ರೇವನ್ ಪಿ ಜೇವೂರ್
ಕೊನೆಗೂ ಸಂತೋಷದ ಸುದ್ದಿ ಹೊರ ಬಿದ್ದಿದೆ. ಕಾತರದಿಂದಲೇ ಕಾದಿರೋ ಹ್ಯಾಟ್ರಿಕ್ ಫ್ಯಾನ್ಸ್ ಗೆ ಸೂಪರ್ ಸ್ಟಾರ್ ಶಿವಣ್ಣ ಅಂಡ್ ಟೀಮ್ ಸಂತೋಷದ ಸುದ್ದಿ ಕೊಟ್ಟೇ ಬಿಟ್ಟಿದ್ದಾರೆ. ಏನ್ ಅದು…ಮುಂದೆ ಓದಿ…
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಚಿತ್ರ ಜೀವನದಲ್ಲಿ ಭಜರಂಗಿ ಚಿತ್ರ ಅತ್ಯಂತ ಮಹತ್ವದ ಸಿನಿಮಾ. ಅಲ್ಲಿವರೆಗೂ ಕಮರ್ಷಿಲ್ ಚಿತ್ರಗಳಲ್ಲಿಯೇ ಅಭಿನಯಸಿ ಅಭಿಮಾನಿಗಳ ಹೃದಯದಲ್ಲಿದ್ದ ಶಿವರಾಜ್ ಕುಮಾರ್, ಭಜರಂಗಿಯಂತ ಕಥೆ ಒಪ್ಪಿಕೊಂಡು ತಮ್ಮನ್ನ ಪ್ರೀತಿಸೋ ಪ್ರೇಕ್ಷಕರನ್ನ ಬೆಳ್ಳಿ ತೆರೆ ಮೂಲಕ ಬೇರೆ ಲೋಕಕ್ಕೇನೆ ಕರೆದುಕೊಂಡು ಹೋಗಿದ್ದರು.
ಒಬ್ಬ ಹೀರೋ ಸೂಪರ್ ಹೀರೋ ಆಗ್ಬೇಕು ಅಂದ್ರೆ, ಎದುರಿಗೆ ಇರೋ ವಿಲನ್ ಸ್ಟ್ರಾಂಗ್ ಆಗಿಯೆ ಇರಬೇಕು. ಇದು ಎಲ್ಲ ಕಾಲಕ್ಕೂ ಚಾಲ್ತಿಯಲ್ಲಿಯೇ ಇರೋ ಸತ್ಯ. ಅದನ್ನ ಭಜರಂಗಿ ಚಿತ್ರದಲ್ಲಿ ಅಷ್ಟೇ ಸಮರ್ಥವಾಗಿಯೇ ತೋರಲಾಗಿದೆ. 6 ಅಡಿಯ ಖಳನಾಯಕ ನಟ ಲೋಕಿ. ಈ ಸಿನಿಮಾದಲ್ಲಿ ಅಭಿನಯಿಸೋ ಮೂಲಕ ಭಜರಂಗಿ ಲೋಕಿನೇ ಆದರು… ಮಧು ಗುರುಸ್ವಾಮಿ ಅಂತೂ ತಮ್ಮ ಪಾತ್ರದ ಮೂಲಕ ಅತೀ ಹೆಚ್ಚು ಗಮನ ಸೆಳೆದ್ರು. ಸೂಪರ್ ಸ್ಟಾರ್ ಶಿವರಾಜ್ ಕುಮಾರ್ ಅವ್ರು ಬೆಳ್ಳಿ ತೆರೆ ಮೇಲೆ ಅಬ್ಬರಿಸೋಕೆ ಹೆಲ್ಪೆ ಮಾಡಿದ್ರು.
ಈ ಸಕ್ಸಸ್ ಭಜರಂಗಿಯನ್ನ ಜನ ಇನ್ನೂ ಮರೆತಿರಲಿಲ್ಲ. ಆಗಲೇ ಭಜರಂಗಿ-2 ಚಿತ್ರದ ಸುದ್ದಿ ಇತ್ತು.. ಅದು ಸಾಕಾರಗೊಳ್ತದೆ ಅನ್ನೋ ಸ್ಟ್ರಾಂಗ್ ಫೀಲಿಂಗ್ ಕೂಡ ಇತ್ತು. ಅದು ಸಾಧ್ಯವಾಗಿ ಈಗಾಗಲೇ ವರ್ಷಗಳೇ ಉರುಳಿವೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಭಜರಂಗಿ-2 ಚಿತ್ರವನ್ನ ಒಪ್ಪಿ ಅಭಿನಯಿಸಿ ಆಗಿದೆ. ಈಗ ಅದೇ ಚಿತ್ರದ ರಿಲೀಸ್ ಡೇಟ್ ಎರಡು ಸಲ ಅನೌನ್ಸ್ ಆಗಿದೆ. ನಿಜ…ಭಜರಂಗಿ-2 ಚಿತ್ರ ರಿಲೀಸ್ ಡೇಟ್ ಈಗ ಕೊನೆಗೂ ಪ್ರಕಟಗೊಂಡಿದೆ. ನಿರ್ದೇಶಕ ಎ.ಹರ್ಷಾ ಚಿತ್ರದ ರಿಲೀಸ್ ದಿನವನ್ನ ಪ್ರಕಟಗೊಳಿಸುತ್ತವೇ ಭಾನುವಾರ 11.30ಕ್ಕೆ ಅಂತಲೇ ಹೇಳಿಕೊಂಡಿದ್ದರು. ಹೇಳಿದಂತೆ ಈಗ ಭಜರಂಗಿ-2 ರಿಲೀಸ್ ದಿನ ಹೊರ ಬಿದ್ದಿದೆ.
