ಬಾಲಿವುಡ್ ಹಾಟ್ ಹಂಕ್ ಹೃತಿಕ್ ರೋಶನ್ ಮತ್ತು ಪತ್ನಿ ಸುಜೇನ್ ಖಾನ್ ವಿಚ್ಛೇದನ ಪಡೆದು ಆರು ವರ್ಷಗಳೇ ಸಂದಿವೆ. ಆದರೆ ತಮ್ಮ ಇಬ್ಬರು ಮಕ್ಕಳಿಗಾಗಿ ಈ ದಂಪತಿ ಬೇರೆಯಾಗಿದ್ದರೂ ಜೊತೆಯಾಗಿ ಇರುವಂತಿದ್ದಾರೆ. ಅಂದ್ರೆ ಮಕ್ಕಳ ವಿಚಾರ ಬಂದಾಗ ಇಬ್ಬರೂ ಒಟ್ಟಾಗುತ್ತಾರೆ. ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಮಕ್ಕಳಿಗಾಗಿ ಸುಜೇನ್ ಹೃತಿಕ್ ಮನೆಗೆ ಶಿಫ್ಟ್ ಆಗಿದ್ದು ಇದಕ್ಕೆ ಸಾಕ್ಷಿ.
ಸುಜೇನ್ ತಮ್ಮ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ತಮ್ಮದೊಂದು ಫೋಟೋ ಶೇರ್ ಮಾಡಿದ್ದಾರೆ. ಕಪ್ಪು ಬಣ್ಣದ ರಿಪ್ಡ್ ಜೀನ್ಸ್ ತೊಟ್ಟು ಅದರ ಮೇಲೆ ಬಿಳಿ ಉದ್ದನೆಯ ಶರ್ಟ್ ಧರಿಸಿದ್ದಾರೆ. ಮೊದಲು ಶರ್ಟ್ ಮೇಲೆ ಅಗಲವಾದ ಬೆಲ್ಟ್ ಧರಿಸಿ ತಮ್ಮ ಉದ್ದನೆಯ ಕನ್ನಡಿಯ ಮುಂದೆ ನಿಂತು ಫೋಟೋ ತೆಗೆದಿದ್ದಾರೆ. ಈ ಫೋಟೋವನ್ನು ಇನ್ಟ್ರಾಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಫೋಟೋ ಜೊತೆಯಲ್ಲಿ ಸುಜೇನ್ ಒಂದು ವಾಕ್ಯ ಬರೆದಿದ್ದಾರೆ. “ಕೆಲವೊಮ್ಮೆ ನನ್ನ ತಲೆಯಲ್ಲಿ ನಾನೊಬ್ಬ ಹುಡುಗ ಎನಿಸುತ್ತದೆ” ಎಂದು ಬರೆದಿದ್ದಾರೆ ಈ ಚೆಲುವೆ. ಖ್ಯಾತ ಇಂಟೀರಿಯರ್ ಡಿಸೈನರ್ ಆಗಿರುವ ಸುಜೇನ್ ರ ಈ ವಾಕ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಆದ್ರೆ ಮಾಜಿ ಪತಿ ಹೃತಿಕ್ ರೋಶನ್ ಮಾತ್ರ ಇದಕ್ಕೆ ನಕ್ಕು, ‘ಚಿತ್ರ ಸುಂದರವಾಗಿದೆ’ ಎಂದು ಕಮೆಂಟ್ ಮಾಡಿದ್ದಾರೆ. ಸುಜೇನ್ ಆಪ್ತ ಗೆಳತಿ ರವೀನಾ ಟಂಡನ್ ವೃಶ್ಚಿಕ ರಾಶಿಯ ಬಹುಪಾಲು ಹೆಣ್ಣುಮಕ್ಕಳಿಗೆ ಹೀಗೇ ಅನಿಸುತ್ತೆ ಎಂದು ಕಮೆಂಟ್ ಮಾಡಿದ್ದಾರೆ.
ನಂತರ ಸಂಪೂರ್ಣ ರೆಡಿಯಾದಮೇಲಿನ ಚಿತ್ರವನ್ನು ಕೂಡಾ ಶೇರ್ ಮಾಡಿದ್ದಾರೆ ಸುಜೇನ್. ಅಚ್ಚ ಬಿಳುಪಿನ ಸ್ಪೋರ್ಟ್ಸ್ ಶೂ ಧರಿಸಿ, ಬಿಳಿಯ ಶರ್ಟ್ ನ್ನು ಟಕ್ ಮಾಡಿರುವ ಸುಜೇನ್ ನಿಜಕ್ಕೂ ಮುದ್ದಾಗಿ ಕಾಣ್ತಿದ್ದಾರೆ. ಅಂದ್ಹಾಗೆ ಹೃತಿಕ್ ಮತ್ತು ಸುಜೇನ್ ವಿಚ್ಛೇದಿತರಾಗಿದ್ದರೂ ಅದ್ಭುತವಾಗಿ ಮಕ್ಕಳನ್ನು ಬೆಳೆಸುವುದು ಹೇಗೆ ಎನ್ನುವುದಕ್ಕೆ ಅತ್ಯುತ್ತಮ ಉದಾಹರಣೆ ಆಗಿರುವ ಜೋಡಿ.