ಓಲ್ಡ್ ಮಾಂಕ್ ಶ್ರೀನಿ ಅಭಿನಯಿಸಿ, ನಿರ್ದೇಶನ ಮಾಡಿರುವ ಸಿನಿಮಾ. ಈ ಹಿಂದೆ ಉಪೇಂದ್ರ ಅಭಿನಯದ ಟೋಪಿವಾಲ ನಿರ್ದೇಶಿಸಿ, ಶ್ರೀನಿವಾಸ ಕಲ್ಯಾಣ, ಬೀರ್ಬಲ್ ಸಿನಿಮಾಗಳನ್ನು ನಿರ್ದೇಶಿಸಿ ನಟಿಸಿದ್ದ ಶ್ರೀನಿ ಹೊಸ ಸಿನಿಮಾ ಓಲ್ಡ್ ಮಾಂಕ್. ಈ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಟ್ರೈಲರ್ ರಿಲೀಸ್ ಮಾಡಿದ್ರು.
ಟ್ರೈಲರ್ ಬಿಡುಗಡೆ ವೇಳೆ ಪುನೀತ್ ರಾಜ್ಕುಮಾರ್ ನಿರ್ದೇಶಕ, ನಟ ಶ್ರೀನಿ ಪರಿಚಯದ ಬಗ್ಗೆ ಹೇಳಿದ್ರು. ‘‘ಶ್ರೀನಿ ಬಹಳ ದಿನಗಳಿಂದ ನನಗೆ ಪರಿಚಯ. ಅವರ ಹಿಂದಿನ ಚಿತ್ರಗಳನ್ನು ನೋಡಿದ್ದೇನೆ. ಈ ಚಿತ್ರದ ಟ್ರೈಲರ್ ಕೂಡ ಚೆನ್ನಾಗಿದೆ. ಚಿತ್ರ ಕೂಡ ಚೆನ್ನಾಗಿರುತ್ತೆ ಎಂಬ ನಂಬಿಕೆಯಿದೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ’’ ಎಂದು ಹಾರೈಸಿದರು.
ಇನ್ನು ವೈಕುಂಠದಲ್ಲಿ ಈ ಚಿತ್ರದ ಕಥೆ ಆರಂಭವಾಗುತ್ತೆ. ಮಹಾವಿಷ್ಣು ಹಾಗೂ ನಾರದರ ಸಂಭಾಷಣೆಯಿಂದ್ಲೇ ಸಿನಿಮಾ ಆರಂಭ. ಓಲ್ಡ್ ಮಾಂಕ್ ಅಂದ್ರೆ ಹಿರಿಯ ಸನ್ಯಾಸಿ ಎಂದು ಟೈಟಲ್ ಬಗ್ಗೆ ತಿಳಿಸಿ ಕೊಟ್ರು ನಾಯಕ -ನಿರ್ದೇಶಕ ಶ್ರೀನಿ. ಇದೊಂದು ಪಕ್ಕಾ ಫ್ಯಾಮಿಲಿ ಎಂಟರ್ ಟೈನರ್. ಈ ಸಿನಿಮಾ ಪ್ರೇಕ್ಷಕರನ್ನು ನಗಿಸುತ್ತೆ ಅನ್ನೋ ಭರವಸೆ ನೀಡಿದ್ರು.
‘ಓಲ್ಡ್ ಮಾಂಕ್’ ಸಿನಿಮಾದಲ್ಲಿ ಶ್ರೀನಿ ಅವರ ಕಾರ್ಯವೈಖರಿ ಅದ್ಭುತ. ಈ ಚಿತ್ರ ಗೆಲ್ಲುವುದು ಖಚಿತ ಅನ್ನೋ ವಿಶ್ವಾಸದಲ್ಲಿ ನಾಯಕಿ ಅದಿತಿ ಪ್ರಭುದೇವ ಇದ್ದಾರೆ. ತಾನು ಅಭಿನಯಿಸುತ್ತಿರುವ ಚಿತ್ರಗಳ ಪೈಕಿ ಭಾರೀ ನಿರೀಕ್ಷೆಯಿಟ್ಟುಕೊಂಡಿರುವ ಚಿತ್ರ ಓಲ್ಡ್ ಮಾಂಕ್ ಅಂತಾರೆ ಅದಿತಿ.
ಹಿರಿಯ ನಟ ಕಲಾತಪಸ್ವಿ ರಾಜೇಶ್ ಈ ಚಿತ್ರದಲ್ಲಿ ಚಿಕ್ಕ ಪಾತ್ರ ಮಾಡಿದ್ದಾರೆ. ಎಸ್ ನಾರಾಯಣ್ ಕೂಡಅತಿಥಿಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪಾತ್ರ ಚಿಕ್ಕದಾದರೂ ಎಲ್ಲರ ಮನದಲ್ಲೂ ಉಳಿಯುತ್ತೆ ಎಂದಿದ್ದಾರೆ. ಹಾಗೇ ಸುನೀಲ್ ರಾವ್ ಕೂಡ ಈ ಸಿನಿಮಾದ ಭಾಗವಾಗಿದ್ದಾರೆ.