ನಾಗಮಂಡಲ, ಸೂರ್ಯವಂಶ, ನಂ 1 ಅಂತಹ ಸಿನಿಮಾಗಳಲ್ಲಿ ನಟಿಸಿರೋ ವಿಜಯಲಕ್ಷ್ಮಿ ಮತ್ತೆ ಸಂಕಷ್ಟದಲ್ಲಿದ್ದಾರೆ. ಅವರ ಸಹೋದರಿ ಚಿಕಿತ್ಸೆ ಹಣ ಹೊಂದಿಸಲು ಆಗದೆ ಸಂಕಷ್ಟದಲ್ಲಿದ್ದಾರೆ. ಹೌದು ವಿಜಯಲಕ್ಷ್ಮಿ ಸಹೋದರಿ ಉಷಾ ಆರೋಗ್ಯ ಹದಗೆಟ್ಟಿದೆ. ಕೊರೊನಾ, ಲಾಕ್ಡೌನ್ ಅಂತಹ ಸನ್ನಿವೇಶದಲ್ಲಿ ಹಣವಿಲ್ಲದೆ ಪರದಾಡ್ತಿರೋ ನಟಿ ಶಿವಣ್ಣನ ಸಹಾಯ ಕೋರಿದ್ದಾರೆ.
ವಿಜಯಲಕ್ಷ್ಮಿ ಅವರ ಸಹೋದರಿ ಉಷಾ ಕಳೆದ ತಿಂಗಳು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವ್ರಿಗೆ ಗರ್ಭಕೋಶದಲ್ಲಿ ಮೂರು ದೊಡ್ಡ ಗೆಡ್ಡೆಗಳಾಗಿದ್ದು ಪತ್ತೆಯಾಗಿತ್ತು. ಹೀಗಾಗಿ ಈ ಗೆಡ್ಡೆಗಳನ್ನು ವೈದ್ಯರು ಚಿಕಿತ್ಸೆ ಮಾಡಿ ತೆಗೆದು ಹಾಕಿದ್ದರು. ಆಪರೇಷನ್ ಆದ ಬಳಿಕ ಆಸ್ಪತ್ರೆಯಲ್ಲೇ ಕೆಲ ದಿನಗಳ ಕಾಲ ಚಿಕಿತ್ಸೆ ಪಡೆಯಬೇಕಿತ್ತು. ವೈದ್ಯರು ಕೊರೊನಾ ಸೋಂಕಿತರು ಹೆಚ್ಚಿದ್ದಾರೆ. ಹೀಗಾಗಿ ಬೇಗ ಮನೆಗ ಕರೆದುಕೊಂಡು ಹೋಗಿ ಎಂದು ಹೇಳಿದ್ದಾರೆ. ಮನೆಗೆ ಕರ್ಕೊಂಡು ಬಂದ ಬಳಿಕ ಸಹೋದರಿಯ ಆರೋಗ್ಯ ಮತ್ತಷ್ಟು ಬಿಗಡಾಯಿಸಿದೆ.
ಮನೆಗೆ ಬಂದ ಬಳಿಕ ವಿಜಯಲಕ್ಷ್ಮಿ ಸಹೋದರಿ ಉಷಾ ಆಹಾರ ಸೇವನೆ ಮಾಡೋದೂ ಕೂಡ ಕಷ್ಟವಾಗಿದೆ. ಇದ್ರೊಂದಿಗೆ ರಕ್ತಸ್ರಾವವಾಗುತ್ತಿದೆ. ಈ ಕಾರಣಕ್ಕೆ ಮತ್ತೆ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದ್ರೆ, ವೈದ್ಯರು ಮಾತ್ರ ಕೊರೊನಾ ಜಾಸ್ತಿ ಇದೆ ಮನೆಯಲ್ಲೇ ಇರಿ ಅಂತ ಹೇಳಿ ವಾಪಾಸ್ ಕಳುಹಿಸಿದ್ದಾರೆ. ಚಿಕಿತ್ಸೆ ಕೊಡಿಸಲು ನಮ್ಮ ಬಳಿ ಹಣವಿಲ್ಲ ವಿಜಯಲಕ್ಷ್ಮಿ ಅಳಲು ತೋಡಿಕೊಂಡಿದ್ದಾರೆ.
ತಮ್ಮ ಕಷ್ಟವನ್ನು ವಿಡಿಯೋ ಮಾಡಿ ಸೋಶಿಯ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ನನ್ನ ಈ ಅಳಲು ನಟ ಡಾ. ಶಿವರಾಜ್ ಕುಮಾರ್ಗೆ ತಲುಪುವಂತೆ ಮಾಡಿ ಎಂದೂ ಮನವಿ ಮಾಡಿದ್ದಾರೆ. ಹೇಗಾದ್ರೂ ಮಾಡಿ ಸಹೋದರಿ ಪ್ರಾಣ ಉಳಿಸಿಕೊಳ್ಳಲೇ ಬೇಕು ಅಂತ ಸಹಾಯಕ್ಕೆ ಕೈ ಚಾಚಿದ್ದಾರೆ.