ರಾಹುಲ್ ದ್ರಾವಿಡ್ ಸೌಮ್ಯ ಸ್ವಭಾವದ ಕ್ರಿಕೆಟರ್ ಆಗಿದ್ದವರು. ಫೀಲ್ಡ್ನಲ್ಲಿ ಇರ್ಲಿ.. ಫೀಲ್ಡ್ನಿಂದ ಆಚೆ ಇರಲಿ ವಿವಾದವನ್ನ ಮೈಮೇಲೆ ಎಳೆದುಕೊಂಡಿದ್ದೂ ತೀರಾ ವಿರಳ. ಅದಕ್ಕೆ ದ್ರಾವಿಡ್ ಅನ್ನ ಜೆಂಟಲ್ಮ್ಯಾನ್ ಬಾಯ್ತುಂಬಾ ಹೊಗಳಿತ್ತಾರೆ. ಆದ್ರೆ, ಕಳೆದೆರಡು ದಿನಗಳಿಂದ ದ್ರಾವಿಡ್ ನಟಿಸಿದ 11 ಸೆಕೆಂಡ್ಗಳ ಒಂದು ಜಾಹೀರಾತು ಬಾರೀ ಸದ್ದು ಮಾಡುತ್ತಿದೆ. ದ್ರಾವಿಡ್ ಹೀರೋ ಆಗಿ ಅಂತ ಒತ್ತಡ ಹೇರೋಕೆ ಶುರುವಾಗಿದೆ.
ಐಪಿಲ್ ಶುರುವಾಗ್ತಿದ್ದಂತೆ ಜಾಹೀರಾತುಗಳಿಗೇನು ಒಂದರ ಹಿಂದೊಂದರಂತೆ ಹುಟ್ಟುಕೊಳ್ತಾವೆ. ಇಂತಹದ್ರಲ್ಲಿ ರಾಹುಲ್ ದ್ರಾವಿಡ್ ಕೂಡ ಒಂದು ಆ್ಯಡ್ನಲ್ಲಿ ನಟಿಸಿದ್ರು. ಅದ್ರಲ್ಲಿ ದ್ರಾವಿಡ್ ಕಾಣಿಸಿಕೊಳ್ಳೋದು ಕೇವಲ 11 ಸೆಕೆಂಡ್ಗಳು ಮಾತ್ರ. ಇದೇ ಆ್ಯಡ್ ನೋಡಿ ನೆಟ್ಟಿಗರು ರಾಹುಲ್ ದ್ರಾವಿಡ್ರನ್ನ ಹೊಗಳಿ ಅಟ್ಟಕ್ಕೇರಿಸಿದೆ.
ರಿಯಲ್ ಲೈಫ್ನಲ್ಲಿ ರಾಹುಲ್ ದ್ರಾವಿಡ್ ಸೈಲೆಂಟ್.. ಆದ್ರೆ 11 ಸೆಕೆಂಡುಗಳು ಆ್ಯಡ್ನಲ್ಲಿ ಫುಲ್ ವೈಲೆಂಟ್. ಬೆಂಗಳೂರಿನ ಟ್ರಾಫಿಕ್ನಿಂದ ಬೇಸತ್ತ ದ್ರಾವಿಡ್ ಪಕ್ಕದ ಕಾರಿನಲ್ಲಿದ್ದ ಅಜ್ಜಿ ಮೇಲೆ ಹಾಲು ಎಸೆಯುತ್ತಾರೆ. ಕ್ರಿಕೆಟ್ ಬ್ಯಾಟ್ನಿಂದ ಮಿರರ್ ಒಡೆದು ಹಾಕ್ತಾರೆ. ಒಂದ್ಕಡೆ ಕನ್ನಡನೂ ಮಾತಾಡ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಇಂದಿರಾನಗರದ ಗುಂಡಾ ಅನ್ನೋ ಡೈಲಾಗ್ ಅಂತೂ ಟ್ರೋಲ್ ಮಾಡೋರಿಗೆ, ಮೆಮೆಗಳನ್ನ ಸೃಷ್ಟಿಸೋರಿಗೆ ಆಹಾರ ಆಗ್ಬಿಟ್ಟಿದೆ. ಆದ್ರೆ, ವಿಷಯ ಇದಲ್ಲ.. ನಮ್ಮ ಕನ್ನಡಿಗರು ಒಂದು ಬೇಡಿಕೆ ಇಟ್ಟಿದ್ದಾರೆ.
48 ವರ್ಷದ ಹ್ಯಾಂಡ್ಸಮ್ ಕ್ರಿಕೆಟರ್ಗೆ ಕನ್ನಡ ಸಿನಿಮಾಗಳಲ್ಲಿ ನಟಿಸಿ ಅಂತ ಒತ್ತಡ ಹೇರಿದ್ದಾರೆ. ಯಾಱರೋ ಹೀರೋ ಆಗ್ತಿದ್ದಾರೆ. ನಿಮ್ಮ ನಟನೆಯ ಕೌಶಲ್ಯ ಅವ್ರೆಲ್ಲರಿಗಿಂತ್ಲೂ ಚೆನ್ನಾಗಿದೆ. ದಯವಿಟ್ಟು ಕನ್ನಡ ಸಿನಿಮಾಗಳಲ್ಲಿ ನಟಿಸಿ ಅಂತಿದ್ದಾರೆ. ಆದ್ರೆ, ಈ ವಿಷ್ಯ ದ್ರಾವಿಡ್ವರೆಗೂ ತಲುಪುತ್ತಾ ಅನ್ನೋದೇ ಅನುಮಾನ. ಯಾಕಂದ್ರೆ, ದಿ ವಾಲ್ ಟ್ವಿಟ್ಟರ್, ಇನ್ಸ್ಟಾಗ್ರಾಂ, ಫೇಸ್ಬುಕ್ನಿಂದ ದೂರಾನೇ ಉಳಿದಿದ್ದಾರೆ.