ಕಸ್ತೂರಿ ಮಹಲ್ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರೇ ಮೆಚ್ಚಿ ಟೀಸರ್ ಬಿಡುಗಡೆ ಮಾಡಿದ ಸಿನಿಮಾ. ಸ್ವತ: ಅಪ್ಪುನೇ ಜೈ ಅಂದ್ಮೇಲೆ ಇನ್ನೇನಿದೆ. ಟೀಸರ್ ಬೇಜಾನ್ ವೈರಲ್ ಆಗಿತ್ತು. ಈಗ ಮಾರ್ಚ್ 19ಕ್ಕೆ ಮತ್ತೊಂದು ಸರ್ಪ್ರೈಸ್ ಕೊಡೋಕೆ ಕಸ್ತೂರಿ ಮಹಲ್ ತಂಡ ರೆಡಿಯಾಗಿದೆ.
ಕಸ್ತೂರಿ ಮಹಲ್ ವಿಭಿನ್ನ ಸಿನಿಮಾಗಳ ಸರದಾರ ದಿನೇಶ್ ಬಾಬು ಅವರ 50ನೇ ಸಿನಿಮಾ. ಈಗಾಗ್ಲೇ ಈ ಸಿನಿಮಾದ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೋಡಕ್ಷನ್ ಮುಕ್ತಾಯಗೊಂಡಿದೆ. ಸದ್ಯದ್ರಲ್ಲೇ ಫಸ್ಟ್ ಕಾಪಿ ಕೂಡ ರೆಡಿಯಾಗುತ್ತೆ. ಮೇ ಅಂತ್ಯ ಇಲ್ಲವೇ ಜೂನ್ ಮೊದಲ ವಾರದಲ್ಲಿ ಕಸ್ತೂರಿ ಮಹಲ್ನಲ್ಲಿ ಶಾನ್ವಿ ಕಾಣಿಸಿಕೊಳ್ಳಲಿದ್ದಾರೆ. ಆದ್ರೆ, ಅದಕ್ಕೂ ಮುನ್ನ ಶಾನ್ವಿ ಇಷ್ಟ ಪಡೋರಿಗೊಂದು ಲಿರಿಕಲ್ ಸಾಂಗ್ ರಿಲೀಸ್ ಆಗುತ್ತೆ.
ಇದೇ ಮಾರ್ಚ್ 19ರಂದು ಕಸ್ತೂರಿ ಮಹಲ್ ಚಿತ್ರದ ಲಿರಿಕಲ್ ಹಾಡು ಬಿಡುಗಡೆಯಾಗಲಿದೆ. ಡಾ||ವಿ.ನಾಗೇಂದ್ರ ಪ್ರಸಾದ್ ಬರೆದಿರುವ ‘ನಾನ್ಯರು ನನಗೆ ಯಾರು’ ಅನ್ನೋ ಹಾಡನ್ನ ಅನುರಾಧಾ ಭಟ್ ಹಾಡಿದ್ದಾರೆ. ನಟಿ ಶಾನ್ವಿ ಶ್ರೀವಾಸ್ತವ್ ನಾಯಕಿಯಾಗಿ ನಟಿಸಿರುವ ಈ ಚಿತ್ರ ಪಕ್ಕಾ ಹಾರರ್ ಸಿನಿಮಾ ಆಗಿದ್ದು, ಸ್ಕಂಧ ಅಶೋಕ್, ರಂಗಾಯಣ ರಘು, ಶೃತಿ ಪ್ರಕಾಶ್, ಕಾಶಿಮ ರಫಿ, ನೀನಾಸಂ ಅಶ್ವಥ್ , ಅಕ್ಷರ್ ಮುಂತಾದವರು ನಟಿಸಿದ್ದಾರೆ. ಹಾರರ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕ ದಿನೇಶ್ ಬಾಬು ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ.