ದಳಪತಿ ವಿಜಯ್ಗಿಂದು 47ನೇ ಹುಟ್ಟುಹಬ್ಬದ ಸಂಭ್ರಮ. ಹಾಗಂತ ಕೇವಲ ವಿಜಯ್ಗೆ ಅಷ್ಟೇ ಅಲ್ಲ. ಅವರ ಅಭಿಮಾನಿಗಳಿಗೂ ಹಬ್ಬ. ಒಂದ್ವೇಳೆ ಕೊರೊನಾ ಹಾವಳಿ ಇಲ್ಲದೆ ಹೋಗಿದ್ದಿದ್ರೆ, ವಿಜಯ್ ಮನೆ ಮುಂದೆ ದೊಡ್ಡ ಜಾತ್ರೆನೇ ನಡೆದು ಹೋಗ್ತಿತ್ತಿತ್ತು. ಆದ್ರೂ ಅಭಿಮಾನಿಗಳಿಗೆ ಬೇಜಾರ್ ಇಲ್ಲ. ಯಾಕಂದ್ರೆ, ವಿಜಯ್ ಅಭಿನಯದ 65 ಸಿನಿಮಾದ ಎರಡೆರಡು ಪೋಸ್ಟರ್ಗಳನ್ನು ರಿಲೀಸ್ ಮಾಡಲಾಗಿದೆ.
ಜೂನ್ 21ರಂದು ವಿಜಯ್ 65ನೇ ಚಿತ್ರ ಬೀಸ್ಟ್ ಫಸ್ಟ್ ಲುಕ್ ರಿಲೀಸ್ ಮಾಡಲಾಗಿತ್ತು. ವಿಜಯ್ ಗನ್ ಹಿಡಿದು ಬಂದಿದ್ದ ಲುಕ್ ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದರು. ಫ್ಯಾನ್ಸ್ ಅಂತೂ ಸೋಶಿಯಲ್ ಮೀಡಿಯಾದಲ್ಲಿ ವಿಜಯ್ ಬೀಸ್ಟ್ ಅವತಾರ ಕಂಡು ಟ್ರೆಂಟ್ ಮಾಡಿದ್ದೇ ಮಾಡಿದ್ದರು. ಫಸ್ಟ್ ಲುಕ್ ಟ್ರೆಂಟಿಂಗ್ ಆಗ್ತಿದ್ದಂತೆ ಮತ್ತೊಂದು ಪೋಸ್ಟರ್ ರಿಲೀಸ್ ಆಗಿದೆ.
ವಿಜಯ್ ಹುಟ್ಟುಹಬ್ಬಕ್ಕಾಗಿ ಒಂದೇ ದಿನದ ಎರಡೆರಡು ಪೋಸ್ಟರ್ ರಿಲೀಸ್ ಆಗಿದ್ದು ಇದೇ ಮೊದಲ. ನಿರ್ಮಾಣ ಸಂಸ್ಥೆ ಸನ್ ಪಿಕ್ಚರ್ಸ್ ಬೀಸ್ಟ್ ಚಿತ್ರದ ಮತ್ತೊಂದು ಪೋಸ್ಟರ್ ಅನ್ನ ರಿಲೀಸ್ ಮಾಡಿದೆ. ಈ ಪೋಸ್ಟರ್ ರಿಲೀಸ್ ಆದ್ಮೇಲಂತೂ ವಿಜಯ್ ಅಭಿಮಾನಿಗಳ ಕಾಲು ಭೂಮಿ ಮೇಲಿಲ್ಲ. ನೆಚ್ಚಿನ ನಟನ ಎರಡೆರಡು ಲುಕ್ ಕಂಡು ಫಿದಾ ಆಗಿದ್ದಾರೆ.
ಬೀಸ್ಟ್ ಸಿನಿಮಾವನ್ನು ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶಿಸುತ್ತಿದ್ದಾರೆ. ಪೂಜಾ ಹೆಗ್ಡೆ ಇದೇ ಮೊದಲ ಬಾರಿಗೆ ವಿಜಯ್ ಜೊತೆ ಸ್ಕ್ರೀನ್ ಶೇರ್ ಮಾಡಿಕೊಳ್ತಿದ್ದಾರೆ. ವಿಜಯ್ 65ನೇ ಸಿನಿಮಾ ಜೊತೆನೇ 66ನೇ ಚಿತ್ರದ ಬಗ್ಗೆನೂ ಟಾಕ್ ಶುರುವಾಗಿದೆ. ಮುಂದಿನ ಚಿತ್ರಕ್ಕೆ ವಿಜಯ್ ₹100 ಕೋಟಿ ಸಂಭಾವನೆ ಪಡೆದಿದ್ದಾರೆ ಅನ್ನೋ ಮಾತು ಕೇಳಿ ಬರ್ತಿವೆ.