ಆಸ್ಕರ್ ಪ್ರಶಸ್ತಿ ಅನ್ನೋ ಪ್ರತಿಯೊಬ್ಬ ಫಿಲ್ಮ್ ಮೇಕರ್ನ ಕನಸು. ನಿರ್ದೇಶಕ, ನಟ ತಂತ್ರಜ್ಞರು ಯಾರೇ ಇರ್ಲಿ. ಒಂದು ಆಸ್ಕರ್ ಆದ್ರೂ ಗೆಲ್ಲಬೇಕು ಅಂತಾನೇ ಸಿನಿಮಾ ಮಾಡ್ತಾರೆ. ಆದ್ರೆ, ಆ ಅದೃಷ್ಟ ಸಿಗೋದು ಕೇವಲ ಬೆರಳೆಣಿಕೆಯಷ್ಟು ಮಂದಿಗೆ ಮಾತ್ರ. ಅದ್ರಲ್ಲೂ ಭಾರತೀಯ ಸಿನಿಮಾ ಮಂದಿಗೆ ಮಾತ್ರ ಇದೊಂದು ಕನಸೇ ಸರಿ. ಆದ್ರೀಗ ಪ್ರಿಯಾಂಕಾ ಚೋಪ್ರಾ ನಟಿಸಿ, ಸಹ ನಿರ್ಮಾಣ ಮಾಡಿದ ವೈಟ್ ಟೈಗರ್ ಚಿತ್ರ ಆಸ್ಕರ್ ಅಂಗಳದಲ್ಲಿದೆ.
ಕೊರೊನಾದಿಂದಾಗಿ ಆಸ್ಕರ್ ಪ್ರಶಸ್ತಿ ಸಮಾರಂಭವನ್ನ ಸ್ಥಗಿತಗೊಳಿಸಲಾಗಿತ್ತು. ಆದ್ರೆ ಈ ವರ್ಷ ಕೊರೊನಾ ಮಧ್ಯೆನೂ ಆಸ್ಕರ್ ಪ್ರಶಸ್ತಿಯನ್ನ ನೀಡಲು ತೀರ್ಮಾನಿಸಲಾಗಿದೆ. ಹೀಗಾಗಿ ಏಪ್ರಿಲ್ 25ರಂದು ಆಸ್ಕರ್ ಪ್ರಶಸ್ತಿ ಸಮಾರಂಭ ಅದ್ಧೂರಿಯಾಗಿ ನಡೆಯಲಿದೆ.
ಆಸ್ಕರ್ ಆಯೋಜಕರು ಅಂತಿಮ ಹಂತಕ್ಕೆ ಆಯ್ಕೆಯಾಗಿರೋ ಸಿನಿಮಾಗಳ ಪಟ್ಟಿಯನ್ನ ಘೋಷಿಸಿದ್ದಾರೆ. ವಿಶೇಷ ಅಂದ್ರೆ, ಪ್ರಿಯಾಂಕಾ ಚೋಪ್ರಾ ನಟಿಸಿ, ನಿರ್ಮಿಸಿರೋ ವೈಟ್ ಟೈಗರ್ ಸಿನಿಮಾ ಕೂಡ ಇದೆ. ಈ ಬಾರಿ ಆಸ್ಕರ್ ಪಟ್ಟಿಯಲ್ಲಿ ಸೂರ್ಯ ನಟಿಸಿದ ಕ್ಯಾಪ್ಟನ್ ಗೋಪಿನಾಥ್ ಬಯೋಪಿಕ್ ಸೂರರೈ ಪೋಟ್ರು ಚಿತ್ರದ ಮೇಲೂ ನಿರೀಕ್ಷೆಯಿತ್ತು. ಆದ್ರೆ ಕೊನೆಯ ಹಂತದಲ್ಲಿ ಸಿನಿಮಾವನ್ನ ಅಂತಿಮ ಪಟ್ಟಿಯಿಂದ ಕೈಬಿಡಲಾಗಿದೆ.
ಪ್ರಿಯಾಂಕ ಚೋಪ್ರಾ ನಿರ್ಮಿಸಿ, ನಟಿಸಿದ ವೈಟ್ ಟೈಗರ್ ಬೆಸ್ಟ್ ಅಡಾಪ್ಟೆಡ್ ಸ್ಕ್ರೀನ್ ಪ್ಲೇ ವಿಭಾಗದಲ್ಲಿ ಅಂತಿಮ ಹಂತದಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಆಸ್ಕರ್ ಪಟ್ಟಿಯಲ್ಲಿ ಭಾರತದ ಒಂದು ಸಿನಿಮಾ ಇದೆ ಅನ್ನೋದು ಸಿನಿಪ್ರೇಮಿಗಳಲ್ಲಿ ಮಂದಹಾಸ ಮೂಡಿಸಿದೆ.
ಅಂದ್ಹಾಗೆ ಅಡಾಪ್ಟೆಡ್ ಸ್ಕ್ರೀನ್ ಪ್ಲೇ ವಿಭಾಗದಲ್ಲೂ ಕಾಂಪಿಟೇಷನ್ ಜೋರಾಗೇ ಇದೆ. ಪ್ರಿಯಾಂಕಾ ಚೋಪ್ರಾ, ರಾಜ್ಕುಮಾರ್ ರಾವ್ ನಟಿಸಿದ ಸಿನಿಮಾ ಗೆಲ್ಬೇಕು ಅಂದ್ರೆ, ಇನ್ನುಳಿದ ನಾಲ್ಕು ಸಿನಿಮಾಗಳನ್ನ ಸೋಲಿಸಬೇಕಿದೆ. ಆಸ್ಕರ್ ರೇಸ್ನಲ್ಲಿರೋ ಆ 5 ಸಿನಿಮಾಗಳ ಪಟ್ಟಿ ಇಲ್ಲಿದೆ.
Oscar 2021- Adapted Screenplay
Borat Subsequent Moviefilm
The Father
Nomadland
One Night in Miami
The White Tiger (Priyanak Chopra-Rajkumar Rao)
ಇನ್ನೂ 2021ರ ಆಸ್ಕರ್ ರೇಸ್ನಲ್ಲಿ ಸಾಕಷ್ಟು ಸಿನಿಮಾ ಅದೃಷ್ಟ ಪರೀಕ್ಷೆಗೆ ಇಳಿದಿವೆ. ಅದ್ರಲ್ಲೂ ಮಂಕ್ ಹಾಗೂ ಪ್ರಾಮಿಸಿಂಗ್ ವುಮೆನ್ ಸಿನಿಮಾಗಳು ಹಲವು ಕೆಟಗರಿಯಲ್ಲಿ ಸ್ಪರ್ಧೆಗೆ ಇಳಿದಿವೆ. ಇದ್ರಲ್ಲಿ ಯಾವ ಸಿನಿಮಾ ಎಷ್ಟು ಪ್ರಶಸ್ತಿ ಗೆಲ್ಲುತ್ತೋ ಏಪ್ರಿಲ್ 25ರ ವರೆಗೆ ಕಾಯ್ಲೇಬೇಕು.