ಮಂಡ್ಯಗೂ ಸಿನಿಮಾಗೂ ಬಿಡಲಾರದ ನಂಟು. ಕನ್ನಡ ಸಿನಿಮಾ, ರೆಬೆಲ್ ಅಂಬರೀಶ್ ಅಂತ ಬಂದ್ರೆ, ಪ್ರಾಣಕ್ಕೆ ಪ್ರಾಣ ಕೊಡಲು ಸಿದ್ಧ. ಆದ್ರೆ, ಇದೇ ಮೊದಲ ಬಾರಿಗೆ ಮಂಡ್ಯ ಹುಡುಗರು ಮಾಜಿ ನೀಲಿ ಸುಂದರಿಯ ಅಭಿಮಾನಿಗಳಾಗಿದ್ದಾರೆ. ಸನ್ನಿ ಲಿಯೋನಿಯ ಹುಟ್ಟುಹಬ್ಬಕ್ಕೆ ತಮ್ಮದೇ ಶೈಲಿಯಲ್ಲಿ ವಿಶ್ ಮಾಡಿದ್ದಾರೆ. ಇವರ ಈ ಅಭಿಮಾನ ಸನ್ನಿವರೆಗೂ ತಲುಪಿದೆ.
ಮೇ 13 ರಂದು ನಟಿ ಸನ್ನಿ ಲಿಯೋನಿ ಹುಟ್ಟುಹಬ್ಬ ಆಚರಿಸಿಕೊಂಡಿದ್ರು. ಸನ್ನಿ ಲಿಯೋನಿಗೆ ದೇಶದ ಮೂಲೆ ಮೂಲೆಯಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿತ್ತು. ಇವೆಲ್ಲವುಗಳ ಮಧ್ಯೆ ಮಂಡ್ಯ ಹುಡುಗರ ಅಭಿಮಾನ ಸನ್ನಿ ಲಿಯೋನಿಯ ಮನಗೆದ್ದಿದೆ.
ಮಂಡ್ಯ ಜಿಲ್ಲೆಯ ಕೊಮ್ಮೆರಹಳ್ಳಿಯ ಅಭಿಮಾನಿಗಳು ತಮ್ಮೂರಲ್ಲಿ ಸನ್ನಿ ಲಿಯೋನಿಯ ಕಟೌಟ್ ಹಾಕಿದ್ರು. ಸನ್ನಿ ಲಿಯೋನಿ ಸೀರೆಯುಟ್ಟ ಕಟೌಟ್ಗೆ ‘ಅನಾಥ ಮಕ್ಕಳ ತಾಯಿ’, ‘ಅಭಿಮಾನಿಗಳ ದೇವತೆ’ ಅಂತ ಬರೆದುಕೊಂಡಿದ್ರು. ಮಂಡ್ಯ ಹುಡುಗರ ಸನ್ನಿ ಲಿಯೋನಿ ಫ್ಲೆಕ್ಸ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಅಷ್ಟೇ ಅಲ್ಲ, ಇದು ಎಷ್ಟರ ಮಟ್ಟಿಗೆ ಶೇರ್ ಆಗಿದೆ ಅಂದ್ರೆ ಖುದ್ದು ಸನ್ನಿ ಲಿಯೋನಿನೇ ಈ ವೈರಲ್ ಫೋಟೋವನ್ನು ಶೇರ್ ಮಾಡಿದ್ದಾರೆ.
ಸನ್ನಿ ಲಿಯೋನಿ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ವೈರಲ್ ಫೋಟೋವನ್ನ ಶೇರ್ ಮಾಡಿದ್ದು, ಮಂಡ್ಯ ಹುಡುಗರ ಅಭಿಮಾನಕ್ಕೆ ಸನ್ನಿ ಫಿದಾ ಆಗಿ ಧನ್ಯವಾದ ಹೇಳಿದ್ದರು. ಸಾಮಾನ್ಯವಾಗಿ ಮಂಡ್ಯ ಹುಡುಗರು ಕನ್ನಡ ಸೂಪರ್ಸ್ಟಾರ್ಗಳ ಅಭಿಮಾನಿಗಳಾಗಿದ್ದನ್ನು ನೋಡಿದ್ದೇವೆ. ಆದ್ರೆ, ಇದೇ ಮೊದಲ ಬಾರಿ ಸನ್ನಿಯ ಫ್ಲೆಕ್ಸ್ ಹಾಕಿ ಸಂಭ್ರಮಿಸಿದ್ದಾರೆ.