ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದ ಯೋಜನೆ ಅನ್ನಭಾಗ್ಯ. ಕೆಲವು ದಿನಗಳಿಂದ ಈ ಅನ್ನ ಭಾಗ್ಯ ಯೋಜನೆ ಬಗ್ಗೆ ಎಚ್ ಡಿ ಕುಮಾರಸ್ವಾಮಿ ಟೀಕೆ ಮಾಡಿದ್ರು. ಸದನದಲ್ಲಿ ಕುಮಾರಸ್ವಾಮಿ ಅನ್ನಭಾಗ್ಯ ಯೋಜನೆಗೆ ಹಣ ನೀಡಿರಲಿಲ್ಲ ಎಂಬ ಕುಮಾರಸ್ವಾಮಿಗೆ ಟೀಕಿಸಿದ್ದರು. ಈ ಟೀಕೆಗೆ ತಿರುಗೇಟು ನೀಡಲಿ ಸಿದ್ಧರಾಮಯ್ಯ ಬಣ ಮಾಸ್ಟರ್ ಪ್ಲ್ಯಾನ್ ಮಾಡಿದೆ. ಅದೇನು ಅನ್ನೋದನ್ನು ಮುಂದೆ ಓದಿ.
ಅನ್ನಭಾಗ್ಯ ಯೋಜನೆ ಕುರಿತು ವ್ಯಕ್ತವಾಗ್ತಿರೋ ಟೀಕೆ ವಿರುದ್ಧ ಸಿಡಿದೇಳಲು ಕಾಂಗ್ರೆಸ್ ಪಡೆ ಹೊಸ ತಂತ್ರ ರೂಪಿಸಿದೆ. ಜೆಡಿಎಸ್ ನಾಯಕರ ಟೀಕೆಯಿಂದ ಸಿಟ್ಟಿಗೆದ್ದಿರುವ ಕಾಂಗ್ರೆಸ್, ರಾಜ್ಯಾದ್ಯಂತ ಅನ್ನಭಾಗ್ಯ ಯೋಜನೆಯ ಅಗತ್ಯತೆ ಮತ್ತು ವಾಸ್ತವತೆಯನ್ನು ಜನತೆಯ ಮುಂದಿಡಲು ತೀರ್ಮಾನಿಸಿದೆ. ಸಿದ್ಧರಾಮಯ್ಯ ಅವಧಿಯಲ್ಲಿ ಕೊಟ್ಟಿರುವ ಅನ್ನಭಾಗ್ಯದಿಂದ ಆಗಿರುವ ಲಾಭದ ಬಗ್ಗೆ ಸಂಪೂರ್ಣ ವಿವರಣೆಯನ್ನು ನೀಡಲು ಸಜ್ಜಾಗಿದೆ. ಹಸಿವು ಮುಕ್ತ ಕರ್ನಾಟಕ ಘೋಷಣೆಯನ್ನು ಟೀಕಿಸುವ ನಾಯಕರಿಗೆ ದಾಖಲೆ ಸಹಿತ ತಿರುಗೇಟು ನೀಡಲಿದೆ.
ಅನ್ನಭಾಗ್ಯ ಯೋಜನೆಯಿಂದ ರಾಜ್ಯಕ್ಕಾದ ಅನುಕೂಲಗಳನ್ನು ಪ್ರತಿ ಜಿಲ್ಲೆ ಹಾಗೂ ತಾಲೂಕು ಜನರಿಗೆ ತಿಳಿಸಲು ಸಿದ್ದರಾಮಯ್ಯ ಬಣ ಮುಂದಾಗಿದೆ. ಆಹಾರ ಇಲಾಖೆಯಿಂದ ನಿಖರ ಮಾಹಿತಿಯನ್ನು ಪಡೆದು ಜನರ ಮುಂದಿಡಲಿದೆ. ಪತ್ರಿಕಾಗೋಷ್ಠಿ ನಡೆಸಿ ಅನ್ನಭಾಗ್ಯದ ಬಗ್ಗೆ ಜನಜಾಗೃತಿ ಮೂಡಿಸಲು ಕಾಂಗ್ರೆಸ್ ಪ್ಲ್ಯಾನ್ ಮಾಡಿದೆ.
ಇದರೊಂದಿಗೆ ಹಂತ ಹಂತವಾಗಿ ಯೋಜನೆಯನ್ನು ನಾಶ ಮಾಡಲು ನಡೆದಿರೋ ಸಂಚಿನ ಬಗ್ಗೆ ಮಾಹಿತಿ ಸಂಗ್ರಹಿಸಿದೆ. ಕುಮಾರಸ್ವಾಮಿ ಸರ್ಕಾರದ ಅವಧಿಯಲ್ಲಿ ಅನ್ನಭಾಗ್ಯ ಯೋಜನೆಗೆ ಆಗಿರುವ ಅಡ್ಡಿಯ ಬಗ್ಗೆಯೂ ಮಾಹಿತಿ ನೀಡಲಿದೆ. ಬಿಜೆಪಿ ಸರ್ಕಾರ ಅನ್ನಭಾಗ್ಯ ಯೋಜನೆಯ ಅನುದಾನ ಕಡಿತ ಮಾಡಿದ್ದು, ಅನ್ನಭಾಗ್ಯದ ಆಹಾರ ಪೂರೈಕೆಯಲ್ಲಿ ಹಂತ ಹಂತವಾಗಿ ಅಕ್ಕಿ ಕಡಿತದ ವಿವರ ಜನರಿಗೆ ತಿಳಿಸಲಿದೆ. 2014-15 ರಿಂದ 2018-19 ನೇ ಸಾಲಿನವರೆಗೆ ಅನ್ನಭಾಗ್ಯಕ್ಕೆ ನೀಡಿರುವ ಅನುದಾನದ ಬಗ್ಗೆ ವಿವರವನ್ನು ಬಹಿರಂಗ ಪಡಿಸಲಿದೆ. ಈ ಯೋಜನೆ ಜಾರಿಯಾದ ಕಾಲಕಾಲಕ್ಕೆ ಅನ್ನ ಭಾಗ್ಯ ಯೋಜನೆ ಯಾವ್ಯಾವ ಸ್ವರೂಪ ಪಡೆದುಕೊಳ್ತು. ಅಕ್ಕಿಯ ಜೊತೆಗೆ ಧಾನ್ಯಗಳನ್ನು ನೀಡಿದ ವಿವರ. ಅನರ್ಹ ಕುಟುಂಬಗಳನ್ನು ಅರ್ಹರ ಪಟ್ಟಿಯಿಂದ ತೆಗೆಯಲು ಕೈಗೊಂಡ ಕ್ರಮ.