ರಶ್ಮಿಕಾ ಮಂದಣ್ಣ ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಒಂದಲ್ಲ ಎರಡು ಸಿನಿಮಾಗಳು ಕೈಯಲ್ಲಿವೆ. ಬಿಗ್ ಬಿ ಅಮಿತಾಬ್ ಬಚ್ಚನ್ ಜೊತೆ ಗುಡ್ಬೈ ಹಾಗೂ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಮಿಷನ್ ಮಜ್ನು ಚಿತ್ರದ ಚಿತ್ರೀಕರಣ ಆರಂಭ ಆಗಿದೆ. ರಶ್ಮಿಕಾ ಬಾಲಿವುಡ್ಗೆ ಎಂಟ್ರಿ ಕೊಟ್ಟ ಹಿಂದೆನೇ ಈಗ ಸಾಯಿ ಪಲ್ಲವಿ ಬಾಲಿವುಡ್ ಎಂಟ್ರಿಗೆ ವೇದಿಕೆ ಸಿದ್ಧವಾಗುತ್ತಿದೆ.
ರಶ್ಮಿಕಾ ಹಾಗೂ ಸಾಯಿ ಪಲ್ಲವಿ ಇಬ್ಬರೂ ಸೌತ್ ಸಿನಿಮಾ ಇಂಡಸ್ಟ್ರಿಯ ಟಾಪ್ ನಟಿಯರು. ಇಬ್ಬರ ಸಿನಿಮಾಗಳೂ ಬಾಕ್ಸಾಫೀಸ್ನಲ್ಲಿ ಬೇಜಾನ್ ಸದ್ದು ಮಾಡಿವೆ. ಹೀಗಾಗಿ ಇಬ್ಬರ ನಡುವೆಯೂ ನಂಬರ್ ಒನ್ ಪಟ್ಟಕ್ಕಾಗಿ ಪೈಪೋಟಿ ನಡೆಯುತ್ತಲೇ ಇರುತ್ತೆ. ರಶ್ಮಿಕಾ ಬಾಲಿವುಡ್ಗೆ ಎಂಟ್ರಿ ಕೊಟ್ಟಿದ್ದ ಹಿಂದೆನೇ ಪ್ರೇಮಂ ಬೆಡಗಿ ಸಾಯಿ ಕೂಡ ಬಾಲಿವುಡ್ ಪ್ರವೇಶ ಮಾಡಲಿದ್ದಾರೆ.
ಅಂದ್ಹಾಗೆ, ತೆಲುಗು ನಟ ಬೊಲ್ಲಂಕೊಂಡ ಶ್ರೀನಿವಾಸ್ ಬಾಲಿವುಡ್ ಎಂಟ್ರಿಕೊಟ್ಟಿದ್ದಾರೆ. ಪ್ರಭಾಸ್ ಅಭಿನಯಿಸಿದ್ದ ಛತ್ರಪತಿ ಸಿನಿಮಾ ಬಾಲಿವುಡ್ಗೆ ರಿಮೇಕ್ ಆಗುತ್ತಿದ್ದು, ಈ ಚಿತ್ರದಲ್ಲಿ ಬೆಲ್ಲಂಕೊಂಡ ಶ್ರೀನಿವಾಸ್ ನಟಿಸುತ್ತಿದ್ದಾರೆ. ಇದೇ ಚಿತ್ರದ ಮೂಲಕ ಸಾಯಿ ಪಲ್ಲವಿ ಬಾಲಿವುಡ್ ಪ್ರವೇಶ ಆಗುತ್ತೆ ಅನ್ನೋ ಮಾತು ಬಾಲಿವುಡ್ನಲ್ಲಿ ಹರಿದಾಡುತ್ತಿದೆ.