ಹಾಟ್ ಫೋಟೋ ಶೂಟ್ಗಳಲ್ಲಿ ಸನ್ನಿ ಲಿಯೋನಿ ಆಗಾಗಾ ಕಾಣಿಸಿಕೊಳ್ತಾನೇ ಇರ್ತಾರೆ. ಕೆಲವು ದಿನಗಳ ಹಿಂದೆ ಸನ್ನಿ ಲಿಯೋನಿ ವಿವಸ್ತ್ರಳಾಗಿ ಫೋಟೋ ಶೂಟ್ ಮಾಡಿಸಿದ್ದರು. ದಬ್ಬು ರತ್ನಾನಿ ಕ್ಯಾಲೆಂಡರ್ಗಾಗಿ ತನ್ನ ಬೆತ್ತಲೆ ದೇಹವನ್ನು ದೊಡ್ಡ ಹ್ಯಾಟ್ನಿಂದ ಮುಚ್ಚಿಕೊಂಡ ಭಂಗಿಯಲ್ಲಿ ಪೋಸ್ ನೀಡಿದ್ದಳು. ಅದೇ ಹಾದಿಯನ್ನು ಮತ್ತೊಬ್ಬ ನಟಿ ಶಮಾ ಸಿಕಂದರ್ ಕೂಡ ಹಿಡಿದಿದ್ದಾಳೆ. ತನ್ನ ಬೆತ್ತಲೆ ದೇಹವನ್ನು ಕಪ್ಪು ಹ್ಯಾಟ್ ಹಿಡಿದು ಪೋಸ್ ನೀಡಿದ್ದಾಳೆ. ಈ ಫೋಟೊ ಈಗ ಸೋಶಿಯಲ್ ಮೀಡಿಯಾದಲ್ಲಿ ಬಾರಿ ಚರ್ಚೆಯಾಗುತ್ತಿದೆ.
ಇನ್ಸ್ಟಾಗ್ರಾಂನಲ್ಲಿ ಶಮಾ ಸಿಕಂದರ್ ನ್ಯೂಡ್ ಫೋಟೊವನ್ನು ಪೋಸ್ಟ್ ಮಾಡುತ್ತಿದ್ದಂತೆ ನೆಟ್ಟಿಗರು ಮುಗಿದ್ದು ಫೋಟೋ ನೋಡುತ್ತಿದ್ದಾರೆ. ಆದ್ರೆ, ಶಮಾ ಫಾಲೋ ಮಾಡುತ್ತಿರುವರು ಈ ಫೋಟೊವನ್ನು ಮೆಚ್ಚಿಕೊಂಡಿದ್ರೂ, ಸನ್ನಿಲಿಯೊನಿಯನ್ನು ಕಾಪಿ ಮಾಡಿದ್ದಾರೆಂದು ಕಮೆಂಟ್ ಮಾಡುತ್ತಿದ್ದಾರೆ. ‘‘ ಈ ಫೋಟೊ ಸನ್ನಿಲಿಯೋನಿ ಫೋಟೋ ತರಹನೇ ಇದೆ. ಕಾಪಿ ಮಾಡಲಾಗಿದೆ’’ ಎಂದು ಕಮೆಂಟ್ ಮಾಡಿದ್ದಾರೆ.
ಶಮಾ ಸಿಂಕಂದರ್ ಹ್ಯಾಟ್ ಹಿಡಿದ ಬೆತ್ತಲೆ ಫೋಟೊ ಶೇರ್ ಮಾಡುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದಾರೆ. ‘‘ಇದು ಹ್ಯಾಟ್ ಸೀಸನ್ ಎಂದು ಬರೆದು, #love, #Newyork ಅಂತ ಹ್ಯಾಶ್ ಟ್ಯಾಗ್ ಮಾಡಿದ್ದಾರೆ. ಜೊತೆ ಬ್ಯಾಕ್ಗ್ರೌಂಡ್ ಕೂಡ ವಿದೇಶದಂತೆ ಇರೋದ್ರಿಂದ ಸದ್ಯ ಫ್ಯಾಷನ್ ಶೋಗಾಗಿ ನ್ಯೂಯಾರ್ಕ್ಗೆ ಹೋಗಿದ್ದಾರೆಂದು ಚರ್ಚೆ ನಡೆಯುತ್ತಿದೆ.
ಶಮಾ ಸಿಕಂದರ್ ಇತ್ತೀಚೆಗೆ ಕಾಸ್ಮೆಟಿಕ್ ಸರ್ಜರಿ ಮಾಡಿಕೊಂಡಿದ್ದಾರೆಂದು ಚರ್ಚೆಯಾಗುತ್ತಿತ್ತು. ಅದ್ರೆ, ಸರ್ಜರಿ ಮಾಡಿಸಿಕೊಂಡಿಲ್ಲ. ಬದಲಾಗಿದೆ ಆಹಾರ ಹಾಗೂ ಡಯೆಟ್ನಲ್ಲಿ ಬದಲಾವಣೆ ಮಾಡಿಕೊಂಡಿರೋದಾಗಿ ಇ-ಟೈಮ್ಸ್ಗೆ ಹೇಳಿದ್ದರು. ‘‘ ಪ್ರತಿಯೊಬ್ಬರಲ್ಲೂ ವಯಸ್ಸಾಗುತ್ತಿದ್ದಂತೆ ದೈಹಿಕ ಬದಲಾವಣೆ ಆಗುತ್ತಿರುತ್ತೆದೆ ಎಂದು 39 ವರ್ಷದ ನಟಿ ಹೇಳಿದ್ದರು.
ಈ ಹಿಂದೆ ಕೂಡ ಶಮಾ ಸಿಂಕದರ್ ಹಾಟ್ ಪೋಸ್ಗಳನ್ನು ನೀಡಿದ್ದಾರೆ. ಈಕೆಯ ಬೋಲ್ಡ್ ಅವತಾರಕ್ಕೆ ಅಭಿಮಾನಿಗಳ ದಂಡೇ ಇದೆ. ‘ಯೇ ಮೇರಿ ಲೈಫ್ ಹೇ’ ಶೋ ಮೂಲಕ ಶಮಾ ಸಿಕಂದರ್ ಜನಪ್ರಿಯರಾಗಿದ್ದರು. ಬಳಿಕ ಸೈಕೋ ಹಾಲಿಕ್ ಶಾರ್ಟ್ ಮೂವಿ ಮೂಲಕನೂ ಗಮನ ಸೆಳೆದಿದ್ದರು. ಆದ್ರೀಗ ನ್ಯೂಯಾರ್ಕ್ನಲ್ಲಿ ಹ್ಯಾಟ್ ಹಿಡಿದು ಬೆತ್ತಳಾಗಿ ಸನ್ನಿ ಲಿಯೋನಿ ಕ್ಯಾಮರಾಗೆ ನೀಡಿದ್ದ ಪೋಸ್ ಅನ್ನೇ ಕಾಪಿ ಮಾಡಿ ಭಾರೀ ಚರ್ಚೆಯಲ್ಲಿದ್ದಾಳೆ.