ಬಟ್ಟಲು ಕಣ್ಣುಗಳ ಚೆಲುವೆ ಪ್ರಣೀತಾ ಯಾರಿಗ್ ಗೊತ್ತಿಲ್ಲ. ಕನ್ನಡ, ತೆಲುಗು, ತಮಿಳು ಸೇರಿದಂತೆ ಹಿಂದಿ ಭಾಷೆಯ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಆದ್ರೀಗ ದಿಢೀರನೇ ಯಾರಿಗೂ ಗೊತ್ತಲ್ಲಂತೆ ಮದ್ವೆಯಾಗಿ ಇಡೀ ಚಿತ್ರರಂಗಕ್ಕೆ ಶಾಕ್ ಕೊಟ್ಟಿದ್ದಾರೆ. ಅಷ್ಟಕ್ಕೂ ಪ್ರಣೀತಾ ಸುಭಾಷ್ ಮದ್ವೆಯಾದ ನಿತಿನ್ ರಾಜು ಬೆಂಗಳೂರಿನ ಉದ್ಯಮಿ. ಈಗಾಗ್ಲೇ ನಿತಿನ್ ರಾಜು ಬೆಂಗಳೂರಿನ ವೆಗಾ ಸಿಟಿಯ ಮಾಲ್ನ ಮಾಲೀಕ ಅನ್ನೋ ಸುದ್ದಿ ಹೊರಬಿದ್ದಿದೆ. ಆದ್ರೆ, ಅದಕ್ಕಿಂತಲೂ ಮುಖ್ಯವಾದ ಮಾಹಿತಿಯನ್ನು ನಿಮ್ಮ ಮುಂದಿಡುತ್ತಿದ್ದೇವೆ.
ಪ್ರಣೀತಾ ಸುಭಾಷ್ ಮದ್ವೆ ಆಗೇ ಹೋಯ್ತು ಅನ್ನೋ ಸುದ್ದಿ ಹಬ್ಬಿತ್ತು. ಆದ್ರೆ, ಸ್ವತ: ಪ್ರಣೀತಾನೇ ಮದ್ವೆ ಆಗಿರೋದನ್ನು ನಿರಾಕರಿಸಿದ್ದರು. ಆದ್ರೀಗ ಪೊರ್ಕಿ ಚೆಲುವೆ ಪ್ರಣೀತಾ ಉದ್ಯಮಿ ನಿತಿನ್ ರಾಜು ಜೊತೆ ಸೀಕ್ರೆಟ್ ಆಗಿ ಮೇ 30 ರಂದು ಸಪ್ತಪದಿ ತುಳಿದಿದ್ದಾರೆ. ನವ ಜೋಡಿಯ ಫೋಟೋ ಎಲ್ಲೆಡೆ ಹರಿದಾಡುತ್ತಿದೆ. ಅಷ್ಟಕ್ಕೂ ನಿತಿನ್ ರಾಜು ಪೂರ್ತಿ ಹೆಸರು ಅಂಪಲ್ಲಿ ವಾಸುದೇವರಾಜು ನಿತಿನ್ ರಾಜು.. ಸಿಂಗಾಪುರದ ಸ್ಕೂಲ್ ಡಿ ಹಾಸ್ಪಿಟಾಲಿಯಲ್ಲಿ ಶಿಕ್ಷಣ ಪಡೆದಿದ್ದಾರೆ. 2016ರಿಂದ ತಮ್ಮ ಉದ್ಯಮದಲ್ಲಿ ಸಕ್ರಿಯರಾಗಿದ್ದಾರೆ.
ನಿತಿನ್ ರಾಜು 2016ರಿಂದ ಒಟ್ಟು ನಾಲ್ಕು ಕಂಪನಿಗಳಿಗೆ ನಿರ್ದೇಶಕರು. 2016ರಿಂದ ಸ್ವಿಂಗ್ಬೈ ಹಾಸ್ಪಿಟಾಲಿ ಲಿಮಿಟೆಡ್ನ ನಿರ್ದೇಶಕ. ರಾಜಾ ಸಿಂಫೋನಿ ಹೌಸಿಂಗ್ ಪ್ರೈವೆಟ್ ಲಿಮಿಟೆಡ್, ನುವೋಲ್ಟ್ ಚಾರ್ಜ್ ಪ್ರೈವೆಟ್ ಲಿಮಿಟೆಡ್, ಬ್ಲ್ಯೂ ಹಾರಿಜಾನ್ ಹೊಟೇಲ್ಸ್ ಪ್ರೈವೆಟ್ ಲಿಮಿಟೆಡ್ ಇಷ್ಟು ಕಂಪನಿಗಳ ನಿರ್ದೇಶಕರಾಗಿ ದುಡಿಯುತ್ತಿದ್ದಾರೆ.
ಅಂದ್ಹಾಗೆ ನಿತಿನ್ ರಾಜು ನಿರ್ದೇಶಕರಾಗಿರೋ ಬ್ಲ್ಯೂ ಹಾರಿಜಾನ್ ಹೊಟೇಲ್ಸ್ ಪ್ರೈವೆಟ್ ಲಿಮಿಟೆಡ್ ಕಂಪನಿಯ ವಹಿವಾಟು 2019ರಲ್ಲಿ ಶೇರುಗಳಿಂದ ₹85 ಕೋಟಿ ಮತ್ತು ಪೇಯಿಯ್ಡ್ ವಹಿವಾಟು ₹80 ಕೋಟಿ ಎಂದು ಹೇಳಲಾಗಿದೆ. ಈ ಕಂಪನಿ ಒಂದು ಕೋಟಿಯಿಂದ ನೂರು ಕೋಟಿವರೆಗೂ ವರ್ಷಕ್ಕೆ ವಹಿವಾಟು ಮಾಡುತ್ತದೆ. ಇದು ಹೊಟೇಲ್ಗಳನ್ನ ರೆಸ್ಟೋರೆಂಟ್ಗಳನ್ನು ನಿರ್ಮಾಣ ಮಾಡುತ್ತದೆ.
ಬಟ್ಟಲು ಕಣ್ಣುಗಳ ಚೆಲುವೆ ಪ್ರಣೀತಾ ಸುಭಾಷ್ ಮದ್ವೆಯಾಗಿರೋದು ಕೇವಲ ಉದ್ಯಮಿಯನ್ನಲ್ಲ. ಬೆಂಗಳೂರಿನ ಕೋಟ್ಯಾಧಿಪತಿಯನ್ನು ಅನ್ನೋ ಸೀಕ್ರೆಟ್ ರಿಲೀಸ್ ಆಗಿದೆ. ಕನಕಪುರದ ರೆಸ್ಟೋರೆಂಟ್ನಲ್ಲಿ ಮದುವೆಯಾಗಿರೋ ನಟಿ ಬಾಲಿವುಡ್ನ ಹಂಗಾಮ 2 ಹಾಗೂ ಅಜಯ್ ದೇವಗನ್ ಜೊತೆ ನಟಿಸುತ್ತಿರೋ ಬುರ್ಜ್ ಸಿನಿಮಾದಲ್ಲಿ ನಟಿಸಿದ್ದು ಬಿಡುಗಡೆ ಸಿದ್ಧವಾಗಿವೆ. ಈಗ ದಿಢೀರನೇ ಮದುವೆಯಾಗಿರೋದ್ರಿಂದ ಮುಂದೆ ಸಿನಿಮಾಗಳಲ್ಲಿ ನಟಿಸುತ್ತಾರಾ ಅನ್ನೋದು ಇನ್ಮುಂದೆ ತಿಳಿಯಬೇಕಿದೆ.
Source: Tofler/