ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಅಭಿಮಾನಿಗಳಿಗೆ ಇಂದು ಸಂಭ್ರಮವೋ ಸಂಭ್ರಮ. ಕೊರೊನಾ ಒಂದು ಇಲ್ಲದೆ ಹೋಗಿದ್ದಿದ್ರೆ, ಇಷ್ಟೊತ್ತಿಗಾಗ್ಲೇ ಶಿವಣ್ಣ ಮನೆ ಮುಂದೆ ಅಭಿಮಾನಿಗಳ ಜನಜಾತ್ರೆನೇ ನಡೆದು ಹೋಗ್ತಿತ್ತು. ಕರ್ನಾಟಕದ ಮೂಲೆ ಮೂಲೆಗಳಿಂದ ಅಭಿಮಾನಿಗಳು ಬರ್ತಿದ್ರು. ಶಿವಣ್ಣನ ಜೊತೆ ಸೆಲ್ಫಿ ತೆಗೆದುಕೊಳ್ತಿದ್ರು. ಅಭಿಮಾನಿಗಳು ತಂದಿದ್ದ ಕೇಕ್ ಅನ್ನ ಶಿವಣ್ಣನೂ ಕತ್ತರಿಸಿ ಸಂಭ್ರಮಿಸುತ್ತಿದ್ರು. ಆದ್ರೆ, ಕಳೆದ ಎರಡು ವರ್ಷಗಳಿಂದ ಇವೆಲ್ಲದಕ್ಕೂ ಬ್ರೇಕ್ ಬಿದ್ದಿದೆ.
ಶಿವರಾಜ್ಕುಮಾರ್ ಹುಟ್ಟುಹಬ್ಬದ ಸಂಭ್ರಮ ಇಲ್ಲದೇ ಇರೋದ್ರಿಂದ ತಮ್ಮ ಸಿನಿಮಾಗಳಿಂದ್ಲೇ ಫ್ಯಾನ್ಸ್ ಅನ್ನು ಖುಷಿ ಪಡಿಸಿದ್ದಾರೆ. ಶಿವರಾಜ್ಕುಮಾರ್ ನಟನೆಯ ಭಜರಂಗಿ 2 ಚಿತ್ರದ ಹೊಚ್ಚ ಹೊಸ ಟೀಸರ್ ಬಿಡುಗಡೆಯಾಗಿದೆ. ಮಾಸ್ ಲುಕ್ನಲ್ಲಿ ಶಿವಣ್ಣ ಎಂಟ್ರಿ ಅಭಿಮಾನಿಗಳಿಗೆ ಬಹಳಾನೇ ಇಷ್ಟ ಆಗಿದೆ.
ಭಜರಂಗಿ 2 ಚಿತ್ರದ ಟೀಸರ್ ಒಂದ್ಕಡೆಯಾದ್ರೆ, ಶಿವಣ್ಣನ 123ನೇ ಸಿನಿಮಾ ಟೈಟಲ್ ರಿವೀಲ್ ಆಗಲಿದೆ. ವಿಜಯ್ ಮಿಲ್ಟನ್ ನಿರ್ದೇಶನದ ಈ ಸಿನಿಮಾಗೆ ಶಿವಪ್ಪ ಎಂದು ಶೀರ್ಷಿಕೆ ಇಡಲಾಗಿತ್ತು. ಆದ್ರೀಗ, ಹೊಸ ಟೈಟಲ್ ಅನ್ನು ಅನೌನ್ಸ್ ಮಾಡಲಿದೆ ಚಿತ್ರತಂಡ.
ಶಿವಣ್ಣ ಹುಟ್ಟುಹಬ್ಬಕ್ಕೆ ಕಿಚ್ಚ ಸುದೀಪ್, ರಕ್ಷಿತ್ ಶೆಟ್ಟಿ, ರಮೇಶ್ ಅರವಿಂದ್, ಅರ್ಜುನ್ ಜನ್ಯ, ಪ್ರಿಯಾಂಕಾ ಉಪೇಂದ್ರ ಸೇರಿದಂತೆ ಚಿತ್ರರಂಗದ ಗಣ್ಯರು ಶುಭಕೋರಿದ್ದಾರೆ.