ಕನ್ನಡದ ಬಿಗ್ ಬಾಸ್ ದಿನೇ ದಿನೇ ಕುತೂಹಲ ಹೆಚ್ಚಿಸುತ್ತಾ ಇದೆ. ಸ್ಪರ್ಧಿಗಳು ಪ್ರತಿದಿನ ಒಂದಿಲ್ಲೊಂದು ತರಲೆ, ರಗಳೆ ಮಾಡ್ತಾನೇ ಇದ್ದಾರೆ. ಈಗಂತೂ ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಗಳು ಯಶಸ್ವಿಯಾಗಿ 19 ದಿನಗಳನ್ನು ಕಳೆದುಬಿಟ್ಟಿದ್ದಾರೆ. ಇವರಲ್ಲಿ ಎಲ್ಲರಿಗಿಂತ ಸೈಲೆಂಟ್ ಅಂದ್ರೆ ವೈಷ್ಣವಿ ಅನ್ನೋದು ಎಲ್ರಿಗೂ ಗೊತ್ತಾಗಿದೆ.
ಆದ್ರೆ ಸೈಲೆಂಟ್ ಆದ ವೈಷ್ಣವಿ ಯಾಕೋ ವೈಲೆಂಟ್ ಆಗ್ಬಿಟ್ರು. ಅದಕ್ಕೆ ಕಾರಣ ಶುಭಾ ಪೂಂಜಾ. ಎಂದಿನಂತೆ ಬೆಳಗೆದ್ದು ಸ್ಪರ್ಧಿಗಳೆಲ್ಲಾ ದಿನಚರಿಯಲ್ಲಿ ತೊಡಗಿಕೊಂಡಿದ್ರು. ಗುಳಿಕೆನ್ನೆ ಚೆಲುವೆ ವೈಷ್ಣವಿ ಉಳಿದವರಿಗಿಂತ ಬೇಗ ಸ್ನಾನ ಮುಗಿಸಿ ಬಂದಿದ್ರು. ವೈಷ್ಣವಿ ಸ್ನಾನ ಮಾಡಿ ರೆಡಿ ಆಗಿದ್ದನ್ನು ನೋಡಿ ಉಳಿದವ್ರು ಕೀಟಲೆ ಮಾಡಿ ತೊಂದರೆ ಕೊಡೋಕೆ ಶುರು ಮಾಡಿದ್ರು.
ಆಗ ನಟಿ ಶುಭಾ ಪೂಂಜಾ ಸೈಲೆಂಟಾಗಿ ಹಿಂದಿನಿಂದ ಬಂದು ಚೆನ್ನಾಗಿ ಕಚಗುಳಿ ಇಡೋಕೆ ಶುರು ಮಾಡಿದ್ರು. ವೈಷ್ಣವಿ ಮಾತ್ರ ಇದಕ್ಕೆ ಒಂಚೂರೂ ರಿಯಾಕ್ಟ್ ಕೂಡಾ ಮಾಡ್ಲಿಲ್ಲ. ಅಷ್ಟೊಂದು ಕಚಗುಳಿ ಮಾಡಿದ್ರೂ ವೈಷ್ಣವಿ ತಟಸ್ಥವಾಗಿದ್ದಿದ್ದು ನೋಡಿ ಶುಭಾ ಪೂಂಜಾ ಆಶ್ಚರ್ಯಪಟ್ರು. ಆದ್ರೆ ವೈಷ್ಣವಿ ಮಾತ್ರ ಇನ್ಮುಂದೆ ತನ್ನನ್ನು ಮುಟ್ಟಿದ್ರೆ ಕಚ್ಚಿಬಿಡ್ತೀನಿ ಅಂತ ವಾರ್ನಿಂಗ್ ಕೊಟ್ಟಿದ್ದಾರೆ. ಸೈಲೆಂಟಾಗಿದ್ದ ವೈಷ್ಣವಿ ಹೀಗೆ ಆವಾಜ್ ಹಾಕಿದ್ದು ಎಲ್ರಿಗೂ ಅಚ್ಚರಿ ಮೂಡಿಸಿದ್ದಂತೂ ನಿಜ.