ಕೊರೊನಾದಿಂದ ಸಾಕಷ್ಟು ಜನರ ಸಾವನ್ನಪ್ಪುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೊರೊನಾ ವಾಕ್ಸೀನ್ ಹಾಕಿಸಿಕೊಳ್ಳಲು ಜನರು ಮುಗಿಬೀಳುತ್ತಿದ್ದಾರೆ. ಇದೇ ವೇಳೆ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕೋ.. ಬೇಡವೋ ಅನ್ನೋ ಗೊಂದಲದಲ್ಲೂ ಜನರಿದ್ದಾರೆ. ಈ ಹೊತ್ತಲ್ಲೇ ವಾಟ್ಸ್ಆಪ್ ಗ್ರೂಪ್ವೊಂದ್ರಲ್ಲಿ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಡಿ ಅನ್ನುವ ಆಡಿಯೋ ತುಣುಕೊಂದು ಭಾರಿ ಸದ್ದು ಮಾಡುತ್ತಿದೆ.
ಡಾ. ಬೋಸ್ ಅನ್ನೋ ವ್ಯಕ್ತಿ ‘‘ಇದು ವ್ಯಾಕ್ಸಿನ್ ತೆಗೆದುಕೊಳ್ಳಲು ಸರಿಯಾದ ಸಮಯವಲ್ಲ’’ವೆಂದು ಹೇಳಿದ್ದಾರೆ. ಇದೇ ಆಡಿಯೋ ಈಗ ವಾಟ್ಸಾಪ್ ಗ್ರೂಪ್ಗಳಲ್ಲಿ ಹರಿದಾಡುತ್ತಿದೆ. ಅಲ್ಲದೆ ‘‘ ಸಾಂಕ್ರಾಮಿಕ ರೋಗ ವ್ಯಾಪಕವಾಗಿ ಹರಿದಾಡುತ್ತಿರೋದ್ರಿಂದ ಲಸಿಕೆ ತೆಗೆದುಕೊಳ್ಳಲು ಇದು ಸೂಕ್ತ ಸಮಯವಲ್ಲ. ಕೊರೊನಾ ವೈರಸ್ ಎಲ್ಲಾಕಡೆ ಇದೆ. ಹೀಗಾಗಿ ವೈರಸ್ ಹರಡುತ್ತಿರುವ ಪ್ರಮಾಣ ಹೆಚ್ಚಾಗಿರೋದ್ರಿಂದ ಇದು ಸೂಕ್ತ ಸಮಯವಲ್ಲ’’ವೆಂದಿದ್ದಾರೆ.
ಆಡಿಯೋದಲ್ಲಿರೋ ಮತ್ತೊಂದು ವಿಷಯವೇನಂದ್ರೆ, ಲಸಿಕೆಯಲ್ಲಿ ಬಲವಿಲ್ಲದ ವೈರಸ್ ಇರುತ್ತದೆ. ಇದರಿಂದ ಸಾಧಾರಣ ರೋಗ ಲಕ್ಷಣ ಗಂಭೀರ ಸ್ವರೂಪ ತಾಳಬಹುದೆಂದು ಹೇಳಲಾಗಿದೆ. ಅಂದ್ಹಾಗೆ ಡಾ. ಬೋಸ್ ಅನ್ನೋ ವೈದ್ಯನ ಪೂರ್ತಿ ಹೆಸರು ಡಾ.ಪಾರ್ಥ ಪ್ರತಿಮ್ ಬೋಸ್. ದೆಹಲಿ ಮೂಲದ ಶ್ವಾಸಕೋಶ ವೈದ್ಯ. ಇಂಡಿಯಾ ಟುಡೇ ತಂಡ ಈ ವೈದ್ಯನ್ನು ಸಂಪರ್ಕಿಸಿದಾಗ, ಆ ಆಡಿಯೋ ತನ್ನದೇ ಎಂದು ಒಪ್ಪಿಕೊಂಡಿದ್ದಾರೆ.
ಆದ್ರೆ, ಏಮ್ಸ್ ನಿರ್ದೇಶಕ ಡಾ. ರಣ್ದೀಪ್ ಗುಲೇರಿಯಾ ಲಸಿಕೆ ಹಾಕಿಸಿಕೊಳ್ಳಬೇಡಿ ಅನ್ನೋದು ಸರಿಯಾದ ಮಾರ್ಗದರ್ಶನವಲ್ಲವೆಂದು ಅಭಿಪ್ರಾಯಟ್ಟಿದ್ದಾರೆಂದು ಇಂಡಿಯಾ ಟುಡೇ ಹೇಳಿದೆ. ಹೀಗಾಗಿ ಕೊರೊನಾ ಲಸಿಕೆ ಈಗ ಬೇಡ ಅಂತ ಯಾವ ಅಧಾರದ ಮೇಲೆ ಹೇಳಿದ್ದಾರೆ ಅನ್ನೋದನ್ನ ಡಾ. ಬೋಸ್ ಸ್ಪಷ್ಟಪಡಿಸಬೇಕಿದೆ.