ಕೊರೊನಾ ಇನ್ನೂ ತನ್ನ ಆರ್ಭಟವನ್ನು ನಿಲ್ಲಿಸಿಲ್ಲ. ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿದ್ರೂ, ಸಾವಿನ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ. ಹೀಗಾಗಿ ಈ ಬಾರಿ ರೆಬಲ್ ಸ್ಟಾರ್ ಅಂಬರೀಶ್ ಅವರ 69ನೇ ಹುಟ್ಟುಹಬ್ಬವನ್ನ ಸಾರ್ವಜನಿಕವಾಗಿ ಆಚರಿಸಬೇಡಿ ಎಂದು ಅಂಬಿ ಪತ್ನಿ ಸುಮಲತಾ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
‘‘ಇಡೀ ದೇಶ ಕೊರೊನಾ ಹರಡುವುದನ್ನ ನಿಲ್ಲಿಸಲು ಹೋರಾಡುತ್ತಿದೆ. ನಾನು ರೆಬಲ್ ಸ್ಟಾರ್ ಅಂಬರೀಶ್ ಅಭಿಮಾನಿಗಳಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಈ ವರ್ಷ ಯಾರೂ ಸಾರ್ವಜನಿಕವಾಗಿ ಹುಟ್ಟುಹಬ್ಬವನ್ನು ಆಚರಿಸಬೇಡಿ. ಅಂಬಿ 69ನೇ ಜಯಂತಿಯನ್ನು ನಿಮ್ಮ ಹೃದಯ ಹಾಗೂ ಮನದಲ್ಲಿ ಆಚರಿಸಿ’’ ಎಂದು ರೆಬೆಲ್ ಸ್ಟಾರ್ ಅಭಿಮಾನಿಗೆ ಟ್ವೀಟ್ ಮೂಲಕ ಸುಮಲತಾ ಮನವಿ ಮಾಡಿದ್ದಾರೆ.
ರೆಬೆಲ್ ಸ್ಟಾರ್ ಇದ್ದಿದ್ರೆ ಮನೆಯಲ್ಲಿ ದೊಡ್ಡ ಸಂಭ್ರಮವೇ ಇರ್ತಿತ್ತು. ಇಡೀ ಸ್ಯಾಂಡಲ್ವುಡ್ ಅಂಬರೀಶ್ಗೆ ವಿಶ್ ಮಾಡೋಕೆ ದೌಡಾಯಿಸ್ತಿದ್ರು. ಸಂಜೆವರೆಗೂ ರೆಬೆಲ್ಸ್ಟಾರ್ಗೆ ವಿಶ್ ಮಾಡೋಕೆ ಬರ್ತಿದ್ರು. ಆಕ್ಷಣಗಳನ್ನು ಅಂಬಿ ಫ್ಯಾನ್ಸ್ ಮಿಸ್ ಮಾಡಿಕೊಳ್ತಿರೋದು ನಿಜ.