ಯುವರತ್ನ ಸಿನಿಮಾ ವಿಶ್ವದಾದ್ಯಂತ ಏಪ್ರಿಲ್ 01ರಂದು ಬಿಡುಗಡೆಯಾಗಿದೆ. ಪುನೀತ್ ರಾಜ್ಕುಮಾರ್ ಬಹಳ ದಿನಗಳ ಬಳಿಕ ಕಾಲೇಜು ವಿದ್ಯಾರ್ಥಿಯಾಗಿ ನಟಿಸಿರೋದ್ರಿಂದ ಅಪ್ಪು ಫ್ಯಾನ್ಸ್ ಫುಲ್ ಖುಷಿಯಲ್ಲಿದ್ದಾರೆ. ಹೀಗಾಗಿ ಥಿಯೇಟರ್ಗಳಲ್ಲಿ ಹೋಗಿ ಮುಗಿಬಿದ್ದು ಸಿನಿಮಾ ನೋಡ್ತಿದ್ದಾರೆ. ಆದ್ರೆ, ಬೆಂಗಳೂರಿನಲ್ಲಿರೋ ಊರ್ವಶಿ ಚಿತ್ರಮಂದಿರ ಅಪ್ಪು ಅಭಿಮಾನಿಗಳಿಗೆ ನಿರಾಸೆಯುಂಟು ಮಾಡಿದೆ.
ಬೆಂಗಳೂರಿನಲ್ಲಿರೊ ಊರ್ವಶಿ ಚಿತ್ರಮಂದಿರದಲ್ಲಿ ಸಂಜೆ ಶೋಗೆ ಸಿನಿಮಾ ನೋಡಲು ಪುನೀತ್ ಅಭಿಮಾನಿಗಳು ಹೋಗಿದ್ದರು. ಆದ್ರೆ ಸಿನಿಮಾ ಆರಂಭದ ಆದ ಕೆಲವೇ ಕ್ಷಣಗಳಲ್ಲಿ ಆಡಿಯೋ ಸರಿಯಾಗಿ ಕೇಳಿಸುತ್ತಿರಲಿಲ್ಲ. ಹೀಗಾಗಿ ಅಭಿಮಾನಿಗಳು ರೊಚ್ಚಿಗೆದ್ದು ಚಿತ್ರಮಂದಿರದಿಂದ ಹೊರಬಂದಿದ್ದಾರೆ.
ಊರ್ವಶಿ ವ್ಯವಸ್ಥಾಪಕರ ವಿರುದ್ಧ ತಿರುಗಿಬಿದ್ದ ಅಪ್ಪು ಫ್ಯಾನ್ಸ್ ಕೊಟ್ಟ ಹಣವನ್ನ ಹಿಂತಿರುಗಿಸುವಂತೆ ಪಟ್ಟು ಹಿಡಿದು ಕೂತಿದ್ದಾರೆ. ಕೆಲ ಕಾಲ ಪುನೀತ್ ಫ್ಯಾನ್ಸ್ ಹಾಗೂ ಊರ್ವಶಿ ಮಾಲೀಕರ ಮಧ್ಯೆ ಮಾತಿನ ಜಟಾಪಟಿ ಕೂಡ ನಡೆಯಿತು. ಹೀಗಾಗಿ ಕೆಲ ಹೊತ್ತು ಸಿನಿಮಾ ಮತ್ತೆ ಆರಂಭ ಆಗಿರಲಿಲ್ಲ.
ಲಾಕ್ಡೌನ್ನಿಂದಾಗಿ ಸುಮಾರು 8 ತಿಂಗಳು ಚಿತ್ರಮಂದಿರವನ್ನ ಬಂದ್ ಮಾಡಲಾಗಿತ್ತು. ಹೀಗಾಗಿ ತೊಂದರೆಯಾಗಿದೆ. ಸಿನಿಮಾ ಆರಂಭಕ್ಕೂ ಮುನ್ನ ಪರಿಶೀಲನೇ ಮಾಡಿ ಸಿನಿಮಾ ಶುರು ಮಾಡಿದ್ದೇವು. ಆದ್ರೂ, ತಾಂತ್ರಿಕ ಸಮಸ್ಯೆ ಎದುರಾಗಿದೆ. ಹೀಗಾಗಿ ಪ್ರೇಕ್ಷಕರು ಸಹಕರಿಸಬೇಕಿದೆ ಅಂತ ಮಾಧ್ಯಮಗಳಿಗೆ ಊರ್ವಶಿ ಥಿಯೇಟರ್ ಸಿಬ್ಬಂದಿ ಹೇಳಿದ್ದಾರೆ.