ಕೊರೊನಾ ಬಂದು ಎಲ್ಲರ ಬಾಳಲ್ಲೂ ಒಂದೂವರೆ ವರ್ಷ ಕಿತ್ತುಕೊಂಡು ಬಿಡ್ತು. ಹಿಂಗೆ ಇನ್ನೊಂದು ವರ್ಷ ಹಾಳಾದ್ರು ಅಚ್ಚರಿ ಪಡಬೇಕಿಲ್ಲ. ಚಿತ್ರರಂಗಕ್ಕೆ ಇದರಿಂದ ಭಾರೀ ನಷ್ಟ ಆಗ್ತಿದೆ. ಕಳೆದ ವರ್ಷ ಬರಬೇಕಿದ್ದ ಚಿತ್ರಗಳೇ ಇನ್ನು ಡಬ್ಬಾದಲ್ಲಿದೆ. ಇನ್ನು ಈ ವರ್ಷದ ಸಿನಿಮಾ ಕಥೆಯನ್ನ ಯಾರಿಗ್ ಹೇಳೋದು. ಹೋದ್ಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿ ಅನ್ನೋ ತರ ಆಗಿದೆ. 2ನೇ ಅಲೆ ಕಮ್ಮಿಯಾಗಿ ಥಿಯೇಟರ್ ಬಾಗಿಲು ಓಪನ್ ಆಗ್ತಿದ್ದಂತೆ 3ನೇ ಸುಳಿವು ಸಿಕ್ತಿದೆ. ತೆಲುಗು ಸೂಪರ್ ಸ್ಟಾರ್ ಗಳಂತೂ ಈ ವರ್ಷದ ಸಹವಾಸವೇ ಸಾಕು ಅಂತ ಹೊಸ ವರ್ಷಕ್ಕೆ ಕಾಯ್ತಿದ್ದಾರೆ. ಹೊಸ ವರ್ಷದಲ್ಲಿ ಅದ್ರಲ್ಲೂ ಸಂಕ್ರಾಂತಿ ಸಂಭ್ರಮದಲ್ಲಿ ದೊಡ್ಡ ಚಿತ್ರಗಳ ಬಿಡುಗಡೆಗೆ ಮುಹೂರ್ತ ಫಿಕ್ಸ್ ಮಾಡ್ತಿದ್ದಾರೆ.
ಮಹೇಶ್ ಬಾಬು ಅಭಿನಯದ ಸರ್ಕಾರಿವಾರು ಪಾಟ, ಪ್ರಭಾಸ್- ಪೂಜಾ ಹೆಗ್ಡೆ ಜೋಡಿಯ ರಾಧೆಶ್ಯಾಮ್, ಪವನ್- ರಾಣಾ ಅಭಿನಯದ ಮತ್ತೊಂದು ಚಿತ್ರವನ್ನ ಸಂಕ್ರಾಂತಿಗೆ ರಿಲೀಸ್ ಮಾಡೋದಾಗಿ ಘೋಷಿಸಿದ್ದಾರೆ. ಈ ವರ್ಷ ಇನ್ನು 5 ತಿಂಗಳು ಬಾಕಿ ಇರೋವಾಗ್ಲೆ ಸಿನಿಮಾ ಬಿಡುಗಡೆನ ಮುಂದಿನ ವರ್ಷಕ್ಕೆ ಪೋಸ್ಟ್ ಪೋನ್ ಮಾಡ್ತಿದ್ದಾರೆ. ಕೊರೋನಾ ಹೋಗುವ ಲಕ್ಷಣಗಳು ಕಾಣ್ತಿಲ್ಲ. ಒಂದು ವೇಳೆ ಸಿನಿಮಾ ಪ್ರದರ್ಶನ ಶುರುವಾದ್ರು, ಈ ವರ್ಷ #RRR, ಕೆಜಿಎಫ್-2 ಚಿತ್ರಗಳು ರಿಲೀಸ್ ಆಗುವ ಸಾಧ್ಯತೆ ಇದೆ. ಹಾಗಾಗಿ ಟಾಲಿವುಡ್ ಸೂಪರ್ ಸ್ಟಾರ್ಸ್ ಜುಲೈನಲ್ಲೇ 2021ಕ್ಕೆ ಬೈ ಹೇಳಿ 2022ಕ್ಕೆ ಹಾಯ್ ಹೇಳ್ತಿದ್ದಾರೆ.
ಸಂಕ್ರಾಂತಿ ಅಂದ್ರೆ, ಸುಗ್ಗಿ ಹಬ್ಬ. ಹಬ್ಬದ ಸಂಭ್ರಮದಲ್ಲಿ ದೊಡ್ಡ ಸಿನಿಮಾಗಳು ಬಂದ್ರೆ, ಬಾಕ್ಸಾಫೀಸ್ ಶೇಕ್ ಆಗುತ್ತೆ. ಅದೇ ಕಾರಣಕ್ಕೆ ಜನವರಿ 2ನೇ ವಾರಕ್ಕಾಗಿ ತೆಲುಗು ಫಿಲ್ಮ್ ಮೇಕರ್ಸ್ ಕಾಯ್ತಿದ್ದಾರೆ. ಬೇರೆ ಸಿನಿಮಾಗಳ ಪೈಪೋಟಿ ಬೇಡ ಅಂತ ಮೊದ್ಲೆ ರಿಲೀಸ್ ಡೇಟ್ ಫಿಕ್ಸ್ ಮಾಡ್ತಿದ್ದಾರೆ. ಜನವರಿ ವೇಳೆಗೆ ಇನ್ನು ಏನೇನಾಗುತ್ತೋ ಗೊತ್ತಿಲ್ಲ.