ಟಾಲಿವುಡ್ ಸಿನಿಮಾಗೆ ಸಿದ್ ಶ್ರೀರಾಮ್ ಹಾಡಿದ್ದಾರೆ ಅಂದ್ರೆ, ಆ ಹಾಡು ಸೂಪರ್ ಡೂಪರ್ ಹಿಟ್ ಆಗೋದ್ರಲ್ಲಿ ಡೌಟೇ ಇಲ್ಲ. ಇನ್ನು ಸಿನಿಮಾನೂ ಅಷ್ಟೇ ಬ್ಲಾಕ್ ಬಸ್ಟರ್ ಹಿಟ್ ಆಗ್ಬಿಡುತ್ತೆ. ಉದಾಹರಣೆಗೆ ಹೇಳ್ಬೇಕಂದ್ರೆ, ಅಲ್ಲು ಅರ್ಜುನ್ ನಟಸಿದ ಅಲಾ ವೈಕುಂಠಪುರಮುಲೋ ಚಿತ್ರದ ಸಾಮಜವರಗಮನ, ಗೀತಾಗೋವಿಂದಂ ಇಂಕೇಮ್ ಇಂಕೇಮ್ ಕಾವಾಲೇ, ಡಿಯರ್ ಕಾಮ್ರೇಡ್, ಟ್ಯಾಕ್ಸಿವಾಲಾ ಸೇರಿದಂತೆ ಸಾಕಷ್ಟು ಸಿನಿಮಾಗಳಿಗೆ ಧ್ವನಿ ನೀಡಿದ್ದಾರೆ. ಇದೇ ಗಾಯಕ ಈಗ ಮತ್ತೊಂದು ಕನ್ನಡ ಹಾಡನ್ನ ಹಾಡಿದ್ದಾರೆ.
ಅರ್ಜುನ್ ಜನ್ಯ ಸಂಗೀತ ನೀಡುತ್ತಿರೋ ಭಜರಂಗಿ 2 ಸಿನಿಮಾಗೆ ಈಗಾಗ್ಲೇ ಒಂದು ಹಾಡನ್ನ ಹಾಡಿದ್ದಾರೆ. ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ನಟನೆಯ ಈ ಸಿನಿಮಾಗೆ ಸಿದ್ ಶ್ರೀರಾಮ್ ಹಾಡಿರೋದು ಮತ್ತಷ್ಟು ಕಿಕ್ ಕೊಟ್ಟಂತಾಗಿದೆ. ಈಗಾಗ್ಲೇ ಹಾಡಿನ ರೆಕಾರ್ಡಿಂಗ್ ಮುಗಿದಿದ್ದು, ಫೈನಲ್ ಮಿಕ್ಸಿಂಗ್ ನಡೆಯುತ್ತಿದೆ. ಅಂದ್ಹಾಗೆ ಎ. ಹರ್ಷ ಈ ಸಿನಿಮಾವನ್ನ ನಿರ್ದೇಶಿಸುತ್ತಿದ್ದಾರೆ.
ಭಜರಂಗಿ 2 ಗಾಗಿ ಸಿದ್ ಶ್ರೀರಾಮ್ ಹಾಡಿರೋ ಹಾಡು ಏಪ್ರಿಲ್ 9 ರಂದು ಬಿಡುಗಡೆಯಾಲಿದೆ. ಸಂಜೆ 4 ಗಂಟೆ 11 ನಿಮಿಷಕ್ಕೆ ರಿಲೀಸ್ ಮಾಡೋದಾಗಿ ಚಿತ್ರತಂಡ ಈಗಾಗ್ಲೇ ಅನೌನ್ಸ್ ಮಾಡಿದೆ. ಈಗಾಗ್ಲೇ ಭಜರಂಗಿ 2 ಸಿನಿಮಾದ ಭಜರೇ ಭಜರೇ ಭಜರಂಗಿ ಹಾಡು ಬಿಡುಗಡೆಯಾಗಿ ಹಿಟ್ ಲಿಸ್ಟ್ ಸೇರಿದೆ.
ಸಿದ್ ಶ್ರೀರಾಮ್ಗೆ ಇದು ಮೊದಲ ಕನ್ನಡ ಸಾಂಗ್ ಅಲ್ಲ. ಡಿಯರ್ ಕಾಮ್ರೇಡ್ ಕನ್ನಡ ವರ್ಷನ್ಗೆ ಒಂದು ಹಾಡನನ್ನ ಹಾಡಿದ್ದರು. ಅಲ್ಲದೆ, ಟಾಮ್ ಅಂಡ್ ಜೆರ್ರಿ ಸಿನಿಮಾದಲ್ಲೂ ಹಾಡಿಗೆ ಧ್ವನಿ ನೀಡಿದ್ದಾರೆ. ಆದ್ರೆ, ಶಿವಣ್ಣನ ಸಿನಿಮಾಗಾಗಿ ಹಾಡಿರೋ ಈ ಹಾಡು ಹೇಗಿರುತ್ತೆ? ಅಂತ ಕೇಳೋಕೆ ಸಂಗೀತ ಪ್ರಿಯರು ತುದಿಗಾಲಲ್ಲಿ ನಿಂತಿದ್ದಾರೆ.