ಲಾಂಗ್ ಹಿಡಿಯೋದ್ರಲ್ಲಿ ಶಿವರಾಜ್ಕುಮಾರ್ ಎತ್ತಿದ್ ಕೈ. ಭಿನ್ನ ವಿಭಿನ್ನವಾಗಿ ಶಿವಣ್ಣ ಲಾಂಗ್ ಹಿಡಿಯೋದನ್ನ ಸಿನಿಮಾಗಳಲ್ಲಿ ನೋಡಿದ್ದೇವೆ. ಸಿನಿಮಾಗಳಲ್ಲಿ ಸೆಂಚುರಿ ಸ್ಟಾರ್ ಲಾಂಗ್ ಹಿಡಿದ್ರೆ, ಆ ಸಿನಿಮಾ ಸೂಪರ್ ಹಿಟ್ ಆಗೋದು ಶತಸಿದ್ಧ. ಅದಕ್ಕೆ ಲಾಂಗ್ ಹಿಡಿಯೋ ಸ್ಟೈಲ್ ಅನ್ನು ಯುವ ನಟನಿಗೆ ಧಾರೆ ಎರೆದಿದ್ದಾರೆ.
ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್ಗೆ ಶಿವಣ್ಣ ಲಾಂಗ್ ಹಿಡಿಯೋದು ಹೇಗೆ ಅನ್ನೋದನ್ನು ಕಲಿಸಿಕೊಟ್ಟಿದ್ದಾರೆ. ಲಾಂಗ್ ಹಿಡಿಯೋಕೆ ಒಂದು ಆ್ಯಟಿಟ್ಯೂಡ್ ಬೇಕು. ಒಂದೊಂದು ಸಂದರ್ಭದಲ್ಲಿ ಒಂದೊಂದು ರೀತಿ ಲಾಂಗ್ ಹಿಡಿಬೇಕು ಅಂತ ಶ್ರೇಯಸ್ಗೆ ಶಿವಣ್ಣ ಪಾಠ ಮಾಡಿದ್ದಾರೆ. ಇದೇ ವೇಳೆ ಲಾಂಗು, ಮಚ್ಚಿ ಹಿಡಿಯೋದು ಕೇವಲ ಪಾತ್ರಗಳಿಗಾಗಿ ಅಂತನೂ ಹೇಳಿದ್ದಾರೆ.
ಗುಜ್ಜಲ್ ಪುರುಶೋತ್ತಮ್ ನಿರ್ಮಿಸ್ತಿರೋ ರಾಣಾ ಚಿತ್ರಕ್ಕೆ ನಂದ ಕಿಶೋರ್ ನಿರ್ದೇಶನವಿದ್ರೆ, ಶ್ರೇಯಸ್ ಕೆ. ಮಂಜು ನಟಿಸುತ್ತಿದ್ದಾರೆ. ಈಗಾಗ್ಲೇ ಚಿತ್ರೀಕರಣ ಭರದಿಂದ ಸಾಗಿದ್ದು, ಇತ್ತೀಚೆಗೆ ಚಿತ್ರ ತಂಡ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರನ್ನು ಭೇಟಿ ಮಾಡಿದ್ರು,. ಇದೇ ಸಂದರ್ಭದಲ್ಲಿ ಶ್ರೇಯಸ್ಗೆ ಶಿವಣ್ಣ ಲಾಂಗ್ ಹಿಡಿಯೋದು ಹೇಗೆ? ಕ್ಯಾಮರಾ ಮುಂದೆ ಹೇಗೆ ಲಾಂಗ್ ಹಿಡಿಬೇಕು ಎನ್ನುವುದನ್ನು ಹೇಳಿಕೊಟ್ಟಿದ್ದಾರೆ.