RRR ರಾಜಮೌಳಿಯ ಮತ್ತೊಂದು ಬಿಗ್ ಬಜೆಟ್ ಸಿನಿಮಾ. ಈ ಸಿನಿಮಾ ನೋಡೋಕೆ ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದಾರೆ. ಜೂ. ಎನ್ಟಿಆರ್ ಹಾಗೂ ರಾಮ್ ಚರಣ್ ಇದೇ ಮೊದಲ ಬಾರಿಗೆ ಜೊತೆಯಾಗಿದ್ದು, ಬೆಳ್ಳಿ ಪರದೆ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ RRR ಭಾರತೀಯ ಚಿತ್ರರಂಗದಲ್ಲಿ ಹೆಚ್ಚು ಕುತೂಹಲವನ್ನ ಕೆರಳಿಸಿದೆ. ಇದ್ರೊಂದು ಆಲಿಯಾ ಭಟ್, ಅಜಯ್ ದೇವಗನ್, ಒಲಿವಿಯಾ ಮೋರಿಸ್, ಸಮುತಿರ ಕಣಿ ಸೇರಿದಂತೆ ಕೆಲವು ಪಾತ್ರಗಳಿವೆ. ಆದ್ರೀಗ ರಾಜಮೌಳಿ ಶ್ರಿಯಾ ಶರಣ್ ಪಾತ್ರಕ್ಕೆ ಕತ್ತರಿ ಹಾಕಿದ್ದಾರಂತೆ.
ರಾಜಮೌಳಿ ಇಂತಹದ್ದೊಂದು ನಿರ್ಧಾರಕ್ಕೆ ಬಂದಿದ್ದು ಯಾಕೆ? ಶ್ರಿಯಾ ಶರಣ್ ಹಾಗೂ ರಾಜಮೌಳಿ ಮಧ್ಯೆ ಏನಾದ್ರೂ ಮನಸ್ಥಾಪವಿತ್ತಾ? ಇದ್ದಕ್ಕಿದ್ದ ಹಾಗೇ ಚಿತ್ರದ ದೃಶ್ಯಕ್ಕೆ ಕತ್ತರಿ ಹಾಕಲು ಅಂತಹ ಕಾರಣವೇನಿತ್ತು ಅನ್ನೋ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ. ಶ್ರಿಯಾ ಶರಣ್ ಒಂದು ಪಾತ್ರದಲ್ಲಿ ನಟಿಸಿದ್ದರು. ಆದ್ರೆ, ಇಡೀ RRR ತಂಡ ಶ್ರಿಯಾ ಶರಣ್ ಪಾತ್ರದ ಗುಟ್ಟನ್ನ ಬಿಟ್ಟುಕೊಟ್ಟಿರಲಿಲ್ಲ. ಆದ್ರೀಗ ರಾಜಮೌಳಿ ರಹಸ್ಯವಾಗಿದ್ದ ಪಾತ್ರಕ್ಕೆ ಕತ್ತರಿಸಿ ಹಾಕಿದ್ದಾರಂತೆ.
ಅಂದ್ಹಾಗೆ ಈ ಪಾತ್ರದಲ್ಲಿ ಶ್ರಿಯಾ ಶರಣ್ ಮುಂದಿನ ತಿಂಗಳು ಚಿತ್ರತಂಡವನ್ನ ಸೇರಿಕೊಳ್ಳಬೇಕಿತ್ತು. ರಾಜಮೌಳಿ ಗುಟ್ಟಾಗಿ ಇಟ್ಟಿದ್ದ ಪಾತ್ರದಲ್ಲಿ ನಟಿಸಬೇಕಿತ್ತು. ಆದ್ರೆ, ರಾಜಮೌಳಿ ತಾವು ಬರೆದ ಕಥೆಯಿಂದ ಈ ಪಾತ್ರವನ್ನೇ ಕೈ ಬಿಡುತ್ತಿದ್ದಾರಂತೆ. ಅದಕ್ಕೆ ಕಾರಣ ಸಮಯದ ಅಭಾವ ಎನ್ನಲಾಗಿದೆ. ಹೀಗಾಗಿ ಶ್ರಿಯಾ ಶರಣ್ RRR ಅಂತಹ ಮೆಗಾ ಪ್ರಾಜೆಕ್ಟ್ನಿಂದ ಹೊರಬಿದ್ದಿದ್ದಾರೆ.
ಇನ್ನೊಂದ್ಕಡೆ, ರಾಜಮೌಳಿ ಮೊದಲು ಸೀತೆ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಟ್ಟಿರಲಿಲ್ವಂತೆ. ಅದ್ಯಾವಾಗ ಆಲಿಯಾ ಭಟ್ ಸೆಟ್ಟಿಗೆ ಕಾಲಿಟ್ರೋ ಅಲ್ಲಿಂದ ಪಾತ್ರದ ಪ್ರಾಮುಖ್ಯತೆಯನ್ನ ದ್ವಿಗುಣಗೊಳಿಸಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿವೆ. ಹೀಗಾಗಿ ಶ್ರಿಯಾ ಶರಣ್ ಪಾತ್ರಕ್ಕೆ ರಾಜಮೌಳಿ ಕತ್ತರಿ ಹಾಕಿದ್ದಾರೆ ಅನ್ನೋ ಮಾತು ಹೇಳಿಬರ್ತಿದೆ. ಹೀಗಾಗಿ ಶ್ರಿಯಾ ಶರಣ್ ಅಭಿಮಾನಿಗಳಿಗೆ ಇನ್ನಿಲ್ಲದ ನಿರಾಸೆಯಾಗಿದೆ.