ದಕ್ಷಿಣ ಭಾರತದ ಸಾಯಿ ಪಲ್ಲವಿ ಹೆಸರನ್ನು ಯಾರು ಕೇಳಿಲ್ಲ ಹೇಳಿ. ಮಲಯಾಳಂ, ತೆಲುಗು, ತಮಿಳು ಸಿನಿಮಾಗಳಲ್ಲಂತೂ ಸಾಯಿ ಪಲ್ಲವಿ ಹೆಸರು ಚಿರಪರಿಚಿತ. ದಕ್ಷಿಣ ಭಾರತದ ಮೂರು ಭಾಷೆಗಳಲ್ಲೂ ನಟಿಸಿರೋ ಸಾಯಿ ಪಲ್ಲವಿ ಕನ್ನಡದ ಕಡೆ ತಿರುಗಿ ಕೂಡ ನೋಡಿಲ್ಲ. ಆದ್ರೀಗ ನಿರ್ದೇಶಕ ಮನ್ಸೂರೆ ಮಲಯಾಳಂ ಮಲರ್ ಅನ್ನು ಕನ್ನಡಕ್ಕೆ ಕರ್ಕೊಂಡು ಬರೋಕೆ ಹೊರ್ಟಿದ್ದಾರೆ. ಹಾಗಿದ್ರೆ, ಆ ಸಿನಿಮಾ ಯಾವುದು? ಇಲ್ಲಿದೆ ನೋಡಿ ಡಿಟೈಲ್ಸ್.
ಪ್ರೇಮಂ, ಕಲಿ, ಫಿದಾ, ಲವ್ ಸ್ಟೋರಿಯಂತಹ ಸಿನಿಮಾಗಳಲ್ಲಿ ನಟಿಸಿರೋ ಸಾಯಿ ಪಲ್ಲವಿ ಸೌತ್ ಇಂಡಿಯಾದ ಟಾಪ್ ನಟಿ. 2020ಯಲ್ಲಿ ಫೋರ್ಬ್ಸ್ 30 ಅಂಡರ್ 30 ಪಟ್ಟಿಯಲ್ಲಿ ಸಾಯಿ ಪಲ್ಲವಿ ಹೆಸರಿತ್ತು. ಈ ಪಟ್ಟಿಯಲ್ಲಿದ್ದ ಚಿತ್ರರಂಗದ ಏಕೈಕ ಹೆಸರು ಸಾಯಿ ಪಲ್ಲವಿಯದ್ದು. ಈಗ ಅದೇ ನಟಿ ಕನ್ನಡಕ್ಕೆ ಬಂದ್ರೆ, ಆ ಸಿನಿಮಾ ಗತಿ ಬದಲಾಗೋದ್ರಲ್ಲಿ ಅನುಮಾನವಿಲ್ಲ.
ಇನ್ನೊಂದ್ಕಡೆ ಹರಿವು, ನಾತಿಚರಾಮಿ, ಆಕ್ಟ್ 1978 ಅಂತಹ ಸಿನಿಮಾ ಮಾಡಿ, ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ ನಿರ್ದೇಶಕ ಮನ್ಸೋರೆ. ಸಾಯಿ ಪಲ್ಲವಿ ಹಾಗೂ ಮನ್ಸೂರೆ ಇಬ್ಬರ ಕಾಂಬಿನೇಷನ್ ಸಿನಿಮಾ ನೋಡೋಕೆ ಜನರು ಕಾತುರದಿಂದ ಕಾಯ್ತಿರೋದಂತೂ ನಿಜ.
ಮನ್ಸೂರೆ ಈಗಾಗ್ಲೇ ಅಬ್ಬಕ್ಕ ಅನ್ನೋ ಬಿಗ್ ಬಜೆಟ್ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಈಗ ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಅವರನ್ನು ಕನ್ನಡಕ್ಕೆ ಕರೆತರುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಸಾಯಿ ಪಲ್ಲವಿಗೆ ಈಗಾಗ್ಲೇ ಒನ್ ಲೈನ್ ಸ್ಟೋರಿ ಸಹ ಹೇಳಿದ್ದಾರೆ.
ಪೊಲಿಟಿಕಲ್ ಥ್ರಿಲ್ಲರ್ ಜಾನರ್ ಕಥೆಯಾಗಿದ್ದು, ಫುಲ್ ಸ್ಕ್ರಿಪ್ಟ್ ಕೇಳಲು ಒಪ್ಪಿಗೆ ನೀಡಿದ್ದಾರೆ. ಕತೆ ಒಪ್ಪಿ ಕನ್ನಡ ಸಿನಿಮಾದಲ್ಲಿ ನಟಿಸಲು ಬಂದ್ರೆ, ಆಕೆ ಕೇಳಿದ ಸಂಭಾವನೆಯನ್ನು ಕನ್ನಡ ನಿರ್ಮಾಪಕರು ಕೊಡ್ತಾರಾ? ಸಂಭಾವನೆ ಬಿಟ್ಟು ಕಥೆ ಇಷ್ಟ ಪಟ್ಟು ಸಾಯಿ ಪಲ್ಲವಿ ನಟಿಸ್ತಾಳಾ? ಕುತೂಹಲವಂತೂ ಇದ್ದೇ ಇದೆ.