ಏಪ್ರಿಲ್ 6 ರಂದು ತಮಿಳುನಾಡಿನಲ್ಲಿ ವಿಧಾನಸಭೆಗೆ ಮತದಾನ ಮಾಡುವ ಪ್ರಕ್ರಿಯೆ ಆರಂಭ ಆಗಿದೆ. ಜನರು ಬೆಳಗಿನಿಂದ್ಲೇ ಸರದಿ ಸಾಲಿನಲ್ಲಿ ನಿಂತು ವೋಟು ಹಾಕುತ್ತಿದ್ದರೆ. ಎಂದಿನಂತೆ ಈ ಬಾರಿ ಕೂಡ ಸೂಪರ್ಸ್ಟಾರ್ ತಲಾ ಅಜಿತ್ ಸರದಿಯಲ್ಲಿ ನಿಂತು ವೋಟು ಮಾಡಿದ್ದಾರೆ.
ತಮಿಳುನಾಡಿನ ಸೂಪರ್ಸ್ಟಾರ್ ತಲಾ ಅಜಿತ್ ಇಷ್ಟ ಆಗೋದೇ ಈ ಕಾರಣಕ್ಕೆ.. ಸ್ಟಾರ್ ಅನ್ನೋದನ್ನ ಲೆಕ್ಕಿಸದೆ. ತನ್ನನ್ನು ಜನರು ಮುತ್ತಿಕೊಳ್ಳಬಹುದು ಅನ್ನೋ ಸಣ್ಣ ಅಳುಕು ಇಲ್ಲದೆ ಸಾಮಾನ್ಯ ಜನರ ಮಧ್ಯೆ ಪತ್ನಿ ಜೊತೆ ನಿಂತು ವೋಟು ಮಾಡಿದ್ದಾರೆ. ಈ ಫೋಟೊಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಸೂಪರ್ಸ್ಟಾರ್ ಅಜಿತ್ಗೆ ಪತ್ನಿ ಶಾಲಿನಿ ಜೊತೆಯಾಗಿದ್ದಾರೆ. ಬೆಳ್ಳಬೆಳಗ್ಗೆ ತಿರುವನ್ಮಿಯುರ್ ಕುಪ್ಪಂ ಬೀಚ್ ಬಳಿ ವೋಟ್ ಹಾಕಲು ಬಂದಿದ್ದರು. ಈ ವೇಳೆ ಜನರ ಜೊತೆ ಸಾಲಿನಲ್ಲಿ ನಿಂತು ತಮ್ಮ ಮತ ಚಲಾಯಿಸಿದ್ದಾರೆ. ಈ ಫೋಟೋಗಳೇ ಈಗ ವೈರಲ್ ಆಗಿವೆ.
ತಲಾ ಅಜಿತ್ ವೋಟ್ ಮಾಡಲು ಬಂದಿರೋ ವಿಷಯ ತಿಳಿಯುತ್ತಿದ್ದಂತೆ ಅಜಿತ್ ನೋಡಲು ಜನರು ಮುಗಿಬಿದ್ದಿದ್ದರು. ತಲಾ ಅಂತ ಕೂಗಿ ಅಜಿತ್ ಬಳಿ ಬರಲು ಮುಂದಾದಾಗ, ಎಚ್ಚೆತ್ತುಕೊಂಡ ಪೊಲೀಸರು ಅಜಿತ್ ಹಾಗೂ ಪತ್ನಿ ಶಾಲಿನಿಯನ್ನ ಸುತ್ತವರೆದು ಭೂತ್ ಬಳಿ ಕರೆದುಕೊಂಡು ಹೋದ್ರು.
ಅಜಿತ್ ಜೊತೆಗೆ ಸೂಪರ್ಸ್ಟಾರ್ ರಜನಿಕಾಂತ್, ಕಮಲ್ ಹಾಸನ್, ಸೂರ್ಯ ಹಾಗೂ ಸೈಕಲ್ ಮೇಲೆ ಬಂದು ತಳಪತಿ ವಿಜಯ್ ವೋಟ್ ಮಾಡಿದ್ದಾರೆ.