ಮಾಜಿ ನೀಲಿ ಸುಂದರಿ.. ಬಾಲಿವುಡ್ ನಟಿ.. ನೂರಾರು ಮಂದಿಗೆ ಅನ್ನ ನೀಡು ಅನ್ನದಾತೆ.. ಸದ್ದಿಲ್ಲದೆ ಸಮಾಜ ಸೇವೆ ಮಾಡೋ ಸುಂದರಿಗಿಂದು 40 ನೇ ಹುಟ್ಟುಹಬ್ಬ. ಬರ್ತ್ ಡೇ ಸಂಭ್ರಮದಲ್ಲಿರೋ ಈ ಸಂದರ್ಭದಲ್ಲಿ ನಟಿಯ ಫೋಟೋ ಜೊತೆ ಆಕೆಯ ಇಂಟ್ರೆಸ್ಟಿಂಗ್ ವಿಷಯಗಳು ಇಲ್ಲಿವೆ.
ಸನ್ನಿ ಲಿಯೋನಿ ಹುಟ್ಟಿದ್ದು ಸರ್ನಿಯಾ, ಒಂಟರಿಯೋ.. ಈಕೆಯ ಮೊದಲ ಹೆಸರು ಕರಂಜಿತ್ ಕೌರ್ ವೊಹ್ರಾ.
ನರ್ಸಿಂಗ್ ಅಭ್ಯಾಸ ಮಾಡುವ ವೇಳೆ ಸನ್ನಿ ಹೆಸರಿನಲ್ಲಿ ಡ್ಯಾನ್ಸರ್ ಆಗಿ ಗುರುತಿಸಿಕೊಂಡಿದ್ರು. ಪೆಂಟ್ಹೌಸ್ ಮ್ಯಾಗಜೀನ್ಗೆ ಮಾಡಲಿಂಗ್ ಮಾಡುವಾಗ ಅದರ ಮಾಲೀಕ ಸನ್ನಿ ಜೊತೆ ಲಿಯೋನಿ ಸೇರಿಸಿಕೊಳ್ಳುವಂತೆ ಸಲಹೆ ನೀಡಿದ್ದರು.
ಸನ್ನಿ ಲಿಯೋನಿ ಕ್ಯಾಥೋಲಿಕ್ ಸ್ಕೂಲ್ನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಶಾಲಾದಿನಗಳಲ್ಲಿ ತುಂಬಾ ತುಂಟಿಯಾಗಿದ್ದರು.
ನ್ಯೂಸ್18.ಕಾಮ್ ಹೇಳಿರುವ ಪ್ರಕಾರ ಸನ್ನಿಲಿಯೋನಿ ದ್ವಿಲಿಂಗಿ (bisexual). 13ನೇ ವಯಸ್ಸಿನವಳಾಗಿದ್ದಾಗ ಇದು ಅವರಿಗೆ ಬಂದಿತ್ತು.
19ನೇ ವಯಸ್ಸಿನಲ್ಲಿ ನೀಲಿ ಸಿನಿಮಾಗಳಲ್ಲಿ ನಟಿಸೋಕೆ ಶುರು ಮಾಡಿದ್ದರು. ಸಿಖ್ ಕುಟುಂಬ ಆಗಿದ್ದರಿಂದ ಮಗಳ ಈ ವೃತ್ತಿಯನ್ನು ಒಪ್ಪಿಕೊಳ್ಳಲು ಕಷ್ಟವಾಗಿತ್ತು.
ಡ್ಯಾನಿಯಲ್ ವೆಬ್ಬರ್ ಅನ್ನ ವಿವಾಹವಾಗುವುದಕ್ಕೂ ಮುನ್ನ ಪ್ಲೇಬಾಯ್ ಸಂಸ್ಥೆಯ ಉಪಾಧ್ಯಕ್ಷ ಮ್ಯಾಟ್ ಎರಿಕ್ಸನ್ ಜೊತೆ ಎಂಗೇಜ್ ಆಗಿದ್ದರು.
2008ರಲ್ಲಿ ಸ್ಟ್ಯಾಂಡಪ್ ಕಾಮಿಡಿಯನ್ ರಸೆಲ್ ಪೀಟರ್ಸ್ ಪ್ರೇಮದ ಬಲೆಗೆ ಬಿದ್ದಿದ್ದರು.
ಸನ್ನಿಲಿಯೋನಿ ನಾಚಿಕೆ ಹಾಗೂ ಅಂತರ್ಮುಖಿ ಸ್ವಭಾವ.
ಅನಾಥಾಶ್ರಮದಿಂದ ಸನ್ನಿಲಿಯೋನಿ ಹಾಗೂ ಪತಿ ಡ್ಯಾನಿಯಲ್ ವೆಬ್ಬರ್ ಹೆಣ್ಣುಮಗುವನ್ನ ಅಡಾಪ್ಟ್ ಮಾಡಿಕೊಂಡಿದ್ದಾರೆ. ಆ ಮಗುವಿನ ಹೆಸರು ನಿಶಾ.