ಕೆಲ ವರ್ಷಗಳ ಹಿಂದೆ ಬೋಲ್ಡ್ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ ನಟಿ ಚಾರ್ಮಿ ಕೌರ್ ಈಗ ಅಭಿನಯ ಬಿಟ್ಟು ಸಿನಿಮಾ ನಿರ್ಮಾಣದಲ್ಲಿ ಬ್ಯುಸಿಯಾಗಿದ್ದಾರೆ. ಸ್ಟಾರ್ ಡೈರೆಕ್ಟರ್ ಪೂರಿ ಜಗನ್ನಾಥ್ ಜೊತೆ ಸಿನಿಮಾಗಳಲ್ಲಿ ಚಾರ್ಮಿ ತೊಡಗಿಸಿಕೊಂಡಿದ್ದಾರೆ. ಕಳೆದೊಂದು ವರ್ಷದಿಂದ ಚಾರ್ಮಿ ‘ಲೈಗರ್’ ಸಿನಿಮಾ ಶೂಟಿಂಗ್ ಗಾಗಿ ಮುಂಬೈನಲ್ಲಿ ಆಫೀಸ್ ಮಾಡ್ಕೊಂಡು ಪೂರಿ ಜೊತೆ ಅಲ್ಲೇ ಉಳಿದುಕೊಂಡಿದ್ದಾರೆ. ಚಾರ್ಮಿಗೆ ನಾಯಿಗಳಂದ್ರೆ ಬಹಳ ಇಷ್ಟ. ಒಂದೆರಡು ನಾಯಿಗಳನ್ನ ಆಫೀಸ್ ನಲ್ಲಿ ಸಾಕಿಕೊಂಡಿದ್ದಾರೆ. Alaskan Malamute ತಳಿಯ ನಾಯಿಯೊಂದು ಅದ್ರಲ್ಲಿ ಎಲ್ಲರ ಫೇವರಿಟ್. ಯಾರೇ ಪೂರಿ ಜಗನ್ನಾಥ್ ಮುಂಬೈ ಆಫೀಸ್ ಗೆ ಹೋದ್ರು ಅವರನ್ನ ಸ್ವಾಗತಿಸೋದು ಇದೇ ನಾಯಿ. ಕೆಲ ದಿನಗಳ ಹಿಂದೆ ಬಾಹುಬಲಿ ಪ್ರಭಾಸ್ ಆ ನಾಯಿಯ ಮೈದಡವುತ್ತಾ ಜೊತೆ ಕೆಲ ಹೊತ್ತು ಕಾಲ ಕಳೆದಿದ್ದರು. ಆ ಫೋಟೋವನ್ನು ಚಾರ್ಮಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು.
ಇದೀಗ ನಟ ವಿಜಯ್ ದೇವರಕೊಂಡ ಶೂಟಿಂಗ್ ಗಾಗಿ ಮುಂಬೈಗೆ ತೆರಳಿದ್ದಾರೆ. ಪೂರಿ ಆಫೀಸ್ ಗೆ ಭೇಟಿ ಕೊಟ್ಟಾಗ ಆ ನಾಯಿ ಜೊತೆ ಕೆಲ ಸಮಯ ಆಟ ಆಗಿದ್ದಾರೆ. Boys play time ಅಂತ ಬರೆದು ಆ ವೀಡಿಯೋವನ್ನು ಚಾರ್ಮಿ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ಇನ್ನು ಲೈಗರ್ ಸಿನಿಮಾ 5 ಭಾಷೆಗಳಲ್ಲಿ ಬಗಳ ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗ್ತಿದೆ. ಚಿತ್ರದಲ್ಲಿ ವಿಜಯ್ ದೇವರಕೊಂಡ ಬಾಕ್ಸರ್ ಅವತಾರದಲ್ಲಿ ದರ್ಶನ ಕೊಡ್ತಿದ್ದಾರೆ. ಪೂರಿ ಜಗನ್ನಾಥ್ ಜೊತೆಗೆ ಕರಣ್ ಜೋಹರ್ ಧರ್ಮ ಪ್ರೊಡಕ್ಷನ್ಸ್ ಸಂಸ್ಥೆ ಸಿನಿಮಾ ನಿರ್ಮಾಣ ಮಾಡ್ತಿದೆ.