ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಈ ಜೋಡಿಯನ್ನ ನೋಡಿ ಮೆಚ್ಚಿಕೊಂಡವರ ಸಂಖ್ಯೆಯೇನು ಕಮ್ಮಿಯಿಲ್ಲ. ಈಗಾಗ್ಲೇ ಗೀತಾ ಗೋವಿಂದಂ, ಡಿಯರ್ ಕಾಮ್ರೆಡ್ ಅಂತಹ ಸಿನಿಮಾಗಳನ್ನ ಸಿನಿಮಾರಸಿಕರು ಹೊಗಳಿ ಕೊಂಡಾಡಿದ್ದಾರೆ. ಆದ್ರೆ, ಗೀತಾ ಗೋವಿಂದಂ ಸಿನಿಮಾ ಮಾಡುವಾಗ್ಲೇ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಇಬ್ಬರೂ ಡೇಟಿಂಗ್ ಮಾಡ್ತಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಇಬ್ಬರೂ ಇದು ರೂಮರ್ ಎಂದು ತಳ್ಳಿಹಾಕಿದ್ದರು. ಈಗ ವಿಜಯ್ ದೇವರಕೊಂಡ ಪ್ರಪೋಸ್ ಮಾಡೋ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ವಿಜಯ್ ದೇವರಕೊಂಡ ಫ್ಯಾನ್ಸ್ ಒಂದು ವಿಡಿಯೋವನ್ನ ಶೇರ್ ಮಾಡಿದ್ದಾರೆ. ಇದ್ರಲ್ಲಿ ವಿಜಯ್ ದೇವರಕೊಂಡು ಮಂಡಿಯೂರಿ ರಶ್ಮಿಕಾಗೆ ಪ್ರಪೋಸ್ ಮಾಡುತ್ತಿದ್ದಾರೆ. ಇದೇ ವಿಡಿಯೋ ಈಗ ಟಾಕ್ ಆಫ್ ದಿ ಟೌನ್ ಆಗಿದೆ. ವಿಜಯ್ ದೇವರಕೊಂಡ ಅಂತೂ ರಶ್ಮಿಕಾಗೆ ಪ್ರಪೋಸ್ ಮಾಡೇ ಬಿಟ್ರು ಅಂತ ಗುಲ್ಲೆದ್ದಿದೆ. ಆದ್ರೆ, ಇದು ರಿಯಲ್ ಆಗಿ ಪ್ರಪೋಸ್ ಮಾಡಿದ್ದಲ್ಲ. ಇಬ್ಬರೂ ಜೊತೆಯಾಗಿ ನಟಿಸುತ್ತಿರೋ ಹೊಚ್ಚ ಹೊಸ ಜಾಹೀರಾತು ಇದು.
ಆದ್ರೆ, ವಿಡಿಯೋ ಹರಿದಾಡುತ್ತಿದ್ದಂತೆ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಲವ್ ಸ್ಟೋರಿಗೆ ಮತ್ತೆ ಜೀವ ಬಂದಿದೆ. ತೆರೆಮೇಲೆ ಪ್ರಪೋಸ್ ಮಾಡಿದ್ದಾರೆ ಅಂದ್ಮೇಲೆ ರಿಯಲ್ ಲೈಫ್ನಲ್ಲಿ ಪ್ರಪೋಸ್ ಮಾಡಿರೋದಿಲ್ವಾ ಅನ್ನೋ ಅರ್ಥದಲ್ಲಿ ಕೆಲವು ಕಮೆಂಟ್ಸ್ಗಳು ಹರಿದಾಡುತ್ತಿದೆ. ಇದಕ್ಕೆ ಸರಿಯಾಗಿ ರಶ್ಮಿಕಾ ಮಂದಣ್ಣ ಕೂಡ ವಿಜಯ್ ದೇವರಕೊಂಡ ಗಿಫ್ಟ್ ಹಿಡ್ಕೊಂಡಿರೋ ಇಮೇಜ್ ಅನ್ನ ಶೇರ್ ಮಾಡಿದ್ದರು.
ಇನ್ನು ಕೆಲಸದ ವಿಚಾರಕ್ಕೆ ಬಂದ್ರೆ, ರಶ್ಮಿಕಾ ಮಂದಣ್ಣ ಬಾಲಿವುಡ್ನಲ್ಲಿ ಎರಡು ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ಅಮಿತಾಬ್ ಬಚ್ಚನ್ ಜೊತೆ ಗುಡ್ಬೈ ಹಾಗೂ ಸಿದ್ದಾರ್ಥ್ ಮಲ್ಹೋತ್ರಾ ಜೊತೆ ಮಿಷನ್ ಮಜ್ನು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅತ್ತ ವಿಜಯ್ ದೇವರಕೊಂಡ ಕೂಡ ಪುರಿ ಜಗನ್ನಾಥ್ ನಿರ್ದೇಶನದ ಲೈಗರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.