ಶಿವರಾಜ್ಕುಮಾರ್ ಸಿನಿಮಾಗೆ ಸುದೀಪ್ ಬರೋದು.. ಸುದೀಪ್ ಸಿನಿಮಾಗೆ ಶಿವಣ್ಣ ಬರೋದು ಕಾಮನ್. ಇಬ್ಬರೂ ಆಗಾಗ ಸಿನಿಮಾ ವೇದಿಕೆ ಮೇಲೆ ಸೇರುತ್ತಲೇ ಇರ್ತಾರೆ. ಇದರಲ್ಲಿ ಹೊಸ ವಿಷಯವೇನೂ ಇಲ್ಲ. ಆದೇ ಒಂದ್ವೇಳೆ ಶಿವಣ್ಣ ಹಾಗೂ ಸುದೀಪ್ ಒಟ್ಟಿಗೆ ಸಿನಿಮಾ ಮಾಡಿದ್ರೆ, ಶಿವಣ್ಣನಿಗೆ ಸುದಿಪ್ ಅಥವಾ ಸುದೀಪ್ಗೆ ಶಿವಣ್ಣ ಆ್ಯಕ್ಷನ್ ಕಟ್ ಹೇಳಿದ್ರೆ ಹೇಗಿರುತ್ತೆ? ಸದ್ಯದ ಬೆಳವಣೆಗೆ ನೋಡಿದ್ರೆ, ಅದೂ ನೆರವೇರೋ ಹಾಗೇ ಕಾಣಿಸುತ್ತೆ.
ಶಿವಣ್ಣ 124ನೇ ಸಿನಿಮಾ ನೀ ಸಿಗೋವರೆಗೂ ಸೆಟ್ಟೇರಿದೆ. ಆಗಸ್ಟ್ 19ರಿಂದ್ಲೇ ಸಿನಿಮಾದ ಶೂಟಿಂಗ್ ಕೂಡ ಶುರುವಾಗಲಿದೆ. ಅಂದ್ಕೊಂಡಂತೆ ಅಡೆ-ತಡೆಯಿಲ್ಲದೆ ಶೂಟಿಂಗ್ ನಡೆದ್ರೆ, ಮಾರ್ಚ್ ಹೊತ್ತಿಗೆ 124ನೇ ಸಿನಿಮಾ ರಿಲೀಸ್ ಆಗುತ್ತೆ. ಈ ಗ್ಯಾಪ್ನಲ್ಲಿ 125ನೇ ಸಿನಿಮಾ ಗ್ರ್ಯಾಂಡ್ ಆಗಿ ಸೆಟ್ಟೇರುವ ಸಾಧ್ಯತೆಯಿದೆ. ಅಷ್ಟಕ್ಕೂ 125ನೇ ಸಿನಿಮಾ ಬಗ್ಗೆ ಯಾಕೀ ಮಾತು ಅಂದ್ರೆ, ನೀ ಸಿಗೋವರೆಗೂ ಮುಹೂರ್ತದಲ್ಲಿ ಕಿಚ್ಚ ನಿರ್ದೇಶನ ಮಾಡಿದ್ರೆ ನಟಿಸ್ತೀನಿ ಅಂತ ಬಹಿರಂಗವಾಗೇ ಶಿವಣ್ಣ ಆಫರ್ ಕೊಟ್ಟಿದ್ದಾರೆ.ಹೀಗಾಗಿ 125ನೇ ಚಿತ್ರದ ಬಗ್ಗೆ ಚರ್ಚೆಯಾಗ್ತಿದೆ.
ನೀ ಸಿಗೋವರೆಗೂ ಚಿತ್ರದ ಮುಹೂರ್ತಕ್ಕೆ ವಿಶೇಷ ಅತಿಥಿಯಾಗಿ ಬಂದಿದ್ದ ಸುದೀಪ್ ಗ್ಯಾಪ್ನಲ್ಲಿ ಶಿವಣ್ಣನಿಗೆ ಒಂದು ಕಾನ್ಸೆಪ್ಟ್ ಹೇಳಿದ್ದಾರೆ. ಹಾಗೇ ಸ್ಕ್ರೀನ್ ಪ್ಲೇ ಮಾಡಿ ಕೊಡೋದಾಗಿಯೂ ಹೇಳಿದ್ದಾರೆ. ಶಿವಣ್ಣನಿಗೂ ಕಥೆ ತುಂಬಾನೇ ಇಷ್ಟ ಆಗಿದೆ. ಹೀಗಾಗಿ ವೇದಿಕೆ ಮೇಲೆ ನೀವೇ ಏನಾದ್ರೂ, ನಿರ್ದೇಶನ ಮಾಡಿದ್ರೆ, ನಟಿಸುತ್ತೇನೆ ಅಂತ ಶಿವಣ್ಣ ಹೇಳಿದ್ದಾರೆ.
ಒಂದ್ವೇಳೆ ಸುದೀಪ್, ಶಿವಣ್ಣನಿಗೆ ನಿರ್ದೇಶನ ಮಾಡೋಕೆ ಮುಂದಾದ್ರೆ, ಸ್ಯಾಂಡಲ್ವುಡ್ ಬಾಕ್ಸಾಫೀಸ್ನಲ್ಲಿ ಮತ್ತೊಂದು ಕ್ರಾಂತಿ ಆಗೋದು ಪಕ್ಕಾ. ದಿ ವಿಲನ್ ಬಳಿಕ ಸುದೀಪ್, ಶಿವಣ್ಣ ವಿಶಿಷ್ಟ ಕಾಂಬಿನೇಷನ್ ನೋಡ್ಬಹುದು. ಆದ್ರೆ, ಇಬ್ಬರೂ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಇರೋದ್ರಿಂದ ಈ ಡ್ರೀಮ್ ಪ್ರಾಜೆಕ್ಟ್ ಟೇಕಾಫ್ ಆಗುತ್ತಾ ಅನ್ನೋ ಕುತೂಹಲವಂತೂ ಇದೆ.