ತೆಲುಗಿನ ಬೋಲ್ಡ್ ಸಿನಿಮಾ RX100 ಮೂಲಕ ಭಾರೀ ಸುದ್ದಿಯಲ್ಲಿದ್ದ ನಟಿ ಪಾಯಲ್ ರಜಪೂತ್. ಕಳೆದ ಕೆಲವು ದಿನಗಳಿಂದ ಈ ಬೋಲ್ಡ್ ನಟಿಯನ್ನು ಕನ್ನಡಕ್ಕೆ ಕರೆದುಕೊಂಡು ಬರುವ ಪ್ರಯತ್ನಗಳು ನಡೀತಾನೇ ಇತ್ತು. ಕೊನೆಗೂ ಪಾಯಲ್ ರಜಪೂತ್ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದಾರೆ. ಡಾಲಿ ಧನಂಜಯ್ ನಟನೆಯ ಹೆಡ್ ಬುಷ್ ಚಿತ್ರಕ್ಕೆ ಪಾಯಲ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಆಗಸ್ಟ್ 9ರಿಂದ ಚಿತ್ರೀಕರಣ ಆರಂಭ ಆಗಿದೆ.
ಡಾಲಿ ಧನಂಜಯ ನಟಿಸ್ತಿರೋ ಹೆಡ್ – ಬುಷ್ ಚಿತ್ರಕ್ಕೆ ನಾಯಕಿ ಸಿಕ್ಕಿದ್ದಾಳೆ. ಬೆಂಗಳೂರು ಭೂಗತಲೋಕದ ಮಾಜಿ ದೊರೆ ಜಯರಾಜ್ ಜೀವನವನ್ನಾಧರಿಸಿ ನಿರ್ದೇಶಕ ಶೂನ್ಯ ಈ ಚಿತ್ರವನ್ನ ಕಟ್ಟಿ ಕೊಡ್ತಿದ್ದಾರೆ. ಇತ್ತೀಚೆಗೆ ನಟ ಧನಂಜಯ ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಚಿತ್ರೀಕರಣಕ್ಕೆ ಸಿದ್ಧತೆ ನಡೀತಿದೆ. ಇದೇ ಹೊತ್ತಲ್ಲಿ ದೆಹಲಿ ಮೂಲದ ಪಾಯಲ್ ರಾಜ್ ಪುತ್ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.
ತೆಲುಗಿನ RX 100 ಚಿತ್ರದಿಂದ ಭಾರಿ ಸದ್ದು ಮಾಡಿದ ಚೆಲುವೆ ಈಕೆ. ಪಂಜಾಬಿ, ಹಿಂದಿ, ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿರೋ ದೆಹಲಿ ಚೆಲುವೆಯ ಚೊಚ್ಚಲ ಕನ್ನಡ ಸಿನಿಮಾ ಹೆಡ್ ಬುಷ್. ಬೋಲ್ಡ್ ಪಾತ್ರಗಳಿಂದಲೇ ಭಾರೀ ಕ್ರೇಜ್ ಸೃಷ್ಟಿಸಿಕೊಂಡಿರೋ ಪಾಯಲ್, ಕನ್ನಡದಲ್ಲಿ ಚಿತ್ರದಲ್ಲಿ ಯಾವ ಪಾತ್ರ ಮಾಡ್ತಾರೆ ಅನ್ನೋದು ಗೊತ್ತಾಗಿಲ್ಲ. ನಾಯಕಿ ಆಗಿ ನಟಿಸ್ತಾರಾ ಇಲ್ಲ ಪೋಷಕ ಕಲಾವಿದೆ ಆಗಿ ಕಾಣಿಸಿಕೊಳ್ತಾರಾ ಅನ್ನೋದು ಇನ್ನಷ್ಟೆ ಗೊತ್ತಾಗಬೇಕಿದೆ.