ತಮಿಳು ಚಿತ್ರರಂಗದ ಹಾಸ್ಯ ನಟ ವಿವೇಕ್ಗೆ ಶುಕ್ರವಾರ ಹೃದಯಘಾತವಾಗಿತ್ತು. ಅರೆಪ್ರಜ್ಞಾವಸ್ಥೆಯ ಸ್ಥಿತಿಯಲ್ಲಿದ್ದ ವಿವೇಕ್ರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನ ನೀಡಲಾಗುತ್ತಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ಏಪ್ರಿಲ್ 17ರ ಬೆಳಗ್ಗೆ 4.35ರ ಸುಮಾರಿಗೆ ವಿವೇಕ್ ನಿಧನ ಹೊಂದಿದ್ದಾರೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ವಿವೇಕ್ ಹೃದಯಘಾತವಾಗುವ ಒಂದು ದಿನ ಮುನ್ನ, ಅಂದ್ರೆ, ಏಪ್ರಿಲ್ 15ರಂದು ಚೆನ್ನೈನ ಅಮಂದೂರರ್ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಕೊರೊನಾ ಲಸಿಕೆ ಪಡೆದು ಮರಳಿದ್ದರು. ಕೊರೊನಾ ಲಸಿಕೆಯಿಂದ್ಲೇ ವಿವೇಕ್ ಹೃದಯಘಾತವಾಗಿದೆಯೆಂದು ಸುದ್ದಿ ಕೂಡ ಹಬ್ಬಿತ್ತು. ಆದ್ರೆ, ಶುಕ್ರವಾರವೇ ತಮಿಳುನಾಡು ಸರ್ಕಾರ ಕೊವಿಡ್ ಲಸಿಕೆಯಿಂದಾದ ಹೃದಯಘಾತವಲ್ಲ. ವಿವೇಕ್ ಲಸಿಕೆ ಪಡೆದ ದಿನವೇ 830 ಮಂದಿ ಲಸಿಕೆ ಪಡೆದಿದ್ದಾರೆ. ಅವರೆಲ್ಲರೂ ಚೆನ್ನಾಗಿದ್ದಾರೆ. ಲಸಿಕೆಗೂ ಹೃದಯಘಾತ ಸಂಭವಿಸಿದ್ದಕ್ಕೂ ಸಂಬಂಧವಿಲ್ಲವೆಂದು ಹೇಳಿತ್ತು.
ಇತ್ತ ಖಾಸಗಿ ಆಸ್ಪತ್ರೆ ಕೂಡ ವಿವೇಕ್ ಹೃದಯಘಾತ ಲಸಿಕೆಯಿಂದ ಸಂಭವಿಸಿದ್ದಲ್ಲ ಎಂದು ಹೇಳಿದೆ. ವಿವೇಕ್ಗೆ ಶೇ.100ರಷ್ಟು ಬ್ಲಾಕೇಜ್ ಇತ್ತು. ಹೀಗಾಗಿ ಆ್ಯಂಜಿಯೋಪ್ಲಾಸ್ಟಿ ಹಾಗೂ ಎಮರ್ಜೆನ್ಸಿ ಕೊರೊನರಿ ಆ್ಯಂಜಿಯೋಗ್ರಾಮ್ ಮಾಡಲಾಗಿತ್ತು. ಆದ್ರೂ, ವಿವೇಕ್ ಅವರನ್ನ ಬದುಕಿಸಿಕೊಳ್ಳಲು ಆಗಲಿಲ್ಲ. ಹಾಸ್ಯ ದಿಗ್ಗಜನ ನಿಧನದ ಸುದ್ದಿ ಕೇಳಿ ತಮಿಳು ಚಿತ್ರರಂಗ ಶಾಕ್ ಆಗಿದೆ.
59 ವರ್ಷದ ವಿವೇಕ್ ಅಗಲಿಕೆಯ ನೋವಿನಲ್ಲಿ ತಮಿಳು ಚಿತ್ರರಂಗವಿದೆ. ವಿವೇಕ್ ಕನ್ನಡ ಸಿನಿಮಾದಲ್ಲೂ ನಟಿಸಿದ್ದರು. ನೆನಪಿರಲಿ ಪ್ರೇಮ್ ನಟಿಸಿದ್ದ ಚಂದ್ರ ಚಿತ್ರದಲ್ಲಿ ವಿವೇಕ್ ಹಾಸ್ಯ ನಟನಾಗಿ ನಟಿಸಿದ್ದರು. ಸ್ವತ: ಕನ್ನಡದಲ್ಲಿ ಡಬ್ ಮಾಡಿ ಕನ್ನಡಿಗೆ ಹತ್ತಿರವಾಗಿದ್ದರು. ಆದ್ರಿಂದ ಅನಿರೀಕ್ಷಿತವಾಗಿ ಅಪಾರ ಅಭಿಮಾನಿಗಳನ್ನ ಬಿಟ್ಟು ಅಗಲಿದ್ದಾರೆ.