ಲಿ ರಜಿನಿಕಾಂತ್ ಹೆಲ್ತ್ ಚೆಕಪ್ ಮಾಡಿಸಿಕೊಂಡು ಪುತ್ರಿ ಸೌಂದರ್ಯ ಜೊತೆ ಹೊರ ಬಂದಿದ್ದಾರೆ. ಮೇಯೋ ಕ್ಲಿನಿಕ್ ಮುಂದೆ ತಲೈವಾ ಕಾಣಿಸಿಕೊಂಡಿರೋ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
2011ರಲ್ಲಿ ರಜಿನಿಕಾಂತ್ ಸಿಂಗಾಪೂರದ ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ಕಿಡ್ನಿ ಸಮಸ್ಯೆಗೆ ಚಿಕಿತ್ಸೆ ನೀಡಲಾಗಿತ್ತು. ನಟ ಅಂಬರೀಶ್ ಅನಾರೋಗ್ಯಕ್ಕೆ ತುತ್ತಾದಾಗ ಅದೇ ಸಿಂಗಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ರಜಿನಿಕಾಂತ್ ಹೇಳಿದ್ದರು. ಅಂಬಿ ಕೂಡ ಚಿಕಿತ್ಸೆ ಪಡೆದು ಹೊರ ಬಂದಿದ್ದರು. ಕಳೆದ ವರ್ಷ ಹೈದರಾಬಾದ್ನಲ್ಲಿ ಅಣ್ಣಾತೆ ಸಿನಿಮಾ ಚಿತ್ರೀಕರಣ ನಡಿತಿದ್ದ ವೇಳೆ ರಜಿನಿಕಾಂತ್ ಅನಾರೋಗ್ಯಕ್ಕೆ ತುತ್ತಾಗಿದ್ದು ಅಭಿಮಾನಿಗಳಲ್ಲಿ ಆತಂಕ ತಂದಿತ್ತು. ಕೂಡಲೇ ಚಿಕಿತ್ಸೆ ಪಡೆದು ತಲೈವಾ ಚೇತರಿಸಿಕೊಂಡಿದ್ದರು. ಆರೋಗ್ಯದ ನೆಪವೊಡ್ಡಿ ಸ್ವಂತ ಪಕ್ಷ ಕಟ್ಟಿ ರಾಜಕೀಯರಂಗಕ್ಕೆ ಧುಮುಕುವ ಪ್ರಯತ್ನದಿಂದ ಸೂಪರ್ ಸ್ಟಾರ್ ಹಿಂದೆ ಸರಿದಿದ್ದರು. ತಮ್ಮ ವಿಭಿನ್ನ ಅಭಿನಯ ಮತ್ತು ಸಹಾಯಗುಣದಿಂದ ವಿಶ್ವದಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನ ರಜಿನಿಕಾಂತ್ ಪಡೆದಿದ್ದಾರೆ. ಅಭಿಮಾನಿಗಳು ನೆಚ್ಚಿನ ನಟನನ್ನ ದೇವರಂತೆ ಪೂಜಿಸುತ್ತಿದ್ದಾರೆ. ಆರಾಧ್ಯ ದೇವರಿಗೆ ಕೊಂಚ ಸಮಸ್ಯೆ ಆದರೂ ಸಹಜವಾಗಿಯೇ ಮನಸ್ಸಿನಲ್ಲಿ ತಳಮಳ ಶುರುವಾಗುತ್ತದೆ.
70 ವರ್ಷ ವಯಸ್ಸಿನ ರಜಿನಿಕಾಂತ್ ಚಿಕಿತ್ಸೆಗಾಗಿ ಯೂಎಸ್ಗೆ ತೆರಳುತ್ತಿದ್ದಾರೆ ಅಂತ ಮೊನ್ನೆ ಗೊತ್ತಾದಾಗ ಅಂತದ್ದೇ ಸಣ್ಣ ಆತಂಕ ಅಭಿಮಾನಿಗಳನ್ನ ಕಾಡಿತ್ತು. ಆದರೆ ತಲೈವಾ ರೆಗ್ಯುಲರ್ ಹೆಲ್ತ್ ಚೆಕಪ್ಗಾಗಿ ಹೋಗ್ತಿದ್ದಾರೆ ಅಂತ ಗೊತ್ತಾದ ಮೇಲೆ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದರು. ಸದ್ಯ ರಜಿನಿಕಾಂತ್ ಮೆಯೋ ಕ್ಲಿನಿಕ್ನಿಂದ ಹೊರ ಬರುತ್ತಿರುವ ಫೋಟೋವನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ವೈರಲ್ ಮಾಡ್ತಿದ್ದಾರೆ.