ಸೆಂಚುರಿಸ್ಟಾರ್ ಶಿವರಾಜ್ಕುಮಾರ್ ಫ್ರಿಯಾಗಿ ಇದ್ದಿದ್ದೇ ಇಲ್ಲ. ಒಂದಲ್ಲ ಒಂದು ಸಿನಿಮಾದಲ್ಲಿ ನಟಿಸುತ್ತಲೇ ಇರ್ತಾರೆ. ಈಗಾಗ್ಲೇ ಕೈಯಲ್ಲಿ ಸಾಕಷ್ಟು ಸಿನಿಮಾಗಳಿದ್ರೂ, ಶಿವಣ್ಣನ ಮತ್ತೊಂದು ಹೊಸ ಸಿನಿಮಾ ಸೆಟ್ಟೇರಿದೆ. ಈ ಬಾರಿ ಸಿನಿಮಾ ಟೈಟಲ್ ಗಮನ ಸೆಳೆದಿದೆ. ಪಕ್ಕಾ ಮಾಸ್ ಟೈಟಲ್ಗಳೇ ಇರುತ್ತಿದ್ದ ಶಿವಣ್ಣನ ಸಿನಿಮಾ ಪಕ್ಕಾ ರೊಮ್ಯಾಂಟಿಕ್ ಟೈಟಲ್ ಇಟ್ಕೊಂಡು ಮುಹೂರ್ತ ಮಾಡಿಕೊಂಡಿದೆ. ‘ನೀ ಸಿಗೋವರೆಗೂ’ ಟೈಟಲ್ ನೋಡಿದ ಕೂಡಲೇ ಇದು ಪಕ್ಕಾ ರೊಮ್ಯಾಂಟಿಕ್ ಸಿನಿಮಾ ಅಂತ ಹೇಳಿಬಿಡ್ಬಹುದು. ಹಾಗಿದ್ರೆ, ಈ ಸಿನಿಮಾ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ಓದಿ.
‘ನೀ ಸಿಗೋವರೆಗೂ’ ಶಿವರಾಜ್ಕುಮಾರ್ ಅಭಿನಯದ 124ನೇ ಸಿನಿಮಾ. ಈ ಸಿನಿಮಾಗೆ ತೆಲುಗು ನಿರ್ದೇಶಕ ರಾಮ್ ಧುಳಿಪುಡಿ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಬೆಳ್ಳಂಬೆಳಗ್ಗೆ ಮುಹೂರ್ತ ಕಂಡಿರೋ ಈ ಸಿನಿಮಾದ ಮುಹೂರ್ತಕ್ಕೆ ಕಿಚ್ಚ ಸುದೀಪ್, ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅತಿಥಿಗಳಾಗಿ ಬಂದು ಶುಭಕೋರಿದ್ದಾರೆ.
ನೀ ಸಿಗೋವರೆಗೂ ಸಿನಿಮಾದ ಚಿತ್ರೀಕರಣ ಆಗಸ್ಟ್ 18ರಿಂದ್ಲೇ ಆರಂಭ ಆಗಲಿದೆ. ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿರೋ ಮೇರ್ಹಿನ್ ಪೀರ್ಜಾದಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಸಿನಿಮಾ ಮೇರ್ಹಿನ್ ಅವರ ಮೊದಲ ಕನ್ನಡ ಸಿನಿಮಾ. ಉಳಿದಂತೆ, ಟಗರು ಚಿತ್ರದಲ್ಲಿ ಕೆಲಸ ಮಾಡಿರೋ ಚರಣ್ ರಾಜ್ ಸಂಗೀತ ನೀಡುತ್ತಿದ್ದು, ಮಹೇಂದ್ರ ಸಿಂಹ ಕ್ಯಾಮರಾಮ್ಯಾನ್ ಆಗಿದ್ದಾರೆ.
ಸಾಧುಕೋಕಿಲಾ, ಸಂಪತ್, ನಾಸರ್, ಸೇರಿದಂತೆ ದೊಡ್ಡ ಸ್ಟಾರ್ಕಾಸ್ಟ್ ಈ ಸಿನಿಮಾದಲ್ಲಿ ಇರಲಿದೆ. ಶಿವಣ್ಣನ 124ನೇ ಸಿನಿಮಾ ಕಥೆಯೇನು? ಎರಡು ಲುಕ್ನಲ್ಲಿ ಹೇಗೆ ಕಾಣಿಸಿಕೊಳ್ತಾರೆ? ಅನ್ನೋ ವಿಷಯವನ್ನು ಇನ್ನಷ್ಟೇ ಹೊರ ಹಾಕಬೇಕಿದೆ.