ಲಾಕ್ಡೌನ್ನಲ್ಲಿ ರಾಜಕೀಯ ಪಕ್ಷಗಳೇ ಕೈ ಕಟ್ಟಿ ಕೂತಿರುವಾಗ ಉಪೇಂದ್ರ ಸಾಧ್ಯವಾದಷ್ಟು ಜನರ ಸಹಾಯಕ್ಕೆ ಬಂದಿದ್ದಾರೆ. ಚಿತ್ರರಂಗದ ಕಲಾವಿದರಿಗೆ, ತಂತ್ರಜ್ಞರಿಗೆ ದಿನಸಿ ಕಿಟ್ಗಳನ್ನು ನೀಡಿದ್ದಾರೆ. ನೇರವಾಗಿ ರೈತರಿಂದಲೇ ತರಕಾರಿಗಳನ್ನು ಖರೀದಿ ಮಾಡಿದ್ದಾರೆ. ಈ ಮೂಲಕ ಸಂಕಷ್ಟದಲ್ಲಿರೋ ಕೆಲವು ರೈತರ ನೆರವಿಗೂ ಬಂದಿದ್ದಾರೆ. ಆದ್ರೆ ಇದೇ ವೇಳೆ ಉಪೇಂದ್ರ ರೈತರ ಜಮೀನನ್ನು ಖರೀದಿ ಮಾಡಿದ್ದಾರೆ ಅಂತ ಆರೋಪ ಮಾಡಿದ್ದರು. ಅದಕ್ಕೀಗ ಉಪ್ಪಿ ತಕ್ಕ ಉತ್ತರ ನೀಡಿ ಟೀಕಿಸುವವರ ಬಾಯಿ ಮುಚ್ಚಿಸಿದ್ದಾರೆ.
ಅಷ್ಟಕ್ಕೂ ಏನಿದು ಪ್ರಕರಣ ಅಂದ್ರೆ, ಲಾಕ್ಡೌನ್ನಲ್ಲಿ ಆ್ಯಕ್ಟೀವ್ ಆಗಿರೋ ಉಪೇಂದ್ರ ಅವರ ಬಗ್ಗೆ ಯಾರೋ ಒಬ್ಬರು ರೈತರ ಭೂಮಿ ಕಿತ್ಕೊಂಡು ಉಪೇಂದ್ರ ರೆಸಾರ್ಟ್ ಮಾಡಿದ್ದಾರೆಂದು ಆರೋಪ ಮಾಡಿದ್ದರು. ಈ ಆರೋಪಕ್ಕೆ ಸ್ವತ: ಉಪ್ಪಿನೇ ಫೇಸ್ಬುಕ್ನಲ್ಲಿ ಪ್ರತಿಕ್ರಿಯೆ ನೀಡಿದ್ದು, ಆರೋಪ ಮಾಡುವುದಕ್ಕಿಂತ ಮುನ್ನ ದಾಖಲೆಗಳನ್ನು ಮೊದಲು ಪರಿಶೀಲಿಸಿ. 13-14 ವರ್ಷಗಳ ಹಿಂದೆ ಅಲ್ಲಿ ವಿಲೇಜ್ ಅಂತ ಒಂದು ರೆಸಾರ್ಟ್ ಇತ್ತು. ಅದು ಹರಾಜಿಗೆ ಬಂದಾಗ, ಸರ್ಕಾರದಿಂದ್ಲೇ ನೇರವಾಗಿ ಖರೀದಿ ಮಾಡಿದ್ದೇವೆ. ವಿಲೇಜ್ ಅಂತಿದ್ದ ರೆಸಾರ್ಟ್ ಅನ್ನ ರುಪ್ಪೀಸ್ ಆಗಿ ಬದಲಾಯಿಸಿದ್ದೇವೆ. ಹೀಗಾಗಿ ಅದು ಮೊದಲಿನಿಂದ್ಲೂ ರೆಸಾರ್ಟ್ ಆಗಿತ್ತು ಎಂದು ಹೇಳಿದ್ದಾರೆ.
ಇನ್ನು ರುಪ್ಪೀಸ್ ರೆಸಾರ್ಟ್ ಹಿಂದಿರೋರು ಕೃಷಿ ಭೂಮಿ. ಆ ಭೂಮಿಯನ್ನು ಶಿವಣ್ಣ ಎಂಬುವವರಿಂದ ಖರೀದಿ ಮಾಡಿದ್ದು, ಅಲ್ಲಿ ಕೃಷಿ ಬಿಟ್ಟರೆ ಬೇರೆ ಏನೂ ಮಾಡುತ್ತಿಲ್ಲ. ಈ ಹಿಂದೆ ಕೃಷಿ ಮಾಡಿದ ವಿಡಿಯೋವನ್ನೂ ಶೇರ್ ಮಾಡಿದ್ದೇನೆಂದು ಉಪೇಂದ್ರ ಹೇಳಿದ್ದಾರೆ.
ಪ್ರಜಾಕೀಯ ಪಕ್ಷ ಕಟ್ಟಿರೋ ಉಪೇಂದ್ರ ತಮ್ಮದೇ ತತ್ವಗಳನ್ನು ಇಟ್ಕೊಂಡು ಜನರ ಸೇವೆ ಮಾಡೋಕೆ ಮುಂದಾಗಿದ್ದಾರೆ. ಈ ವೇಳೆ ಜನರಿಗೆ ಯಾವುದೇ ಸಂಕಷ್ಟ ಎದುರಾದ್ರೂ, ಆಡಳಿತ ಪಕ್ಷವನ್ನಾಗಲಿ.. ಪ್ರತಿಪಕ್ಷವನ್ನಾಗಲಿ ಟೀಕಿಸಿಲ್ಲ. ಮೊದ್ಲಿಂದ್ಲೂ ಜನರು ಬದಲಾಗ್ಬೇಕು ಅಂತ ಹೇಳ್ತಿರೋ ಉಪ್ಪಿ ಮುಂದಿನ ದಿನಗಳಲ್ಲಿ ಪ್ರಜಾಕೀಯ ಪಕ್ಷವನ್ನು ಹೇಗೆ ನಡೆಸಿಕೊಂಡು ಹೋಗ್ತಾರೆ ಅನ್ನೋದು ಕುತೂಹಲ ಅವರ ಅಭಿಮಾನಿಗಳಲ್ಲಿದೆ.