ಸನ್ನಿ ಲಿಯೋನಿ ಬಾಲಿವುಡ್ನಲ್ಲಿ ಮಿಂಚ್ತಿರೋ ಸ್ಟಾರ್ ನಟಿ. ಕೇವಲ ಸಿನಿಮಾ ಅಷ್ಟೇ ಅಲ್ಲ. ರಿಯಾಲಿಟಿ ಶೋಗಳಲ್ಲಿಯೂ ಕಾಣಿಸಿಕೊಳ್ತಾರೆ. ಹೀಗೆ ರಿಯಾಲಿಟಿ ಶೋ ಒಂದಕ್ಕೆ ರೆಡಿಯಾಗುತ್ತಿದ್ದ ಸನ್ನಿಲಿಯೋನಿ ಹಳದಿ ಬಣ್ಣದ ಹಾಲ್ಟರ್ ನೆಕ್ ಗೌನ್ ತೊಡಬೇಕಿತ್ತು. ಮೇಕಪ್, ಹೇರ್ ಸ್ಟೈಲ್ ಆದ ಬಳಿಕ ಇನ್ನೇನು ಗೌನ್ ತೊಡ್ವೇಕು, ಅಷ್ಟರಲ್ಲೇ ಸರ್ಕಸ್ ಶುರುವಾಗಿತ್ತು. ಹಳದಿ ಬಣ್ಣದ ಗೌನ್ ಜಿಪ್ ಹಾಕೋಕೆ ಅದೆಷ್ಟೇ ಪಯತ್ನ ಪಟ್ರೂ ಸಾಧ್ಯವಾಗಲೇ ಇಲ್ಲ. ಸನ್ನಿ ಲಿಯೋನಿಯ ಇಡೀ ತಂಡ ಪ್ರಯತ್ನ ಪಟ್ರೂ ಪ್ರಯೋಜವಾಗ್ಲಿಲ್ಲ.
ಇದರ ಬಗ್ಗೆ ಖುದ್ದು ಸನ್ನಿ ಲಿಯೋನಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಸನ್ನಿ ಲಿಯೋನಿಗೆ ಬಟ್ಟೆ ತೊಡಿಸೋಕೆ ಇಡೀ ತಂಡವಿತ್ತು. ಆದ್ರೆ, ಒಂದು ಜಿಪ್ಪು ಅವ್ರೆಲ್ಲರನ್ನೂ ಸತಾಯಿಸಿಬಿಟ್ಟಿತ್ತು. ಒಂದು ಕಾರ್ಯಕ್ರಮಕ್ಕೆ ರೆಡಿ ಮಾಡಲು ಒಂದು ಸೈನ್ಯವೇ ಶ್ರಮ ವಹಿಸುತ್ತಿದೆ ಎಂದು ಸನ್ನಿ ಪೋಸ್ಟ್ ಮಾಡಿ, ಎಷ್ಟೇ ಪ್ರಯತ್ನಿಸದ್ರೂ ಸಾಧ್ಯವಾಗಲೇ ಇಲ್ಲ ಅಂತ ಪೋಸ್ಟ್ ಮಾಡಿದ್ದಾರೆ.
ಇತ್ತ ಸನ್ನಿ ಲಿಯೋನಿ ಧರಿಸಿದ್ದ ಗೌನಿನ ಜಿಪ್ ಮಧ್ಯದಲ್ಲೇ ಸಿಕ್ಕಿಕೊಂಡಿತ್ತು. ಆ ಜಿಪ್ ಅನ್ನು ಮೇಲೆತ್ತಲು ಅದೆಷ್ಟೇ ಯತ್ನಿಸಿದ್ರೂ ಸಾಧ್ಯವಾಗದೆ ಜಿಪ್ ಅರ್ಧಕ್ಕೇ ತುಂಡಾಗಿಬಿಟ್ಟಿತು. ಇತ್ತ ತೆಗೆಯೋಕೂ ಆಗದೆ. ಅತ್ತ ಬಳಸೋಕೂ ಆಗದೆ ಸನ್ನಿ ಪರದಾಡುವಂತಾಗಿದ್ದ ಸನ್ನಿವೇಶವನ್ನು ತನ್ನ ಇನ್ಸ್ಟಾಗ್ರಾಂನಲ್ಲಿ ಬಣ್ಣಿಸಿದ್ದಾರೆ.
ಸನ್ನಿಲಿಯೋನಿ ಡ್ರೆಸ್ನ ಜಿಪ್ ಹಾಕಲು ಆ ನಾಲ್ಕವರು ಸಹಾಯಕರಿಗೆ ಸಾಧ್ಯವಾಯ್ತಾ? ಇಲ್ಲಾ ಸನ್ನಿ ಬೇರೆ ಡ್ರೆಸ್ ತೊಟ್ಟು ರಿಯಾಲಿಟಿ ಶೋ ನಡೆಸಿಕೊಟ್ರಾ ಅನ್ನೋದು ಇನ್ನೂ ತಿಳಿದು ಬಂದಿಲ್ಲ. ಅಷ್ಟಕ್ಕೂ ಸನ್ನಿ ಲಿಯೋನಿ ಈ ವಿಷಯ ಶೇರ್ ಮಾಡಿದ್ದಕ್ಕೆ ಕಾರಣವಿದೆ. ನಟ ನಟಿಯರ ಸೌಂದರ್ಯದ ಹಿಂದೆ ಎಷ್ಟು ಕೆಲಸ ಮಾಡ್ತಾರೆ. ಎಷ್ಟು ಜನರ ಜನರ ಶ್ರಮವಿದೆ ತೋರಿಸೋಕೆ ವಿಷಯ ಶೇರ್ ಮಾಡಿದ್ದಾಗಿ ಹೇಳ್ಕೊಂಡಿದ್ದಾರೆ.