ಶಿವರಾತ್ರಿ ದಿನವೇ ವೇದ ಹೇಳೋ ನಿರ್ಧಾರ ಮಾಡಿದ್ದಾರೆ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್. ಭಜರಂಗಿ ಸಿನಿಮಾ ಸೂಪರ್ ಹಿಟ್ ಆದ್ಮೇಲೆ ಶಿವಣ್ಣ ಮತ್ತು ನಿರ್ದೇಶಕ ಹರ್ಷ ಭಜರಂಗಿ 2 ರೆಡಿ ಮಾಡಿದ್ದಾರೆ. ಅಭಿಮಾನಿಗಳು ಕೂಡಾ ಆ ಚಿತ್ರಕ್ಕಾಗಿ ಕಾಯ್ತಾ ಇದ್ದಾರೆ. ಆದ್ರೆ ಲಾಕ್ಡೌನ್ ನಿಂದಾಗಿ ಚಿತ್ರ ಬಿಡುಗಡೆ ತಡವಾಗಿದೆ. ಮೇ ತಿಂಗಳಲ್ಲಿ ಭಜರಂಗಿ 2 ರಿಲೀಸ್ ಆಗುತ್ತೆ ಎನ್ನಲಾಗಿದೆ.
ಸದ್ಯಕ್ಕಂತೂ ಶಿವರಾಜ್ಕುಮಾರ್ ಬ್ಯಾಕ್ ಟು ಬ್ಯಾಕ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆಯೇ ಹೊಸಾ ಚಿತ್ರವನ್ನು ಅನೌನ್ಸ್ ಮಾಡಿದ್ದಾರೆ. ಭಜರಂಗಿ ನಿರ್ದೇಶಕ ಹರ್ಷ ಮತ್ತು ಶಿವರಾಜ್ಕುಮಾರ್ ಮತ್ತೊಂದು ಚಿತ್ರ ಮಾಡ್ತಿದ್ದಾರೆ. ಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಈ ಸಿನಿಮಾ ಘೋಷಣೆಯಾಗಿದೆ. ಚಿತ್ರದ ಹೆಸರು `ವೇದ’.
ಈ ಸಿನಿಮಾದ ಬಗ್ಗೆ ಚಿತ್ರತಂಡ ಹೆಚ್ಚಿನ ವಿವರ ನೀಡಿಲ್ಲ. ಶಿವಣ್ಣನ ರಗಡ್ ಲುಕ್ ಇರುವ ಪೋಸ್ಟರ್ ಒಂದನ್ನು ರಿಲೀಸ್ ಮಾಡಿದ್ದಾರೆ. ಗಡ್ಡ ಬಿಟ್ಟುಕೊಂಡ ಶಿವಣ್ಣನ ಲುಕ್ ಸಾಕು, ಅಭಿಮಾನಿಗಳು ಈಗಾಗ್ಲೇ ಈ ಸಿನಿಮಾದ ಬಗ್ಗೆ ಹೆಚ್ಚು ನಿರೀಕ್ಷೆ ಇಟ್ಟುಕೊಳ್ಳೋಕೆ ಶುರುಮಾಡ್ಬಿಟ್ಟಿದ್ದಾರೆ. ಗೀತಾ ಶಿವರಾಜ್ಕುಮಾರ್ ನಿರ್ಮಾಣ ಮಾಡ್ತಿರೋ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಇರಲಿದೆ. 1960ರಲ್ಲಿ ನಡೆದ ಯಾವುದೋ ಕುತೂಹಲಕರ ಘಟನೆಯ ಹಿನ್ನೆಲೆಯಲ್ಲಿ ಈ ಚಿತ್ರ ರೆಡಿಯಾಗ್ತಿದೆ ಎನ್ನಲಾಗಿದೆ. ಒಟ್ನಲ್ಲಿ ಶಿವರಾಜ್ಕುಮಾರ್ ಅಭಿಮಾನಿಗಳಿಗಂತೂ ಇದು ಶಿವರಾತ್ರಿಯ ಭರ್ಜರಿ ಗಿಫ್ಟ್ ಆದಂತಾಗಿದೆ.