ಸಲಾರ್ ಸುಂದರಿ ಶ್ರುತಿ ಹಾಸನ್ ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಸ್ವತ: ಈ ಮಾತನ್ನು ಕಮಲ್ ಹಾಸನ್ ಪುತ್ರಿನೇ ಹೇಳಿಕೊಂಡಿದ್ದಾರೆ. ಲಾಕ್ಡೌನ್ನಲ್ಲಿ ಕೆಲಸ ಮಾಡಲೇ ಬೇಕಾದ ಅನಿವಾರ್ಯತೆಯಿದೆ. ಅಪ್ಪ- ಅಮ್ಮ ಸಹಾಯ ಮಾಡುತ್ತಿಲ್ಲವೆಂದು ಶ್ರುತಿ ಹಾಸನ್ ಹೇಳಿ ಅಚ್ಚರಿ ಹುಟ್ಟಿಸಿದ್ದಾರೆ.
ಕೊರೊನಾ ಅಬ್ಬರ ಹೆಚ್ಚಾಗ್ತಿರೋ ಈ ಸಂದರ್ಭದಲ್ಲಿ ಕೆಲವು ಚಿತ್ರರಂಗದಲ್ಲಿ ಸಿನಿಮಾ ಶೂಟಿಂಗ್ ಇನ್ನೂ ಜಾರಿಯಲ್ಲಿದೆ. ಕರ್ನಾಟಕದಲ್ಲಿ ಸಿನಿಮಾ ಹಾಗೂ ಧಾರಾವಾಹಿ ಎರಡರ ಚಿತ್ರೀಕರಣವನ್ನೂ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಇದೇ ವೇಳೆ ಇಂತಹ ಅಪಾಯದ ಸನ್ನಿವೇಶದಲ್ಲೂ ಶ್ರುತಿ ಹಾಸನ್ ಶೂಟಿಂಗ್ನಲ್ಲಿ ಭಾಗಿಯಾಗ್ತಿರೋದ್ಯಾಕೆ? ಅನ್ನೋ ಪ್ರಶ್ನೆ ಹಾಕಲಾಗಿತ್ತು. ಅದಕ್ಕೆ ಶ್ರತಿ ಹಾಸನ್ ನೇರಾ ನೇರ ಉತ್ತರ ಕೊಟ್ಟಿದ್ದಾರೆ.
‘‘ನಾನು ಸಾಂಕ್ರಾಮಿಕ ರೋಗ ಕಡಿಮೆಯಾಗುತ್ತೆ ಅಂತ ಕಾದೂ ಕೂರಲು ಸಾಧ್ಯವಿಲ್ಲ. ಸೆಟ್ನಲ್ಲಿ ಮಾಸ್ಕ್ ಇಲ್ಲದೆ ಕೂರುವುದಕ್ಕೆ ಭಯವಾಗುತ್ತೆ. ಆದ್ರೆ, ಬೇರೆಯವ್ರ ಹಾಗೇ ನನಗೂ ಹಣಕಾಸಿನ ತೊಂದರೆಯಿದೆ. ಸಿನಿಮಾ ತಂಡ ಶೂಟಿಂಗ್ ಮಾಡಲು ರೆಡಿಯಿದ್ದರೆ ನಾನು ಹೋಗಲೇ ಬೇಕು. ನಾನೂ ಕೂಡ ಒಪ್ಪಿಕೊಂಡಿರೋ ಕೆಲಸಗಳನ್ನು ಮುಗಿಸಬೇಕಿದೆ’’ ಎಂದು ಸಲಾರ್ ನಟಿ ಶ್ರುತಿ ಹಾಸನ್ ಹೇಳಿದ್ದಾರೆ.
ಕಮಲ್ ಹಾಸನ್ ಅಂತಹ ಮೇರು ನಟನ ಮಗಳಾಗಿದ್ದರೂ, ಹಣಕಾಸಿನ ತೊಂದರೆಯಿದೆ ಎಂದು ಶ್ರತಿ ಓಪನ್ ಹೇಳಿದ್ದಾರೆ. ‘‘ನನಗೆ ನನ್ನದೇ ಆದ ಮಿತಿಯಿದೆ. ನನಗೆ ಸಹಾಯ ಮಾಡೋ ಅಪ್ಪ-ಅಮ್ಮ ಇಲ್ಲ’’ ಎಂದು ಹೇಳಿ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ.
ಕೋಟಿ ಕೋಟಿ ದುಡಿಯೋ ಶ್ರುತಿ ಹಾಸನ್ಗೆ ಹಣಕಾಸಿನ ತೊಂದರೆಯಲ್ಲಿ ಸಿಕ್ಕಿಬಿದ್ದಿದ್ದೇಕೆ? ಅನ್ನೋ ಅಚ್ಚರಿ ಸಹಜ. ಲಾಕ್ಡೌನ್ಗೂ ಮುನ್ನ ಶ್ರುತಿ ಹಾಸನ್ ಮನೆ ಹಾಗೂ ದುಬಾರಿ ಕಾರನ್ನು ಖರೀದಿ ಮಾಡಿದ್ದರು. ಈಗ ಅದರ ಸಾಲವನ್ನು ತೀರಿಸಬೇಕಿದೆ. ಹೀಗಾಗಿ ಲಾಕ್ಡೌನ್ ವೇಳೆ ಕೆಲಸ ಮಾಡಲೇ ಬೇಕಾದ ಅನಿವಾರ್ಯತೆಯಿದೆಯೆಂದು ಶ್ರುತಿ ಹಾಸನ್ ಹೇಳಿದ್ದಾರೆ.