ಹೌದು..ಭಜರಂಗಿ-2 ಚಿತ್ರ ಅಕ್ಟೋಬರ್-29 ರಂದು ತೆರೆಗೆ ಬರುತ್ತಿದೆ. ಕಾದು ಕುಳಿತಿರೋ ಕನ್ನಡದ ಹ್ಯಾಟ್ರಿಕ್ ಫ್ಯಾನ್ಸ್ ಆ ಕಾತರದ ಕ್ಷಣ ಈಗ ದೂರ ಆಗಿದೆ. ಅಕ್ಟೋಬರ್-29 ರಂದು ಚಿತ್ರ ರಿಲೀಸ್ ಆಗೋದು ಪಕ್ಕಾ ಆಗಿದೆ. ಭಜರಂಗಿ-2 ಚಿತ್ರದ ಕನ್ನಡದ ಮಟ್ಟಿಗೆ ಮತ್ತೊಂದು ಮೈಲಿಗಲ್ಲಿನ ಸಿನಿಮಾನೇ ಆಗಿದೆ. ಬಹುಕೋಟಿ ಬಜೆಟ್ ನ ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಮತ್ತೆ ಭಜರಂಗಿ ರೂಪ ತಾಳಿಯೇ ವಾಪಾಸ್ ಆಗಿದ್ದಾರೆ. ಅತೀ ರೋಚಕ ಕಥೆಯನ್ನೆ ನಿರ್ದೇಶಕ ಎ.ಹರ್ಷಾ ರೆಡಿ ಮಾಡಿಕೊಂಡು, ಭಜರಂಗಿ ಸಿನಿಮಾಕೆ ಚಿತ್ರಕಥೆಯನ್ನೂ ಬರೆದುಕೊಂಡು ಭಜರಂಗಿ-2 ಅಂತ ಆ ಕಥೆಯ ಮುಂದಿನ ಭಾಗವನ್ನ ಬೆಳ್ಳಿತೆರೆ ಮೇಲೆ ತರುತ್ತಿದ್ದಾರೆ.
ಭಜರಂಗಿಯ ಆ ಕ್ರೂರ ವಿಲನ್ ನಟ ಲೋಕಿ ಇಲ್ಲಿ ಬೇರೆ ರೀತಿಯಲ್ಲಿಯೇ ಬಂದು ರೋಚಕಥೆಯನ್ನ ಮೂಡಿಸುತ್ತಿದ್ದಾರೆ. ಆದರೆ, ನಿಮ್ಗೆ ಗೊತ್ತಿರಲಿ,ಕನ್ನಡದ ಹಿರಿಯ ನಟಿ ಶೃತಿ ಅವರ ರೂಪ ಇಲ್ಲಿ ಎಂತಹ ಕಲಾವಿದರಿಗೂ ರೋಮಾಂಚನಗೊಳಿಸೋ ಹಾಗೇನೆ ಇದೆ. ಅಂತಹ ರೋಲ್ ಅನ್ನ ಈ ಗೌರಮ್ಮನ ಪಾತ್ರಧಾರಿ ಶೃತಿ ಈ ಭಜರಂಗಿ-2 ಚಿತ್ರದಲ್ಲಿ ನಿಭಾಯಿಸಿದ್ದಾರೆ.
ಕಳೆದ ಭಜರಂಗಿ ಚಿತ್ರದಲ್ಲಿ ಶಿವರಾಜ್ ಕುಮಾರ್ ಜೊತೆಯಾಗಿ ನಟಿ ಐಂದ್ರಿತಾ ರೈ ಇದ್ದರು. ಈ ಸಲ ಆ ಚಾನ್ಸ್ ನಟಿ ಜಾಕಿ ಭಾವನಾಗೆ ಧಕ್ಕಿದೆ. ಎಂದಿನಂತೆ ಇಲ್ಲೂ ಮ್ಯಾಜಿಕಲ್ ಮಾಂತ್ರಿಕ ಅರ್ಜುನ್ ಜನ್ಯ ತಮ್ಮ ಸುಮಧುರ ಸಂಗೀತದ ಅಲೆಯನ್ನ ಹರೆಸಿದ್ದಾರೆ. ನಿರ್ದೇಶಕ ಹರ್ಷಾ ಅವ್ರ ಕಲ್ಪನೆಗೆ ನಿರ್ಮಾಪಕರಾದ ಜಯಣ್ಣ ಮತ್ತು ಭೋಗಣ್ಣ ದುಡ್ಡಿನ ರೂಪದಲ್ಲಿಯೇ ಕೋಟಿ ಕೋಟಿ ಬಂಡವಾಳ ಹೂಡಿದ್ದಾರೆ.
ಕೋಟಿಗಳನ್ನ ಹಾಕಲು ಕಥೆ ಮೇಲೆ..ನಿರ್ದೇಶಕರ ಮೇಲೆ..ನಾಯಕನ ಮೇಲೆ ನಂಬಿಕೆ ಬೇಕೆ ಬೇಕು. ಆ ನಂಬಿಕೆ ಇಲ್ಲಿ ಅತಿಯಾಗಿಯೇ ಇದೆ. ಅದಕ್ಕೇನೆ ಬೃಹತ್ ಸೆಟ್ ಗಳಲ್ಲಿ ಅತೀ ವೆಚ್ಚದಲ್ಲಿಯೇ ಭಜರಂಗಿ-2 ಸಿನಿಮಾ ರೆಡಿಯಾಗಿದೆ. ಅಕ್ಟೋಬರ್-29 ರಂದು ತೆರೆಗೆ ಬರೋಕೆ ಸಜ್ಜಾಗಿದೆ.