ದೃಶ್ಯಂ 2 ಸಿನಿಮಾ ರಿಲೀಸ್ ಆದಲ್ಲಿಂದ ಪ್ರತಿಯೊಬ್ಬರೂ ನಿರ್ದೇಶಕ ಜೀತು ಜೋಸೆಫ್ಗೆ ಕೇಳ್ತಿರೋದು ಒಂದೇ ಪ್ರಶ್ನೆ. ದೃಶ್ಯೋ 3 ಯಾವಾಗ ಶುರುವಾಗುತ್ತೆ? ದೃಶ್ಯಂ ಮೂರನೇ ಚಾಪ್ಟರ್ ಬರುತ್ತಾ? ಕೇರಳದ ಕೊಟ್ಟಾಯಂನಲ್ಲಿ ಪ್ರೆಸ್ ಮೀಟ್ ಮಾಡುವ ವೇಳೆ ನೇರವಾಗಿ ಅಲ್ಲದಿದ್ದರೂ, ಪರೋಕ್ಷವಾಗಿ ದೃಶ್ಯಂ 3 ಮಾಡೋ ಬಗ್ಗೆ ಸುಳಿವು ನೀಡಿದ್ದಾರೆ. ದೃಶ್ಯಂ 2 ಸಿನಿಮಾ ಮಾಡೋಕೆ ತೆಗೆದುಕೊಂಡಿದ್ದಕ್ಕಿಂತ ಕಡಿಮೆ ಸಮಯದಲ್ಲಿ ಸಿನಿಮಾ ಮಾಡಲಿದ್ದಾರೆ.
‘‘ದೃಶ್ಯಂ ಸಿನಿಮಾ ಬಿಡುಗಡೆಯಾದಾಗ ನನಗೆ ಎರಡನೇ ಚಾಪ್ಟರ್ ಬಗ್ಗೆ ಯೋಚನೆನೇ ಬಂದಿರ್ಲಿಲ್ಲ. ಆದ್ರೆ, 2015ರಲ್ಲಿ ನಾನು ಸ್ಕ್ರಿಪ್ಟ್ ಬರೋಕೆ ಶುರುವಿಟ್ಕೊಂಡೆ. ಅದು ಕ್ಲಿಕ್ ಆಯ್ತು. ಈ ಸಮಯದಲ್ಲಿ ದೃಶ್ಯಂ 3 ಬರುತ್ತೆ ಅನ್ನೋದಕ್ಕೆ ನಾನು ಗ್ಯಾರಂಟಿ ಕೊಡಲಾರೆ. ನನಗೆ ಒಳ್ಳೆ ಕಥೆ ಸಿಕ್ಕರೆ, ಖಂಡಿತವಾಗಿಯೂ ನಾನು ಪಾರ್ಟಿ 3 ಮಾಡುತ್ತೇನೆ. ಕೇವಲ ಲಾಭಕ್ಕಾಗಿ ಈ ಸಿನಿಮಾವನ್ನ ಮಾಡೋದಿಲ್ಲ. ನನ್ನ ಕೈಯಲ್ಲಿ ಒಳ್ಳೆ ಸ್ಕ್ರಿಪ್ಟ್ ಇದೆ ಅಂತ ನನಗೆ ಅನಿಸಿದ್ರೆ ಮಾತ್ರ ಪಾರ್ಟ್ 3 ಮಾಡುತ್ತೇನೆ.’’
ಜೀತು ಜೋಸೆಫ್, ದೃಶ್ಯಂ ನಿರ್ದೇಶಕ
ಇದೇ ವೇಳೆ ದೃಶ್ಯಂ ಚಾಪ್ಟರ್ 3ರ ಕ್ಲೈಮಾಕ್ಸ್ ಖುಷಿಕೊಟ್ಟಿದೆ ಅಂತಾನೂ ಕೇಳಿದ್ದಾರೆ. ಆದ್ರೆ, ದೃಶ್ಯಂ ಪಾರ್ಟ್ 3 ಆಗೋದು ಉತ್ತಮ ಆರಂಭ ಹಾಗೂ ಸಿನಿಮಾದ ಮಧ್ಯಮವನ್ನ ಅವಲಂಭಿಸಿದೆ. ‘‘ ನನ್ನ ಬಳಿ ದೃಶ್ಯಂ 3 ಸಿನಿಮಾ ಕ್ಲೈಮ್ಯಾಕ್ಸ್ ಇದೆ. ನಾನು ಮೋಹನ್ ಲಾಲ್ಗೆ ಕ್ಲೈಮ್ಯಾಕ್ಸ್ ಹೇಳಿದಾಗ ಅವರೂ ಇಷ್ಟ ಪಟ್ಟರು. ಆದ್ರೆ ಒಂದು ಸಿನಿಮಾ ಕ್ಲೈಮ್ಯಾಕ್ ತನಕ ಹೋಗ್ಬೇಕು ಅಂದ್ರೆ, ಬಹಳಷ್ಟು ವಿಷಯಗಳು ಆಯಾ ಜಾಗದಲ್ಲಿ ಹೊಂದಿಕೊಳ್ಳಬೇಕಾಗುತ್ತೆ. ಮೂರನೇ ಸಿನಿಮಾ ಮಾಡೋಕೆ ಯಾವುದೇ ತೊಂದರೆಯಿಲ್ಲ. ನಾನು ವರ್ಕ್ಔಟ್ ಮಾಡೋಕೆ ಬಹಳಷ್ಟು ಪ್ರಯತ್ನ ಪಡುತ್ತೇನೆ. ಸಾಧ್ಯವಾಗದೇ ಹೋದ್ರೆ ಕೈ ಬಿಟ್ಟು ಬಿಡುತ್ತೇನೆ’’ ಎಂದಿದ್ದಾರೆ.
2013ರಲ್ಲಿ ನಿರ್ದೇಶಕ ಜೀತು ಜೋಸೆಫ್ ದೃಶ್ಯಂ 2ಗಾಗಿ ಕಥೆ ಬರೆಯಲು ಶುರು ಮಾಡಿದ್ದರು. ಆದ್ರೆ, ಅದು ಟೇಕ್ ಆಫ್ ಆಗೋಕೆ ಐದು ವರ್ಷ ಬೇಕಾಗಿತ್ತು. ಆದ್ರೆ, ಪಾರ್ಟ್ 3ಗೆ ಇಷ್ಟೊಂದು ಸಮಯ ತೆಗೆದುಕೊಳ್ಳುವುದಿಲ್ಲ. ಕಮ್ಮಿ ಅಂದ್ರೂ ಮೂರು ವರ್ಷ ಬೇಕೇ ಬೇಕು ಅಂತ ಜೀತು ಜೋಸೆಫ್ ಹೇಳಿದ್ದಾರೆ.